About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

ಕನ್ನಡ ಪುಟಗಳು

ಲೇಖನಗಳು ಕವನಗಳು ಕಥೆಗಳು

ನನ್ನೊಳಗಿನ ‘ಕವಿ’ಯ ಬಗ್ಗೆ ಒಂದಿಷ್ಟು

ನಾನು ಮೊದಲು ಕವನ ಬರೆಯಲಾರಂಭಿಸಿದ್ದು ಸಂಸ್ಕೃತದಲ್ಲಿ ಎಂದರೆ ನಂಬುತ್ತೀರಾ?! ಅತೀವ ಆಸಕ್ತಿಯಿಂದ ಶಾಲೆಯಲ್ಲಿ ಮಾತ್ರವಲ್ಲ, ಹೊರಗೂ ‘ಶರ್ಮಾ ಮಾಷ್ಟ್ರ’ ಬಳಿ ಸಂಸ್ಕೃತ ಕಲಿಯುತ್ತಿದ್ದ ನಾನು ಸಂಸ್ಕೃತ ಯುವಜನೋತ್ಸವಗಳಲ್ಲಿ ಭಾಗವಹಿಸುತ್ತಿದ್ದೆ. ಅಲ್ಲಿ ‘ಸಮಸ್ಯಾ ಪೂರ್ಣಂ’ ಎಂಬೊಂದು ಸ್ಪರ್ಧೆ ಇರುತ್ತಿತ್ತು, ಶ್ಲೋಕದ ಮೊದಲ ಭಾಗವನ್ನು ಕೊಟ್ಟು ಉಳಿದದ್ದನ್ನು ನಾವು ಬರೆಯಬೇಕಿತ್ತು, ಕ್ಲಿಷ್ಟ ನಿಯಮಗಳಿಂದ ಬದ್ಧವಾದ ಕಬ್ಬಿಣದ ಕಡಲೆಯಾದ ಸಂಸ್ಕೃತದಲ್ಲಿ ಸಮಸ್ಯೆಯನ್ನು ಪೂರ್ಣ ಮಾಡುವುದು ಸುಲಭವಾಗಿರಲಿಲ್ಲ, ಆದರೆ ನಿಯಮಿತವಾದ ಅಭ್ಯಾಸದಿಂದ ಮನಸ್ಸು-ಲೇಖನಿ ಎರಡೂ ಹರಿಯುತ್ತಿತ್ತು. ಆಗ ಒಂದು ಬಾರಿ ಒಂದೇ ಸಮಸ್ಯೆಗೆ ೩೦ಕ್ಕೂ ಹೆಚ್ಚು ಉತ್ತರಗಳನ್ನು ಬರೆದದ್ದಿದೆ.

ಅದಾದ ಮೇಲೆ ಹೈಸ್ಕೂಲಿನಲ್ಲಿ ಕದ್ದು ಮುಚ್ಚಿ ಹಲವಾರು ಚುಟುಕಗಳನ್ನು ಬರೆದಿದ್ದೆ, ಯಾರಿಗೂ ಸಿಗದಂತೆ ಇಟ್ಟಿದ್ದೆ ಮನೆಯಲ್ಲಿ (ಯಾಕೆ ಎಂದು ವಿವರಿಸಿ ಹೇಳಬೇಕಿಲ್ಲ ತಾನೇ? :-)). ಆದರೆ ಒಂದು ದಿನ ಅಮ್ಮನ ಕೈಗೆ ಸಿಕ್ಕಿ ನನಗೆ ಅವಮಾನವಾದಂತಾಯಿತು, ಅವೆಲ್ಲಾ ಬೆಂಕಿಗೆ ಹಾಕಿಬಿಟ್ಟೆ! ಛೆ, ಈಗಿದ್ದಿದ್ದರೆ ಓದಿ ನಕ್ಕು ಮನಸ್ಸು ಹಗುರ ಮಾಡಿಕೊಳ್ಳಬಹುದಿತ್ತು, ಆದರೆ ಸಾಧ್ಯವಿಲ್ಲ :-(

ಅದಾದ ಬಳಿಕ ಓದು-ಚಿಂತನೆಯಲ್ಲಿ ಮಗ್ನನಾದ ನಾನು ಅದೆಷ್ಟೋ ಸಮಯ ಕವನ ಕವಿತೆ ಬರೆಯುವ ಗೋಜಿಗೇ ಹೋಗಿರಲಿಲ್ಲ. ಆದರೆ ಇಂಜಿನಿಯರಿಂಗ್ ಕೊನೆಯ ವರುಷದಲ್ಲಿ ನನ್ನ ಸಹಪಾಠಿ ಗೆಳೆಯ ಮಹಾಬಲೇಶ್ವರ ಮಯ್ಯ ‘ಕಾಲೇಜು ಪತ್ರಿಕೆಗೆ ಏನಾದರೂ ಬರೆಯುತ್ತೀಯಾ?’ ಎಂದು ಕೇಳಿದಾಗ ಯಾಕೋ ಮನಸ್ಸು ಗರಿಗೆದರಿತು. ಏನೋ ಒಂದಷ್ಟು ಕವನ, ಕಥೆ ಗೀಚಿದೆ. ಆದರೆ ಚಟ ಪುನಃ ಹತ್ತಿತು ನೋಡಿ!

ಮುಂದಿನ ಕೆಲವು ತಿಂಗಳುಗಳಲ್ಲಿ ಬರೆಯಲು ಸಾಕಷ್ಟು ಸಮಯ ಕೂಡಿ ಬಂತು. ಇನ್ಫೋಸಿಸ್‍ನಲ್ಲಿ ಕ್ಯಾಂಪಸ್ ಇಂಟರ್‍ವ್ಯೂ ಮೂಲಕ ಕೆಲಸ ಸಿಕ್ಕಿತ್ತು, ಆದರೆ ಉದ್ಯಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರಿಂದ ನನ್ನದೂ ಸೇರಿಸಿ ಅನೇಕರ ಸೇರುವ ದಿನಾಂಕವನ್ನು ಅನಿರ್ದಿಷ್ಟಾವಧಿ ಕಾಲ ಮುಂದೂಡಿದ್ದರು. ಕಾಲೇಜು ಮುಗಿಸಿ ಕೆಲಸ ಸೇರುವಾಗ ಅನೇಕ ತಿಂಗಳುಗಳೇ ಕಳೆದು ಹೋಗಿದ್ದುವು, ಈ ಅವಧಿಯಲ್ಲಿ ಲೇಖನಿ (ಕೀ ಬೋರ್ಡ್ ಎನ್ನಲು ಮನಸ್ಸೇ ಬರುವುದಿಲ್ಲ ನೋಡಿ!) ಸುಮ್ಮನೆ ಕೂರಲಿಲ್ಲ. ಆದರೆ ಕೆಲಸ ಸೇರಿದ ಬಳಿಕ ಕುಂಠಿತವಾಗುತ್ತಾ ಸಾಗಿದ ಈ ಹರಿವು ಈಗ ಹೆಚ್ಚು ಕಡಿಮೆ ನಿಂತೇ ಹೋಗಿದೆ. ಮುಂದಿನ ದಿನಗಳಲ್ಲಿ ಪುನಃ ಇದಕ್ಕೆ ಜೀವ ಬರುವುದೋ ನೋಡಬೇಕು.

ಬರೆದ ಕವನಗಳ ಬಗ್ಗೆ ಒಂದಿಷ್ಟು

ಮೊದಲ ಭಾಷೆಯಾಗಿ ಸಂಸ್ಕೃತವನ್ನು ಕಲಿತ ನಾನು ದುರದೃಷ್ಟವಶಾತ್ ಕನ್ನಡ ಭಾಷೆಯನ್ನು ಆಳವಾಗಿ ಅಭ್ಯಸಿಸಲಿಲ್ಲ. ಆದರೆ ಅನೇಕ ವರ್ಷ ಕನ್ನಡ ಮಾಧ್ಯಮದಲ್ಲಿ ಓದಿದ್ದರಿಂದ ಸಾಮಾನ್ಯ ಕನ್ನಡದ ಸಹವಾಸ ಉತ್ತಮ ಮಟ್ಟದಲ್ಲಿಯೇ ಇತ್ತು ಎನ್ನಲಡ್ಡಿಯಿಲ್ಲ. ನನ್ನ ಕವನಗಳಲ್ಲಿ ಬಳಕೆ ಮಾಡಿದ್ದು ಸಾಮಾನ್ಯ ಕನ್ನಡ, ಇಲ್ಲಿ ಭಾವಕ್ಕೆ ಹಾಗೂ ಅರ್ಥಕ್ಕೆ ಹೆಚ್ಚು ಪ್ರಾಧಾನ್ಯತೆ. ‘ಶೀರ್ಷಿಕೆ’ಗೆ ನಾನು ಬಹಳ ಹೆಚ್ಚು ಮಹತ್ವ ಕೊಟ್ಟಿದ್ದೇನೆ.

ಬರೆದ ಕವನಗಳನ್ನು ಈ-ಮೈಲ್ ಮುಖಾಂತರ ಮಿತ್ರರಿಗೆ, ಹಳೇ ಸಹಪಾಠಿಗಳಿಗೆ, ಕೆಲವು ಬಂಧುಗಳಿಗೆ ಕಳುಹಿಸುತ್ತಿದ್ದೆ. ದೊರೆತ ಕೆಲವು ಉತ್ತಮ ಪ್ರತಿಕ್ರಿಯೆಗಳನ್ನು ನೋಡಿ ಅಂತರ್ಜಾಲದಲ್ಲಿ ಪ್ರಕಟಿಸುವ ಮನಸ್ಸು ಮಾಡಿದೆ, ಯಾಹೂ ಅಂತರ್ಜಾಲ ತಾಣದಲ್ಲಿ ನನ್ನದೇ ತಾಣವನ್ನು ರಚಿಸಿ ಹಲವು ವರುಷಗಳ ಕಾಲ ಇಟ್ಟುಕೊಂಡಿದ್ದೆ, ಕೊನೆಗೆ ಅದನ್ನು ಅವರು ಮುಚ್ಚಿ ಹಾಕಿದರು. ಈಗ ಅಂತೂ ಇಂತೂ ಸಮಯ ಹೊಂದಿಸಿ ಬ್ಲಾಗಿಗೇರಿಸುತ್ತಿದ್ದೇನೆ. ನಿಮ್ಮ ಅನಿಸಿಕೆಗಳನ್ನು ಬ್ಲಾಗಿನಲ್ಲಿ ಹಂಚಿಕೊಂಡರೆ ಖುಷಿ ಪಡುತ್ತೇನೆ.
 
ಪ್ರೀತಿ-ಪ್ರೇಮ-ಪ್ರಣಯ
ಸತ್ಯಾನ್ವೇಷಣೆ
ಇತರೆ

3 comments:

ISHWARA BHAT K said...

ಕವನಗಳು ಚೆನ್ನಾಗಿದೆ .

Ashwini said...

neenu kavana bareyuthi endu gothiralalli. Ninna innodu aayamada parichayavayithu. Kavanagalu chennagive. Adannu ethi hidi(keep it up)!!!

D.Balakrishna Shastri said...

chennagide

Post a Comment