೦೮-ಮೇ-೨೦೦೨,
ಬೆಂಗಳೂರು.
ಅವರವರ ಹಾದಿ
-------------------
ಒಬ್ಬ ಸೇರಿದ ಮೌನದ ಗೋರಿ,
ಇನ್ನೊಬ್ಬ ತುಳಿದ ಬಂಡಾಯದ ದಾರಿ.
ಇಬ್ಬರೂ ಮಾಡಿದ್ದು ಅನ್ವೇಷಣೆ,
ಕತ್ತಲು ಬೆಳಕಿನ ವಿಶ್ಲೇಷಣೆ!
ದೃಢವಾಗಿ ಹಾಡುತ್ತಾ ಧ್ಯೇಯದ ಗಾನ,
ಮುಗಿಸಿದರು ತಮ್ಮ ಅನಿರ್ದಿಷ್ಟ ಪಯಣ.
ವಿರಮಿಸಿದರು ಇಬ್ಬರೂ ಒಂದೇ ಗುರಿಯ ಸೇರಿ,
ಆಸ್ವಾದಿಸಿದರು ಒಂದಿಗೇ ಆನಂದ ಲಹರಿ!
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment