About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

ಕನ್ನಡ ಪುಟಗಳು

ಲೇಖನಗಳು ಕವನಗಳು ಕಥೆಗಳು

ನಾನೂ ಒಬ್ಬ ಕಥೆಗಾರನೇ?

ಇಂಜಿನಿಯರಿಂಗ್ ಕೊನೆಯ ವರುಷದಲ್ಲಿ ನನ್ನ ಸಹಪಾಠಿ ಗೆಳೆಯ ಮಹಾಬಲೇಶ್ವರ ಮಯ್ಯ “ನಮ್ಮ ಕಾಲೇಜು ಪತ್ರಿಕೆಗೆ ಏನಾದರೂ ಬರೆಯುತ್ತೀಯಾ?” ಎಂದು ಕೇಳಿದಾಗ ಕೆಲವು ಕವನ-ಕಥೆಗಳನ್ನು ಗೀಚಿದ್ದೆ. ಅದರಲ್ಲಿ ಕಥೆ ಬರೆಯುವುದು ಮೊದಲ ಅನುಭವವಾಗಿತ್ತು. ವಿಮರ್ಶೆ ಮಾಡಲು, ತಿದ್ದುಪಡಿ ಮಾಡಲು ಯಾರೂ ಅನುಭವಸ್ಥರು ಇಲ್ಲ, ಲೇಖನಗಳ ಅಭಾವದಿಂದಲೋ ಏನೋ, ನಾನು ಕೊಟ್ಟಿದ್ದೆಲ್ಲಾ ಹಾಗೆಯೇ ಪ್ರಕಟವಾಯಿತು ಕೂಡ :-)

ಕಾಲೇಜು ಪತ್ರಿಕೆಗೆ ಕೊಟ್ಟದ್ದು ಎರಡೋ, ಮೂರೋ ಕಥೆಗಳು. ಆದರೆ ಸ್ಫೂರ್ತಿಯ ಸೆಲೆ ಬತ್ತಿರಲಿಲ್ಲ ನೋಡಿ! ಬರೆದೆ, ಮತ್ತೂ ಒಂದಷ್ಟು. ಆದರೆ ನಿಧಾನವಾಗಿ ಬರತೊಡಗಿದ ಪ್ರತಿಕ್ರಿಯೆ ಏನೆಂದರೆ “ನಿನ್ನ ಕವಿತೆಗಳು ಚೆನ್ನಾಗಿವೆ” ಎಂದು; ಕಥೆಗಳ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ/ಪ್ರೋತ್ಸಾಹ ಕಂಡುಬರಲಿಲ್ಲ. ಹೀಗಾಗಿ ಅಲ್ಲಿಗೇ ಅದಕ್ಕೆ ತಿಲಾಂಜಲಿಯಿತ್ತೆ. ಈಗ ಒಂದು ದಶಕಕ್ಕೂ ಹೆಚ್ಚು ಕಾಲ ಕಳೆದ ಬಳಿಕ ಆ ಕಥೆಗಳನ್ನು ಓದುವಾಗ ಕೆಲವು ಕೊರತೆಗಳು ನನಗೇ ಎದ್ದು ಕಾಣುತ್ತವೆ, ಹೆಚ್ಚು ವ್ಯಕ್ತಿ-ಸಂದರ್ಭಗಳನ್ನು ಸೃಷ್ಟಿಸಿ ನೀಳ್ಗತೆಯನ್ನಾಗಿ ಮಾಡಿದ್ದರೆ ಕೆಲವು ಹೆಚ್ಚು ಪರಿಣಾಮಕಾರಿ/ಆಸಕ್ತಿದಾಯಕವಾಗಿ ಮೂಡಿಬರಬಹುದು ಎಂದು ತೋರುತ್ತಿದೆ. ಸಮಯ ಸಿಕ್ಕಿದಾಗ ಮಾರ್ಪಾಡು ಮಾಡಲು ಯತ್ನಿಸುತ್ತೇನೆ.

ಏನೇ ಇರಲಿ, ಆ ಸಮಯದಲ್ಲಿ ಬರೆದ ಕಥೆಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಆಸಕ್ತಿಯಿದ್ದಲ್ಲಿ ಓದಿ. ನಿಮ್ಮ ಅನಿಸಿಕೆಗಳನ್ನು ಬ್ಲಾಗಿನಲ್ಲಿ ಹಂಚಿಕೊಂಡರೆ ಖುಷಿ ಪಡುತ್ತೇನೆ.