೨೯-ಎಪ್ರಿಲ್-೨೦೦೨,
ಬೆಂಗಳೂರು.
ಅತೃಪ್ತಿ
-------------------
ಕೊನೆಗೂ ಬಂದಳವಳು ನನ್ನ ಕರೆಗೆ ಓಗೊಟ್ಟು,
ಸಂತೈಸಿದಳು ನನ್ನನು ಸಿಹಿಯಾದ ಮುತ್ತನು ಕೊಟ್ಟು.
ಹೇಗೆ ತಡೆದೆನೋ ಇಷ್ಟು ದಿನ ವಿರಹದ ಬೇಗೆಯ?!
ಈಗ ತಂಪಾಯಿತು ಮನ, ಎಂಥ ಸುಂದರ ಸಮಯ!
ಅಗಲಿದ ನೋವಿನಲಿ ಮಾಡಿದ ತಪ್ಪುಗಳ ಮನ್ನಿಸಿ,
ನಗೆಯಾಡಿದಳು ನನ್ನವಳು ಪ್ರೀತಿಯ ಸೂಸಿ.
ಆಸ್ವಾದಿಸಿದೆನು ಆ ಪ್ರೀತಿಯ ಸುಮಧುರ ಪರಿಮಳ,
ಕರಗಿಯೇ ಹೋಯಿತು ನನ್ನ ಹೃದಯ ಕೋಮಲ.
ಆದರೂ ಕೊನೆಗೆ ಪರಿತಪಿಸಿತು ಮನಸು,
ಯಾಕಾಗಲಿಲ್ಲ ಈ ಕನಸು ನನಸು?!!
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment