೧೪-ಫೆಬ್ರವರಿ-೨೦೦೨,
ಕಾಸರಗೋಡು.
ಕಾಲೇಜಿನಲ್ಲಿ ಫೆಬ್ರವರಿ ೧೪
-----------------
ಕಂಡೆ ನಾ ಇಂದು ನನ್ನ ಕನಸಿನ ಹುಡುಗಿ
ಕುಡಿನೋಟ ಬೀರಿದಳು ನನ್ನತ್ತ ಆ ಬೆಡಗಿ
ನೋಡಿಯೇ ಬಿಟ್ಟೆ ಆ ಮುಖದಲ್ಲಿದ್ದ ಲಜ್ಜೆ
ಅಬ್ಬ! ಇಡಬಹುದು ಭಯವಿಲ್ಲದೇ ಮುಂದಿನ ಹೆಜ್ಜೆ
ಸಂತಸದಿ ಹೆಚ್ಚಾಯಿತು ಹೃದಯದ ಬಡಿತ
ಏರಿತು ಮನದ ಮಾತನು ಹೇಳುವ ತುಡಿತ
ಧೈರ್ಯದಿ ಹೋದೆ ತುಸು ಸಮೀಪ
ಹೇಳಿದೆ ನನ್ನಯ ಪ್ರಣಯ ಪ್ರಲಾಪ
ಕೆಂಪಾಯಿತು ಕನ್ಯೆಯ ಸೇಬುಗೆನ್ನೆ
ಅಂತೂ ಆದಳು ಅವಳು ನನ್ನ ಮನದನ್ನೆ
ಸುತ್ತಾಡಿದೆವು ದಿನಪೂರ್ತಿ ಹಳ್ಳ, ದಿನ್ನೆ
ನಾಳೆಯ ಪರೀಕ್ಷೆಯಲ್ಲಿ ಖಂಡಿತಾ ಸೊನ್ನೆ
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment