೦೬-ಮಾರ್ಚ್-೨೦೦೨,
ಬೆಂಗಳೂರು.
ಸಂಗಾತಿ
---------------
ಇನ್ನೂ ನೆನಪಿದೆ ನೀ ಕೊಟ್ಟ ಮೊದಲ ಚುಂಬನ,
ನೆನೆದರೆ ಈಗಲೂ ರೋಮಾಂಚನ.
ಹೇಗೆ ಮರೆಯಲಿ ಆ ಮೊದಲ ಆಲಿಂಗನ?
ಆಗ ಅನುಭವಿಸಿದ ನವಿರಾದ ಕಂಪನ.
ರಂಗೇರಿದ ನಿನ್ನಯ ಸುಂದರ ಕದಪು,
ಮಿಂಚಿನ ಕಣ್ಣಿನ ಅದ್ಭುತ ಬೆಳಕು,
ನೀನಾಡಿದ ಒಂದೊಂದು ಮಾತು,
ನಿಜಕ್ಕೂ ಒಂದು ಅಮೂಲ್ಯವಾದ ನೆನಪು.
ಆ ಸುಂದರ ಸಂಜೆಯ ಹೊತ್ತು,
ನಾ ಆದೆನು ನಿನ್ನ ಸೊತ್ತು.
ಅಂದು ನಾವಾಡಿದ ತುಂಟಾಟ,
ಈಗ ಒಂದು ಸುಂದರ ಹಿನ್ನೋಟ.
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment