About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Saturday, September 1, 2001

ಸಂಗಾತಿ


ಸೆಪ್ಟೆಂಬರ್ ೨೦೦೧,
ಮೈಸೂರು.
ಸಂಗಾತಿ
************

ದಿನವೆಲ್ಲಾ ದುಗುಡದಲ್ಲೇ ಕಳೆದಿದ್ದ ಅವನು ಅವಳ ಮುಖ ನೋಡುತ್ತಲೇ ಉಲ್ಲಸಿತನಾದ. ತಾನು ದಿನವೆಲ್ಲಾ ಅನುಭವಿಸಿದ ಮಾನಸಿಕ ಸಂಘರ್ಷಗಳನ್ನು ಅವಳ ಮುಂದೆ ತೋಡಿಕೊಂಡು ಸಮಾಧಾನ ಪಡೆಯುವೆನೆಂಬ ನಂಬಿಕೆಯೇ ಇದಕ್ಕೆ ಕಾರಣ. ಎಂದಿನಂತೆ ಅವಳ ಮುಂದಿದ್ದ ಕುರ್ಚಿಯಲ್ಲಿ ಕುಳಿತುಕೊಂಡ. ಅವಳ ಮುಖದಲ್ಲಿದ್ದ ಪ್ರಶಾಂತತೆ ಅವನನ್ನು ಆಕರ್ಷಿಸಿತು. ಇದೇ ಪ್ರಶಾಂತತೆ ಅವನನ್ನು ಸೂಜಿಗಲ್ಲಿನಂತೆ ಅವಳತ್ತ ಸೆಳೆದಿದ್ದು. ಅವಳನ್ನು ನೋಡುತ್ತಾ ನೋಡುತ್ತಾ ಅವ್ಯಕ್ತವಾದ ಆನಂದದಲ್ಲಿ ಮುಳುಗಿಹೊಗುವುದೆಂದರೆ ಅವನಿಗೆ ತುಂಬಾ ಇಷ್ಟ. ಸ್ವಲ್ಪ ಹೊತ್ತು ಮೌನವಾಗಿದ್ದ ಅವನು ಮಾತಿಗಾರಂಭಿಸಿದ. ತನ್ನ ದುಗುಡವನ್ನೆಲ್ಲಾ ಅವಳ ಮುಂದೆ ತೋಡಿಕೊಂಡ ಅವನು ಬಳಿಕ ತಾನೂ ಅವಳಂತೆ ಮೌನವಾಗಿದ್ದುಬಿಟ್ಟ. ಅವಳ ಉತ್ತರವನ್ನು ಆತ ಅಪೇಕ್ಷಿಸಲೂ ಇಲ್ಲ. ಆದರೂ ಅವಳನ್ನು ತನ್ನ ಜೀವನದ ಒಂದು ಅವಿಭಾಜ್ಯ ಮಧುರ ಅಂಗವೆಂದು ಅವನು ಭಾವಿಸಿದ್ದ. ಸ್ವಲ್ಪ ಹೊತ್ತು ಹಾಗೆಯೇ ಕುಳಿತು ಅವಳನ್ನು ತದೇಕಚಿತ್ತದಿಂದ ನೋಡಿದ ಅವನು ಬಳಿಕ ಒಂದು ನಿಟ್ಟುಸಿರಿನೊಂದಿಗೆ ತನ್ನ ಕನಸಿನ ಕನ್ಯೆಯ ಫೋಟೋವನ್ನು ತೆಗೆದುಕೊಂಡು ಭದ್ರವಾಗಿ ಸೂಟ್‍ಕೇಸಿನಲ್ಲಿ ಇರಿಸಿದ, ತನ್ನ ರೂಂ‍ಮೇಟ್ ಬರುವ ಸಮಯವಾಯಿತೆಂದು ತಿಳಿದು.

ಕೃಷ್ಣ ಶಾಸ್ತ್ರಿ ಸಿ.

0 comments:

Post a Comment