About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Thursday, May 24, 2012

ಕೆಲವು ಸಸ್ಯಾಹಾರಿಗಳೇಕೆ ಮಾಂಸಾಹಾರದ ಬಗ್ಗೆ ಟೀಕೆ ಮಾಡುವುದಿಲ್ಲ?


‘ನಾನು ಇತರರ ಆಹಾರಕ್ರಮಗಳ ಬಗ್ಗೆ ಟೀಕೆ ಮಾಡುವುದಿಲ್ಲ’ ಎಂದು ಅನೇಕರು ಹೇಳುವುದನ್ನು ನೋಡಿದ್ದೇನೆ. ಸಸ್ಯಾಹಾರಿಗಳು ಮಾಂಸಾಹಾರಿಗಳ ಬಗ್ಗೆ ಮಾತನಾಡುವಾಗ ಈ ಮಾತುಗಳು ಅಲ್ಲಲ್ಲಿ ಕೇಳಿಬರುತ್ತದೆ. ಈ ಬಗ್ಗೆ ನನ್ನ ಭಾವನೆಗಳನ್ನು ಇಲ್ಲಿ ಹರಿಯಬಿಡುತ್ತಿದ್ದೇನೆ.

ಜಾಗ್ರತೆಯಾಗಿ ನೋಡಿದರೆ ಈ ಧೋರಣೆಯ ಹಿಂದೆ ಎರಡು ರೀತಿಯ ತರ್ಕಗಳಿರುವುದನ್ನು ನಾವು ಕಾಣಬಹುದು:

೧) ಏನು ತಿನ್ನಬೇಕು ಎನ್ನುವುದು ಅವರ ವೈಯಕ್ತಿಕ ವಿಷಯ, ಅದು ಅವರ ಹಕ್ಕು. ಅವರ ಹಕ್ಕಿನ ವಿರುದ್ಧ ನಾನು ಮಾತನಾಡುವುದಿಲ್ಲ

೨) ಪ್ರಸ್ತುತ ಬಹುಮತ ಹಾಗೂ ಕಾನೂನು ನನ್ನ ವಿರುದ್ಧ ಇದೆ, ಹೀಗಾಗಿ ನಾನು ಅಸಹಾಯಕ, ಅದಕ್ಕೆ ಟೀಕೆ ಮಾಡುವುದಿಲ್ಲ

ಈಗ ಒಮ್ಮೆ ಮಾನವ ಹಕ್ಕುಗಳ ಬಗ್ಗೆ ಗಮನ ಹರಿಸೋಣವಂತೆ. ನಿಮ್ಮ ಮನೆಯ ಪಕ್ಕದಲ್ಲಿ ಒಬ್ಬರು ಕೆಲಸದವರಿಗೆ ಹೊಡೆದು ಬಡಿದು ಮಾಡುತ್ತಿದ್ದರೆ ‘ಅದು ಅವರ ವೈಯಕ್ತಿಕ ವಿಷಯ, ನಾನು ತಲೆಹಾಕುವುದಿಲ್ಲ’ ಎಂದು ಕೂರುತ್ತೀರಾ? ಒಂದು ಶತಮಾನ ಹಿಂದೆ ನೀವು ಹಾಗೆ ಸುಮ್ಮನೆ ಕೂತಲ್ಲಿ ಯಾರೂ ಏನೂ ಅನ್ನುತ್ತಿರಲಿಲ್ಲವೇನೋ. ಎರಡು ಶತಮಾನ ಹಿಂದೆ ಹೋದರೆ ಕೆಲಸದವರನ್ನು ಕೊಂದರೂ ನಡೆಯುತ್ತಿತ್ತೇನೋ. ಆದರೆ ಈಗ ‘ಅದು ಮಾನವ ಹಕ್ಕುಗಳ ವಿರುದ್ಧ, ಹೀಗಾಗಿ ನೀವು ತಡೆಯಬೇಕು ಇಲ್ಲಾ ದೂರು ಕೊಡಬೇಕು’ ಎನ್ನುವವರ ಸಂಖ್ಯೆಯೇ ಹೆಚ್ಚು. ಇದು ವಿಕಸನ, ಪ್ರಗತಿ ಎಂದು ಎಲ್ಲರೂ ಒಪ್ಪಿಕೊಳ್ಳುವ ಸಂಗತಿ.

ಅಂತೆಯೇ ಈ ಪ್ರಪಂಚದಲ್ಲಿ ಇರುವುದು ಮನುಷ್ಯರು ಮಾತ್ರವಲ್ಲ, ಪ್ರಾಣಿಗಳೂ ಇವೆ. ಮನುಷ್ಯರಿಗೆ ಮಾತ್ರ ಅಲ್ಲ ‘ಹಕ್ಕು’ ಇರುವುದು, ಪ್ರಾಣಿಗಳಿಗೂ ಹಕ್ಕಿದೆ. ಪ್ರಾಣಿಗಳ ಹಕ್ಕು ಎಷ್ಟು ಎಂಬುದು ತುಸು ಕ್ಲಿಷ್ಟಕರವಾದ ಹಾಗೂ ವಿವಾದಾತ್ಮಕವಾದ ವಿಷಯವಾಗಿರಬಹುದು, ಆದರೆ ಒಬ್ಬರು ಪ್ರಾಣಿಗಳ ಪರವಾಗಿ ನಿಂತು ಅವುಗಳ ಹಕ್ಕುಗಳಿಗಾಗಿ ಹೋರಾಡಿದರೆ ಅದರಲ್ಲಿ ತಪ್ಪೇನು, ಹೇಳಿ? ಇದು ವಿಕಸನದ ಹಾಗೂ ಪ್ರಗತಿಯ ಮತ್ತೊಂದು ಹಂತ, ಅಷ್ಟೆ, ಅಲ್ಲವೇ?

ಈಗ ಪುನಃ ಮೊದಲು ಹೇಳಿದ ಎರಡು ತರ್ಕಗಳಿಗೆ ಬರೋಣ. ವೈಯಕ್ತಿಕವಾಗಿ ನಾನು ಎರಡನೇ ವಿಭಾಗಕ್ಕೆ ಸೇರಿದವನು. ಮಾಂಸಾಹಾರದ ಹಾಗೂ ಇತರ ಅನೇಕ ರೀತಿಯಲ್ಲಿ ಪ್ರಾಣಿಗಳ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧ ಮಾತನಾಡಲು ಖಂಡಿತಾ ನನಗೆ ನೈತಿಕವಾದ ಹಕ್ಕಿದೆ ಎಂದು ಬಲವಾಗಿ ನಂಬಿದವನು ನಾನು. ಮಾತ್ರವಲ್ಲ, ಇದರಲ್ಲಿ ಪ್ರಶ್ನೆ ಬರುವುದು ಬರೀ ಪ್ರಾಣಿಗಳ ಹಕ್ಕಿನ ಬಗ್ಗೆ ಮಾತ್ರ ಅಲ್ಲ, ಪರಿಸರದ ಉಳಿವು ಹಾಗೂ ನಮ್ಮದೇ ಭವಿಷ್ಯದ ಬಗ್ಗೆ ಕೂಡ. ಆದರೆ ಅದಕ್ಕಾಗಿ ಸ್ವಂತ ಜೀವನವನ್ನೇ ತ್ಯಾಗ ಮಾಡುವಷ್ಟರ ಮಟ್ಟಿಗೆ ಮನಸ್ಸು ಇನ್ನೂ ನಿಸ್ವಾರ್ಥವಾಗಿಲ್ಲ, ಹೀಗಾಗಿ ಅನೇಕ ಬಾರಿ ಸುಮ್ಮನಿದ್ದುಬಿಡುತ್ತೇನೆ. ಇದು ಅಸಹಾಯಕತೆಯೇ ಹೊರತು ಇತರರ ಹಕ್ಕಿನ ಮೇಲಿರುವ ಗೌರವ ಖಂಡಿತಾ ಅಲ್ಲ.

ಇತರರ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಅಸಹಾಯಕತೆ ಭಾಸವಾದರೂ ಕೂಡ ವೈಯಕ್ತಿಕ ನೆಲೆಯಲ್ಲಿ ವೀಗನ್ ಆಗಿದ್ದೇನೆ, ಇದು ಮನಸ್ಸಿಗೆ ತೃಪ್ತಿ ತಂದಿದೆ, ಇನ್ನುಳಿದಂತೆ ಒಂದಷ್ಟು ಬರೆಯುತ್ತೇನೆ, ಈಗ ಮಾಡುತ್ತಿರುವಂತೆ. ಇನ್ನುಳಿದಂತೆ ಆಗೊಮ್ಮೆ ಈಗೊಮ್ಮೆ ಏನಾದರೂ ಚಿಕ್ಕ ಪುಟ್ಟ ಸಂಗತಿಗಳನ್ನು ಮಾಡಲು ಯತ್ನಿಸುತ್ತಿರುತ್ತೇನೆ. ಆದರೆ ತನು-ಮನ-ಧನವನ್ನು ಧಾರೆಯೆರೆದು ಮೂಕಪ್ರಾಣಿಗಳಿಗಾಗಿ ಹೋರಾಡುವವರೆಷ್ಟೋ ಇದ್ದಾರೆ. ನನ್ನ ದೃಷ್ಟಿಯಲ್ಲಿ ಅಂಥವರು ಯಾವ ಸ್ವಾತಂತ್ರ್ಯ ಹೋರಾಟಗಾರರಿಗೂ ಯಾವ ಸಂತರಿಗೂ ಕಮ್ಮಿಯಲ್ಲ.

ನೀವು ಯಾವ ವಿಭಾಗಕ್ಕೆ ಸೇರಿದ್ದೀರಿ?

ಸಮಯ ಸಿಕ್ಕಿದಲ್ಲಿ ಸಸ್ಯಾಹಾರ, ವೀಗನಿಸಂ, ಪ್ರಾಣಿಗಳ ಮೇಲೆ ನಡೆಯುವ ದೌರ್ಜನ್ಯ, ಪ್ರಾಣಿಗಳ ಹಕ್ಕು ಇತ್ಯಾದಿಗಳ ಬಗ್ಗೆ ನಾನು ಬರೆದ ಇನ್ನು ಕೆಲವು ಲೇಖನಗಳನ್ನೂ ಓದಿ ಎಂದು ವಿನಂತಿ:
ದನ, ನಮ್ಮ ಗುಲಾಮ ದೇವರು! (ಲೇಖನ ಹಾಗೂ ವಿಸ್ತಾರವಾದ ಪ್ರಶ್ನೋತ್ತರಗಳು)

ನಿಮ್ಮ ಪ್ರತಿಕ್ರಿಯೆ, ಟೀಕೆಗಳಿಗೆ ಸದಾ ಸ್ವಾಗತವಿದೆ.

10 comments:

Anonymous said...

ದೇಶ, ಕಾಲಗಳ ವಿಭಿನ್ನ `ಸಾಮಾಜಿಕ ಒಪ್ಪಂದ'ದ ಅನ್ವಯ ನಾನು ಇನ್ನೊಬ್ಬರ ಆಹಾರ ಸ್ವಾತಂತ್ರ್ಯವನ್ನು ಖಂಡಿತವಾಗಿಯೂ ಗೌರವಿಸುತ್ತೇನೆ. ಆ ನೆಲೆಯಲ್ಲೇ ಸಾಕು ಪ್ರಾಣಿಗಳಲ್ಲಿ ದುಡಿಮೆಯ ಪ್ರಾಣಿ ಮತ್ತು ಆಹಾರದ ಪ್ರಾಣಿ (ಪಕ್ಷಿಯೂ ಸೇರುತ್ತದೆ)ಎಂಬ ವಿಂಗಡಣೆ, ಅದು ಕಾಲಕಾಲಕ್ಕೆ ಅನಿವಾರ್ಯವಾಗಿ (ಶಾಸನಾತ್ಮಕವಾಗಿ ಅಲ್ಲ) ಪಡೆದ ತಿದ್ದುಪಡಿಗಳನ್ನು ಒಪ್ಪಿಕೊಳ್ಳುತ್ತೇನೆ. ಇಲ್ಲವಾದರೆ ಜೀವಿ ಪರಿಸರದಲ್ಲಿ ಸಹಜ ಆಹಾರ ಸರಪಳಿಯನ್ನು ಎಂದೋ ದುರಾಕ್ರಮಣ ಮಾಡಿ (ಪ್ರತ್ಯಕ್ಷ ಮತ್ತು ಪರೋಕ್ಷ ದಾರಿಗಳಲ್ಲಿ) ವಶಪಡಿಸಿಕೊಂಡು ಕೆಟ್ಟದಾಗಿ ನಿಯಂತ್ರಿಸುತ್ತಿರುವ ದೇಶಗಳ ಸ್ಥಿತಿ ಇನ್ನಷ್ಟೂ ಕೆಟ್ಟು ಹೋಗುವುದರಲ್ಲಿ ಸಂಶಯವೇ ಇಲ್ಲ. ಇದೆಲ್ಲಕ್ಕೂ ಒಂದೇ ಉದಾಹರಣೆ - ಗೋ ಹತ್ಯೆ ಮತ್ತು ಸಂರಕ್ಷಣೆ.(ವಿಸ್ತರಣೆಗೆ ನನ್ನ ಜಾಲತಾಣದ(www.athreebook.com)ಹಳೇ ಪುಟಗಳನ್ನು ನೋಡಬಹುದು)
ಅಶೋಕವರ್ಧನ

Muralikrishna Pattaje said...

All vegans will be opposing the killing of animals. When even a small scratch hurts us, it is difficult to think of pain of death. but this will apply to plants as well eventually. We can't sit w/o eating. We have to just follow the great Geetha, where Krishna says to offer him "Patra, Pushpa, Phalam & Thoyam" & then eat them. I am not sure if "mamsa, madya" offered becomes pure (no papa) as Bedara Kannappa did.

Very very difficlut situation Krishna Shastry !

Murali

Anonymous said...

Torturing animals and killing annimals for food are two diffrant issues....This applies even erasing vegitation and using vegitation for food and other necessitis..But this can be told to the people who do not have ego problem or inferiority complex

Lakshmi said...

Most vegetarians consider it a moral imperative to oppose meat eating, but fail to consider the rights of plants. It is easy to anthropomorphize animals but as science progresses and our understanding of plants increases, (http://opinionator.blogs.nytimes.com/2012/04/28/if-peas-can-talk-should-we-eat-them/)eating plants would seem just as unethical as meat eating.

I think balancing my needs and wants with others on this planet and doing the best I can to propagate the survival of all species is what I can live with. Here's another article that might be of interest http://www.nytimes.com/2012/05/06/magazine/the-ethicist-contest-winner-give-thanks-for-meat.html?_r=1

ಕೃಷ್ಣ ಶಾಸ್ತ್ರಿ - Krishna Shastry said...

@Lakshmi: It is sad that some people refer to these kinds of articles and conveniently turn blind eyes on cruelty on animals which doesn't need any proof. Even that is easy, isn't it? i.e. pointing at such articles and happily continue torturing animals.

Lets keep aside these articles and use common sense for a moment. It is quite understandable that science explores to what extent plants can "live life"; but that doesn't mean that plants experience pain. Pain is a unique sensation given by nature for specific purposes; plants are different kinds of living beings that do not need such sensation for day to day purposes.

ಕೃಷ್ಣ ಶಾಸ್ತ್ರಿ - Krishna Shastry said...

@Lakshmi: One more point. I don't think any truly compassionate person would say that killing plants is perfectly okay. It is not just pain that matters, taking away life is also an important issue because by doing that one is taking away its right to survive and evolve.

But animals (including us) don't have power to absorb energy directly from inert materials, that's how nature has built us. And plants generally are plenty in number, so "killing" doesn't really affect their evolution much. Since they don't have "pain", it seems fairly okay to embrace them as our energy source instead of animals.

Ethical meat is a big myth - leaving out few exceptions, it can materialize only in theories, not in practice. That's the hard truth, and we should accept the fact that meat eating is one of the largest contributors for animal suffering.

Lakshmi said...

@Krishna,
First of all, I want to thank you for your blogs. It is refreshing to see these questions being explored.

My intention with this comment was to bring to notice that there's a possibility that plants do feel pain. Humans identify with animals closest to their biology and we think that they feel pain but we are oblivious to the plants's pain. If pain is used as yardstick for vegetarianism, then we simply don't have enough information now but research is emerging to show that they probably do.

My other point is that if one wants to promote 'not killing' of animals for food, we might be better off making an environmental case and health case than 'killing of animals is immoral' case.

Finally, about affecting the evolution of animals and not plants, I would argue that ever since humans became agriculturalists, we've affected (even shaped) the plant's evolution to a greater degree than we have of animals.

ಕೃಷ್ಣ ಶಾಸ್ತ್ರಿ - Krishna Shastry said...

@Lakshmi: Appreciate your detailed comments. You are absolutely right that vegetarianism has 3 benefits - its healthy, environmental friendly and its relatively more compassionate. But in each of these cases our approach with others have to be different.

In the present world, environmental reason gives vegetarians more right to question others, no doubt. That's what I tried to highlight in my other blog "An open question to non vegans". In this article, I just wanted people to know that there is no shame in fighting for animal rights too.

I welcome efforts in the direction of respecting plants too, but if that is used only as a justification to continue treating animals mercilessly, then its tragic.

charles bricklayer said...

well my friend, do kindly read about the experiments that jagadish chandra bose conducted on plants nearly a century ago and refresh your knowledge.

ಕೃಷ್ಣ ಶಾಸ್ತ್ರಿ - Krishna Shastry said...

@Charles: Thanks for the feedback. I have already answered your comments in above discussion with Lakshmi; request you to kindly go through the same and let me know if you still think differently.

Post a Comment