Friday, December 27, 2002

ತಾಳ್ಮೆಯ ಪರೀಕ್ಷೆ


೨೭-ಡಿಸೆಂಬರ್-೨೦೦೨,
ಮಂಗಳೂರು.
ತಾಳ್ಮೆಯ ಪರೀಕ್ಷೆ
------------
ಬಿಸಿಲಿದ್ದಾಗ ನೆರಳಾಗಿ,
ಕತ್ತಲಾದಾಗ ಬೆಳಕಾಗಿ,
ಇರುವ ನೀ ಯಾರು?

ಎದುರಿಗೇ ನಿಂತಿರುವೆ ನೀ,
ಕಣ್ಣಿದ್ದೂ ಕುರುಡನಾಗಿ,
ಇರುವ ನಾ ಯಾರು?

ದಾರಿಯುದ್ದಕ್ಕೂ ಜೊತೆಯಲ್ಲೇ ಇದ್ದೆ,
ನಿನ್ನ ಬಲದಿಂದ ನಾ ಸದಾ ಗೆದ್ದೆ.
ಇನ್ನೆಷ್ಟು ದಿನ ರಹಸ್ಯವಾಗಿರುವೆ?
ನಿನ್ನನ್ನರಿಯಲು ನಾ ಕಾದಿರುವೆ!!
ಕೃಷ್ಣ ಶಾಸ್ತ್ರಿ ಸಿ.

No comments:

Post a Comment