Thursday, December 19, 2002

೨೦೦೨


೧೯-ಡಿಸೆಂಬರ್-೨೦೦೨,
ಮಂಗಳೂರು.
೨೦೦೨
------------
ಇಳಿದು ಹೋಗಿತ್ತು ಕ್ಯಾಂಪಸ್‍ನಲ್ಲಿ ಕೆಲಸ ಸಿಕ್ಕಿದ ಜಂಭ,
ಮ್ಲಾನವದನದಿ ಎದುರುಗೊಂಡೆ ವರ್ಷಾರಂಭ.
ಎಲ್ಲೆಡೆಯೂ ಎದುರಿಸಿದೆ ನಿರಾಶೆ, ತಿರಸ್ಕಾರ,
ಆದರೆ ಆಸರೆಯಾಗಿ ನನ್ನೊಂದಿಗಿತ್ತು ನನ್ನವರ ಸಹಕಾರ.
ಬೆದರದೆ ಎದುರಿಸಿದೆ ವಿಧಿಯ ಕ್ರೂರ ನೋಟವ,
ಶುರುಮಾಡಿದೆ ಬೆಂಗಳೂರಿನಲ್ಲಿ ಕೆಲಸದ ಹುಡುಕಾಟವ.
ಆಗಲೇ ಬಂತು ಇನ್ಫೋಸಿಸ್‍ನಿಂದ ಜಾಯ್ನಿಂಗ್ ಡೇಟು,
ಬೆರಗಾಗಿ ನೋಡಿದೆ ಸತ್ತ ಕನಸುಗಳ ಮರುಹುಟ್ಟು!
ಮೈ ಮನವನ್ನಾವರಿಸಿತು ತೆಳುವಾದ ಸಂತಸದ ಪೊರೆ,
ಆಗಲೇ ಧುತ್ತೆಂದು ಬಂತು ಎಚ್ಚರಿಕೆಯ ಕರೆ.
ಮರೆತುಹೋಗಿತ್ತು ಕಾಲದ ಪ್ರಭಾವ ಕ್ಷಣ ಕಾಲ!
ಈಗ ದಾಟಬೇಕಾಗಿದೆ ವಿಷಮ ಜಾಲ.
ಕಾಯುತ್ತಿರುವೆ ಹೊಸ ವರುಷವ ಹೊಸ ಆಸೆಗಳ ನೆಟ್ಟು,
ಅದೇನೆಂದು ಈಗಲೇ ಹೇಳಲಾರೆ, ಅದು ಗುಟ್ಟು!
ಕೃಷ್ಣ ಶಾಸ್ತ್ರಿ ಸಿ.

No comments:

Post a Comment