Friday, November 15, 2002

ನಿಸ್ಸಹಾಯಕ


೧೫-ನವೆಂಬರ್-೨೦೦೨,
ಮಂಗಳೂರು.
ನಿಸ್ಸಹಾಯಕ
---------
ದಾರಿಗಾಗಿ ಎಲ್ಲೆಡೆಯೂ ನೋಡಿದೆ,
ಸುತ್ತಲೂ ವ್ಯಾಪಿಸಿದೆ ಕಾರ್ಗತ್ತಲು.
ಅತ್ತು ಕರೆದೆ ಸಹಾಯಕ್ಕಾಗಿ, ಬೆಳಕಿಗಾಗಿ,
ಉತ್ತರವಾಗಿ ಬಂತು ಪ್ರತಿಧ್ವನಿ.
ಓಡಿ ಹೋಗಲು ಯತ್ನಿಸಿದೆ, ತಡಕಾಡಿದೆ,
ಮೈ ತಡವಿತು ಸುತ್ತಲೂ ಹರಡಿದ ಮುಳ್ಳಿನ ಬೇಲಿ.
ಬರಡಾಗಿದೆ ಬದುಕು, ಉಡುಗಿ ಹೋಗಿದೆ ಚೈತನ್ಯ,
ಕಳೆದುಹೋಗಿದೆ ಸುಂದರ ಕನಸುಗಳ ಮಾಧುರ್ಯ.
ಒಂದೊಂದಾಗಿ ಕಹಿಯಾಗುತ್ತಿವೆ, ಸಿಹಿಯಾದ ನೆನಪುಗಳು,
ಆದರೂ ಆವರಿಸುವುದಿಲ್ಲವಲ್ಲ ನನ್ನನ್ನು ಅನಂತ ಮೌನ?
ಕೃಷ್ಣ ಶಾಸ್ತ್ರಿ ಸಿ.

No comments:

Post a Comment