Monday, September 16, 2002

ದೌರ್ಭಾಗ್ಯ


೧೬-ಸೆಪ್ಟೆಂಬರ್-೨೦೦೨,
ಮಂಗಳೂರು.
ದೌರ್ಭಾಗ್ಯ
------------
ಬಂಧಿಸಿತ್ತು ನನ್ನನ್ನು ಅಸಹಾಯಕತೆಯ ಬೇಡಿ,
ನನ್ನ ಪರವಾಗಿರಲಿಲ್ಲ ವಿಧಿಯ ನುಡಿ.
ಮೆಲ್ಲ ಮೆಲ್ಲನೆ ನನ್ನನ್ನು ಕೊಲ್ಲುತ್ತಿದೆ
ಎಂದೋ ಹೊತ್ತಿದ ಆಸೆಯ ಕಿಡಿ,
ಮರುಳಾಗಿ ಹೋದೆ ನಾ ನಿನ್ನನ್ನು ನೋಡಿ.

ಇಂದಿಗೂ ಏಕಾಂತದಲ್ಲಿ ಕಾಡುವುದು ನಿನ್ನ ನೆನಪು,
ಎಂದೂ ಮಾಸಿಹೋಗಲಾರದು ಅದರ ಹೊಳಪು.
ನಿರ್ದಯದಿ ಮನವ ಸುಡುವುದು ಈ ನೆನಪು,
ಯತ್ನಿಸುತ್ತಿರುವೆ ಜೀವಿಸಲು, ನಿನ್ನನ್ನು ಮರೆತು.

ಮನಸ್ಸು ಮಾಡಿದ್ದರೆ, ಪ್ರಯತ್ನ ಮಾಡಿದ್ದರೆ,
ನಿನ್ನ ಪಡೆಯುವ ಸಾಧ್ಯತೆಯಿತ್ತು ಹುಡುಗಿ,
ಆದರೆ, ಎಲ್ಲವೂ ಹಾಗೆಯೇ ಉಳಿದು
ಮನದ ಅಂತರಾಳದಲ್ಲಿ ಕುಳಿತಿತು ಅಡಗಿ.
ಕೃಷ್ಣ ಶಾಸ್ತ್ರಿ ಸಿ.

No comments:

Post a Comment