೮-ಜುಲೈ-೨೦೦೨,
ಬೆಂಗಳೂರು.
ಬದಲಾವಣೆ
-------------------
ಬಿಟ್ಟೋಡಿದನವನು ತನ್ನ ಪ್ರೀತಿಯ ಮೌನದ ಬಿಲ
ಕೇಳಲಾಗದೆ ಹುಚ್ಚು ಮನದ ಭಯಾನಕ ಗದ್ದಲ!
ಯಾರೋ ಕೊಟ್ಟರು ಅವನಿಗೆ ಆಸೆಗಳ ಸಾಲ,
ತಾನಾಗೇ ಉದಯಿಸಿತು ಅವನಲ್ಲಿ ಹೊಸ ಹಂಬಲ!
ಪೂರ್ತಿಯಾಗಿ ಅಳಿಸಿ ಮೊದಲಿದ್ದ ಮೌನ,
ಆಸ್ವಾದಿಸಲಾರಂಭಿಸಿದನು ಹೊಸ ಜೀವನ.
ಕೃಷ್ಣ ಶಾಸ್ತ್ರಿ ಸಿ.
No comments:
Post a Comment