Monday, July 8, 2002

ಹೊಸ ಅನುಭವ

೨೦೦೨ ಜುಲೈ ತಿಂಗಳ ಮಯೂರದ ‘ಕಲ್ಪನೆ’ ವಿಭಾಗಕ್ಕೆ ಬರೆದ ಕವಿತೆಯಿದು. ನಾನು ಬರೆದ ಕವಿತೆ ಪ್ರಕಟವಾಗಲಿಲ್ಲ, ಬಹುಮಾನಿತ ಕವಿತೆಗಳನ್ನೂ ಕೊನೆಯಲ್ಲಿ ಹಾಕಿದ್ದೇನೆ :-)

ಕಲ್ಪನೆಗೆ ಸೂಚಿಸಿದ ಚಿತ್ರ


೮-ಜುಲೈ-೨೦೦೨,
ಬೆಂಗಳೂರು.
ಹೊಸ ಅನುಭವ
-------------------
ಎತ್ತ ಕಡೆಯೆಂದು ತನ್ನ ಪಯಣ,
ತಿಳಿಯದು ಮೂಕ ಜೀವಿಯ ಮನ.
ಹೊಸ ಪರಿಸರವನ್ನು ಗಮನಿಸುವುದರಲ್ಲೇ
ಅದರ ಮನಸ್ಸು ತಲ್ಲೀನ.

ಕರೆದೊಯ್ಯುತ್ತಿರುವ ಮನುಜರ ಆತುರದ ನಡಿಗೆ,
ಪ್ರತಿದಿನವೂ ಕಾಣಲು ಸಿಗದ ಸಂಭ್ರಮದ ನಗೆ,
ನೋಡಿ ಮುಗ್ಧ ಮನದ ತುಂಬಾ ಗಲಿಬಿಲಿ,
ಅರಿಯದೇ ತುಳಿಯುತ್ತಿದೆ ಅದು ಮೃತ್ಯುವಿನ ಹಾದಿ.

ವಿಶಾಲ ಜಗವನ್ನು ನೋಡುತ್ತಾ ಕೊನೆಯ ಬಾರಿ,
ಸಾಗುತ್ತಿದೆ ಸಾವನ್ನೆದುರಿಸಲು ಅದು ಮೊದಲ ಬಾರಿ!
ಕೃಷ್ಣ ಶಾಸ್ತ್ರಿ ಸಿ.
ಬಹುಮಾನಿತ ಕವಿತೆಗಳು

No comments:

Post a Comment