Sunday, June 9, 2002

ಅಚ್ಚರಿಯ ಹಾದಿ


೦೯-ಜೂನ್-೨೦೦೨,
ಬೆಂಗಳೂರು.
ಅಚ್ಚರಿಯ ಹಾದಿ
-------------------
ಹಳೇ ಪ್ರಶ್ನೆಗಳ ದಾಟಿದ ಮನವು
ಕಾಯುವುದು ಹೊಸ ಪ್ರಶ್ನೆಗಳ ಆಗಮನವ
ಪುನಃ ಬರುವವು ಅದೇ ಪ್ರಶ್ನೆಗಳು ಹೊಸ ರೂಪದಲ್ಲಿ!

ಪುನಹ ಪುನಹ ಹತ್ತಿಕ್ಕಿ ತೀವ್ರ ಭ್ರಮನಿರಸನವ
ಮನವು ಪಡೆಯುವುದು ಸಂತೃಪ್ತಿಯ ಗೆಳೆತನ
ಆತುರ ಬೇಡ, ಮಾಡು ಮನವ ಸಮಾಧಾನ
ನಿಧಾನವೇ?! ಇದೇ ಜೀವನದ ವಿಧಾನ!
ಕೃಷ್ಣ ಶಾಸ್ತ್ರಿ ಸಿ.

No comments:

Post a Comment