About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Thursday, October 27, 2011

ನಮ್ಮ ಸಂಸ್ಕೃತಿಯ ಉಳಿಶುಲೆ ಎಂತ ಮಾಡೆಕ್ಕು?

ನಮ್ಮ ಜಾತಿಯ ಕೂಸುಗೊ ಬೇರೆಯವರೊಟ್ಟಿಂಗೆ ಓಡಿ ಹೋಪ ವಿದ್ಯಮಾನಂಗಳ ಬಗ್ಗೆ ಎಲ್ಲರೂ ಬೆಶಿ ಬೆಶಿ ಚರ್ಚೆ ಮಾಡುದು ನೋಡ್ತಾ ಇದ್ದೆ. ಮಾಣಿಯಂಗಳೂ ಇದೇ ರೀತಿಯ ಹಳ್ಳಕ್ಕೆ ಬೀಳುದರ ಬಗ್ಗೆ ಕೂಡ ಕೆಲವರು ಹೇಳ್ತವು. ಆದರೆ ಇದಕ್ಕೆ ಪರಿಹಾರೋಪಾಯ ಎಂತ ಹೇಳುದರ ಬಗ್ಗೆ ಒಮ್ಮತ ಇಲ್ಲೆ, ಅನೇಕ ಐಡಿಯಂಗೊ ಹರಿತ್ತಾ ಇದ್ದು! ಎನ್ನದುದೇ ಕೆಲವು ಆಲೋಚನೆ ಇದ್ದು, ಓದಿ ನೋಡಿ.

೧. ಸಣ್ಣ ಪ್ರಾಯಂದಲೇ ನಮ್ಮ ಮಾಣಿ-ಕೂಸುಗಳ ಒಟ್ಟಿಂಗೆ ಬೆರೆವಲೆ ಬಿಡಿ

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರ ಮಧ್ಯೆ ಮಾತುಕತೆ, ಒಡನಾಟವ ರಜ್ಜ ಪ್ರೋತ್ಸಾಹಿಸಿ ಹೇಳುವಂವ ಆನು.
ಉದಾ: ಮದುವೆ, ಉಪನಯನಂಗಳ ಬೋರ್ ಹೊಡಶುವ ಹಾಂಗೆ ಮಾಡುವ ಬದಲು ರಜ್ಜ ಗಮ್ಮತು ಇಪ್ಪ ಹಾಂಗೆ ಮಾಡೆಕ್ಕಪ್ಪಾ!
- ಮಾಣಿ-ಕೂಸುಗೊ ಒಟ್ಟು ಸೇರಿ ಗ್ರೂಪ್ ಡ್ಯಾನ್ಸೋ, ನಾಟಕವೋ ಮಾಡಲಿ, ತಪ್ಪೆಂತ? ಅಶ್ಲೀಲ ಇಲ್ಲದ್ರೆ ಮುಗಾತು
- ನೋಡುವವಕ್ಕೂ ಗಮ್ಮತು, ಮಾಡುವವಕ್ಕೂ ಸಮುದಾಯದ ಒಳವೇ ಒಳ್ಳೆ ಜೀವನಾನುಭವ
- ಮಾಣಿ, ಕೂಸುಗೊಕ್ಕೆ ವಿವಿಧ ಕ್ಷೇತ್ರಂಗಳಲ್ಲಿ ತಮ್ಮ ಸಾಮರ್ಥ/ಸಾಧನೆ ಪ್ರದರ್ಶಿಸುಲೆ ವೇದಿಕೆ ಕೊಡಿ
- ಕೂಸುಗಳ ಮುಂದೆ ಹೀರೋ ಅಪ್ಪಲೆ ಮಾಣಿಯಂಗೊ ಪ್ರಯತ್ನ ಮಾಡದ್ದಿಕ್ಕಾ?! ಕೂಸುಗಳೂ ಸುಮ್ಮನೆ ಕೂರ :-)
- ಕೂಸುಗೊ ಮಾಡಿಯಂಗೊ ರಜ್ಜ ಕಿಲ ಕಿಲ ಹೇಳಿ ನೆಗೆ ಮಾಡಿಯೊಂಡು ಮಾತಾಡಿದ್ರೆ ಮೋರೆ ತಿರುಗ್ಸಿ ಆಚೆ ಹೋಗಿ, ಕೆಕ್ಕರಿಸಿಯೋಂಡು ನೋಡುದು ಬಿಡಿ, ಹಿಂದೆಂದ ಗಾಳಿ ಶುದ್ದಿ ಹಬ್ಸುದರ ಬಿಡಿ
- ನಿಜವಾಗಿ ಇಪ್ಪದು ಆಕರ್ಷಣೆಯೇ ಆದ್ರೂ ಕೂಡ ‘ಎಂಗಳ ಮಧ್ಯೆ ಇಪ್ಪದು ಬರೀ ಫ್ರೆಂಡ್‍ಶಿಪ್’ ಹೇಳಿ ಹೇಳುವಾಗ ಸುಮ್ಮನೆ ಕೂರಿ, ಕಂಡಾಬಟ್ಟೆ ಮಂಡೆಬೆಚ್ಚ ಮಾಡುಲೆ ಹೋಗೆಡಿ
- ಹೀಂಗೆಲ್ಲಾ ಆಗಿ ಕೊನೆಗೆ ಸಮುದಾಯದ ಒಳವೇ ಲವ್ ಆದರೆ ಒಳ್ಳೆಯದೇ ಅಲ್ಲದಾ?!!
- ಗೋತ್ರದ ಬಗ್ಗೆ ತಲೆಬೆಶಿ ಮಾಡುವವು ಒಂದೇ ಗೋತ್ರದವರ ಮಧ್ಯೆ ಲವ್ ಆಗದ್ದ ಹಾಂಗೆ ನೋಡಿಯೋಳೆಕ್ಕು :-)
ವಿ.ಸೂ. ದಕ್ಷಿಣ ಕನ್ನಡ ಹವ್ಯಕರ ಸಮಾರಂಭಗಳಂತೂ ಮಹಾ ಬೋರ್ ಯುವ ಜನತೆಗೆ, ಹೆಚ್ಚಿನವು ಅಪ್ಪ-ಅಮ್ಮನ ಒತ್ತಾಯಕ್ಕೆ ಬಪ್ಪದು

- ಅಪ್ಪ-ಅಮ್ಮಂದ್ರು ದೊಡ್ಡ ಕಣ್ಣಿಂದ ನೋಡದ್ದ ದೂರದ ಜಾಗೆಲಿ ಯುವಜನತೆಗೆ ವಿಚಾರ ವಿನಿಮಯ ಮಾಡುಲೆ ಎಡಿಗಾದ್ರೆ ಇನ್ನೂ ಉತ್ತಮ. ಹಾಂಗಿಪ್ಪ ಶಿಬಿರ, ಯಾತ್ರೆ ಏರ್ಪಡಿಸಿ ಒಬ್ಬರೋ ಇಬ್ಬರೋ ಹಿರಿಯರ ಒಟ್ಟಿಂಗೆ ಮಕ್ಕಳ ಕಳ್ಸೆಕ್ಕು, ಮಾಣಿಯಂಗಳನ್ನೂ ಕೂಸುಗಳನ್ನೂ

೨. ಯುವ ಜನತೆಯ ಸಮಸ್ಯೆಗಳ ಬಗ್ಗೆ ಮಾತಾಡುಲೆ ಪ್ರೇರೇಪಿಸಿ

ನಮ್ಮ ಸಂಸ್ಕೃತಿಗೆ ದುರುದ್ದೇಶಪೂರ್ವಕವಾಗಿ ಧಕ್ಕೆ ತಪ್ಪ ಯಾವುದಾದರೂ ವಿದ್ಯಮಾನಗಳಿದ್ದರೆ ಅಂತಹ ವಿಷಯದ ಬಗ್ಗೆ ಯುವ ಜನರು ಮಾತಾಡೆಕ್ಕು, ಬರೆಯೆಕ್ಕು - ಬರೀ ಹಿರಿಯರು ಅಲ್ಲ.

- ಪ್ರಬಂಧ, ಭಾಷಣ, ಚರ್ಚಾ ಸ್ಪರ್ಧೆಗಳ ಏರ್ಪಡಿಸಿ
- ಐ ಪೋಡೋ ಪ್ಯಾಡೋ ಎಂತಾದರೂ ಆಕರ್ಷಣೀಯವಾದ ಬಹುಮಾನ ಮಡಿಗಿ
- ಗಮ್ಮತಿನ ಟಾಪಿಕ್ ಕೂಡ ಮಡುಗುಲಕ್ಕು ಉದಾ: “ಕೂಸುಗೊಕ್ಕೆ ಹೇಂಗಿಪ್ಪ ಮಾಣಿ ಇಷ್ಟ” ಹೇಳುವ ಟಾಪಿಕ್ ಬಗ್ಗೆ ಮಾಣಿಯಂಗಳ ಬರವಲೆ ಹೇಳಿದ್ರೆ ಗಮ್ಮತಿಕ್ಕು, ಅದಕ್ಕೆ ಕೂಸುಗೊ ಮಾರ್ಕು ಕೊಡೆಕು. ಹಾಂಗೆಯೇ ಉಲ್ಟಾ ಕೂಡ ಮಾಡುಲಕ್ಕು
- ಹೀಂಗಿಪ್ಪದರ ಪ್ರತಿ ವರ್ಷವೂ ತಪ್ಪದ್ದೆ ನಡೆಶಿ
- ‘ಕೂಲ್ ಬಹುಮಾನ’ದ ನೆಪಲ್ಲಿಯಾದರೂ ಯುವಜನತೆ ಅಧ್ಯಯನ ನಡೆಶಿ ತಯಾರಾಗಿ ಬಕ್ಕು
- ಹೇಂಗಾದ್ರೆಂತ? ಅವರ ತಲೆಗೆ ವಿಷ್ಯ ಹೋದರೆ ಕಾರ್ಯಸಾಧನೆ ಆವ್ತು!
- ಹೀಂಗಿಪ್ಪ ಸ್ಪರ್ಧೆಗಳ ಮದುವೆ, ಉಪನಯನದ ಹಾಂಗಿಪ್ಪ ಜಂಬರದ ಅಂಗವಾಗಿಯೇ ಮಾಡಿದರೆ ಇನ್ನೂ ಉತ್ತಮ

೩. ಹೆಂಗಸರ ಬೇರೆಯಾಗಿ ನೋಡುದರ ಬಿಡುವ ಕಾಲ ಬಯಿಂದು*

- ಈಗ ಗಂಡಸರಿಗಿಂತ ಹೆಚ್ಚು ಕಲ್ತ, ಉಶಾರಿಪ್ಪ ಕೂಸುಗೊ ಬೇಕಾದಷ್ಟಿದ್ದವು
- ಆದ್ರುದೇ ಜಂಬರಂಗಳಲ್ಲಿ ಗಂಡು ಹೆಣ್ಣಿನ ಗುಂಪು ಬೇರೆ ಬೇರೆಯಾಗಿಯೇ ಇರ್ತು ಹೆಚ್ಚಿನ ಸಲ
- ಗಂಡಸರು ದೇಶ-ಬೆಳೆ-ಮಳೆ-ರಾಜಕೀಯ ಹೀಂಗೆ ನೂರೆಂಟು ವಿಷಯಂಗಳ ಬಗ್ಗೆ ಭಾರೀ ಗೊಂತಿಪ್ಪವರ ಹಾಂಗೆ ಮಾತಾಡಿಯೊಂಡು ಒಂದು ಕಡೆ ಇರ್ತವು
- ಹೆಂಗಸರು ಚಿನ್ನ-ವಸ್ತ್ರ-ಮಕ್ಕೊ-ಆಡುಗೆ ಈ ವಿಷಯಂಗಳ ಬಗ್ಗೆ ಮಾತಾಡಿಯೊಂಡು ಇನ್ನೊಂದು ಕಡೆ ಇರ್ತವು
- ನಮ್ಮ ಸಂಸ್ಕೃತಿಲಿ, ಸಮಾಜಲ್ಲಿ ಹೆಣ್ಣಿಂಗುದೇ ಮಹತ್ವವಾದ ಸ್ಥಾನ ಇದ್ದು, ಸ್ವಾತಂತ್ರ್ಯ ಇದ್ದು ಹೇಳುದರ ತೋರ್ಸಿದರೆ ಅದು ಸಣ್ಣ ಕೂಸುಗೊಕ್ಕೆ ಹೊಸ ಆತ್ಮವಿಶ್ವಾಸ ಕೊಡುಗು

*ಈ ವಿಷಯಲ್ಲಿ ಎನ್ನ ಇನ್ನೊಂದು ಗಂಭೀರವಾದ ಲೇಖನ ಕೂಡ ಇದ್ದು: ಬ್ರಾಹ್ಮಣ ಸಮಾಜಲ್ಲಿ ಹೆಣ್ಣಿನ ಸ್ಥಾನಮಾನ


ಕೊನೆಯ ಮಾತು: ಆನು ಅಂತರ್ಜಾತೀಯ ಮದುವೆಯ ವಿರೋಧಿ ಅಲ್ಲ, ಸಮುದಾಯದ ಒಳವೇ ಮದುವೆ ಆದರೆ ಅದರಲ್ಲಿ ಅನೇಕ ಲಾಭಂಗೊ ಇದ್ದು ಹೇಳುದನ್ನೂ ಅಲ್ಲಗಳೆತ್ತಿಲ್ಲೆ. ಆದರೆ ದುರುದ್ದೇಶಪೂರ್ವಕವಾಗಿ ಆರಾದ್ರುದೇ ನಮ್ಮ ಸಂಸ್ಕೃತಿಯ ಹಾಳು ಮಾಡುಲೆ ಪ್ರಯತ್ನ ಮಾಡಿದರೆ ಅದಕ್ಕೆ ತಕ್ಕ ಕ್ರಮಂಗಳ ಕೈಗೊಳ್ಳುದ್ರಲ್ಲಿ ತಪ್ಪೇನಿಲ್ಲೆ. ಆದರೆ ಅಂತಹ ಕ್ರಮಂಗೊ ವ್ಯವಸ್ಥಿತವಾಗಿ ಒಳ್ಳೆಯ ಮನಸ್ಸಿಂದ ಮಾಡೆಕ್ಕು, ದ್ವೇಷದ ಮೂಲಕ ಅಲ್ಲ ಹೇಳಿ ಎನ್ನ ಅಭಿಪ್ರಾಯ.

7 comments:

Rajendra Halemane said...

ಒಳ್ಳೆಯ ಯೋಚನೆ ಶಾಸ್ತ್ರಿ. ಆದರೆ,
1. ಮಕ್ಕೊ ಅಬ್ಬೆ ಅಪ್ಪನೊಟ್ಟಿಂಗೆ ಒ೦ದು ಪ್ರಾಯದ ವರೇಗೆ ಮಾಂತ್ರ ಬತ್ತವು. ನಂತರ, ಅವರ ವಿಚಾರಧಾರೆಗಳಲ್ಲಿಪ್ಪ ವ್ಯತ್ಯಾಸಂಗಳಿಂದಾಗಿ, ಅವರವರಷ್ಟಕ್ಕೆ ತಿರುಗಾಡುಲೆ ಬಯಸುತ್ತವು.
2. ಅವರವರ ಕಲಿಯುವ/ಓಡಾಡುವ ಜಾಗೆಗಳಲ್ಲಿಯೊ ಇಪ್ಪ ಸ್ನೇಹಿತರೊಟ್ಟಿಂಗೆ ಬೆರವದೇ ಹೆಚ್ಚಿಗೆ. ಮೊದಲಾಣ ಹಾಂಗೆ ನಮ್ಮವರ ಮನೆಗೊ ಹತ್ತರೆ ಹತ್ತರೆ ಇರುತ್ತಿಲ್ಲೆ. ಪುರುಸೊತ್ತೂ ಇರುತ್ತಿಲ್ಲೆ. ಹಾಂಗಾಗಿ ಬೆರೆಯುವವರ ಸಂಖ್ಯೆ ಕಮ್ಮಿ ಆಯಿದು.
ಅಗತ್ಯವಾಗಿ ಇದು ಚರ್ಚಿಸಬೇಕಾದ ವಿಷಯ. ಅಭಿನಂದನೆಗೊ.

Soumya said...

ಈಗ ಹೆಚ್ಚಿನವೂ ನೆಂಟರಿಷ್ಟರ ಜಂಬಾರಂಗಳಲ್ಲಿ ಮಾಂತ್ರ ಭೇಟಿ ಅಪ್ಪದು.ಅಷ್ಟಪ್ಪಗ ಕಚೇರಿ, group dance, etc. arrange ಮಾಡಿದರೆ ತುಂಬ ಉಪದ್ರ ಆವುತ್ತು. ಮಾತಾಡಿದರೆ artistesಗೊಕ್ಕೆ ಅವಮಾನ ಮಾಡಿದ ಹಾಂಗೆ. ಅಪರೂಪಕ್ಕೆ ಎಲ್ಲರು ಒಟ್ಟಪ್ಪಗ, ಮಾತಾಡಿ ಹೋವುತ್ತು!
ನೀನು ಹೇಳಿದ ಹಾಂಗೆ, we should allow our youth to mingle.ಬೇಕಾದರೆ, ಒಂದು Youth Forums ಎಂತಾದರು ಮಾಡಿ, inter-ವಲಯ competitions ಎಂತಾದರು organise ಮಾಡ್ಲಕ್ಕು.

ಸರಸ ಬಿಂದು said...

ಮುತ್ತಿನಂಥಾ ಮಾತು...

Anonymous said...

ರಾಶೀ ಉನ್ನತ ಹಾಗು ಉತ್ತಮ ವಿಚಾರ :) ನಾನು ಹೀಂಗೆ ಯಾವಾಗ್ಲೂ ಹೇಳ್ತಿರ್ತಿದ್ದೆ... ಆದ್ರೆ ಇದ್ಕೆ ಹೆಚ್ಚು ಜನರ support ಸಿಕ್ಕಿದ್ದಿಲ್ಲೇ. ಈಗಾದ್ರೂ ಇದ್ನ ನಂಗ್ಲ್ ಸಮಾಜದಲ್ಲಿ ಅಳವಡಿಸಿಕೊಂಡು, ಅನುಸರಿಸಿದ್ರೆ ಛಲೋದು :)

prashasti said...

ಚೆನ್ನಾಗಿದ್ದು :-)

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಒಳ್ಳೆಯ ಚಿಂತನೆ...ಪ್ರಯತ್ನ ಮಾಡ್ಲಕ್ಕು..ಮಾಡೆಕ್ಕಾದ ವಿಚಾರ.

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಈ ವಿಷಯದತ್ತ ಗಮನಹರಿಸಿದರೆ ಖ೦ದಿತವಾಗಿಯೂ ಬದಲಾವಣೆ ಗಮನಿಸಲಕ್ಕು ಹೇ ಳಿ ಅನಿಸುತ್ತು.

Post a Comment