Sunday, May 18, 2003

ಪ್ರಯತ್ನ


೧೮-ಮೇ-೨೦೦೩,
ಮಂಗಳೂರು.
ಪ್ರಯತ್ನ
------------
ಮರೆಯಬೇಡ, ಸಾಗಿರುವೆವು ನಾವು ಜೊತೆಯಾಗಿ ಬಹುದೂರ,
ಸರಿಯೇ ತೊರೆದು ಹೋಗಲು ನೀ ಮಾಡಿದ ನಿರ್ಧಾರ?
ಸತ್ಯ, ಅಗಲಿಕೆಯ ನೋವು ಅಪಾರ,
ಅರಿಯೆನು ಸಹಿಸುವೆನೆಂತು ಆ ದುಃಖ, ಬೇಸರ.

ಅದೇಕೆ ತೋರಲು ಯತ್ನಿಸುವೆ ಕೃತಕ ತಾತ್ಸಾರ?
ತಿಳಿದಿದೆ ನನಗೆ, ನಿನಗಿನ್ನೂ ನನ್ನ ಮೇಲಿದೆ ಮಮಕಾರ!!
ಕೃಷ್ಣ ಶಾಸ್ತ್ರಿ ಸಿ.

No comments:

Post a Comment