Saturday, May 17, 2003

ನಿರಾಶೆ


೧೭-ಮೇ-೨೦೦೩,
ಮಂಗಳೂರು.
ನಿರಾಶೆ
------------
ವಿಧಿಯ ಮಡಿಲಲ್ಲಿ, ಅಶಾಂತಿಯ ಕಡಲಲ್ಲಿ,
ಆಲೋಚನೆಗಳ ಪ್ರವಾಹದ ವಿರುದ್ಧವಾಗಿ,
ಅಪ್ರಬುದ್ಧ ಕಣ್ಣುಗಳ ಮಧ್ಯೆ ಏಕಾಂಗಿಯಾಗಿ,
ಈಜಾಡುತ್ತಿದ್ದೆ ನಾ ನನ್ನನ್ನೇ ಕಡೆಗಣಿಸಿ!

ಅದೊಂದು ದಿನ ನಿನ್ನ ಕಂಡೆ, ತುಸು ಬದಲಾದೆ,
ದಿನಗಳು ಕಳೆದಂತೆ ನಿನ್ನ ಮರೆಯಲಾರದವನಾದೆ!
ಆದರೆ ನಿರ್ದಯದಿ ನೀ ಹೊಸಕಿ ಹಾಕಿದೆ ನನ್ನ ಹೂ ಮನವ,
ಅರಗಿಸಿಕೊಳ್ಳಲು ದೊರಕಿತು ಇನ್ನೊಂದು ಕಹಿ ಅನುಭವ.
ಕೃಷ್ಣ ಶಾಸ್ತ್ರಿ ಸಿ.

No comments:

Post a Comment