Friday, February 14, 2003

ನವೀನ ಯಾಚನೆ


೧೪-ಫೆಬ್ರವರಿ-೨೦೦೩,
ಮಂಗಳೂರು.
ನವೀನ ಯಾಚನೆ
------------
ನಿನ್ನ ಮೇಲೆ ಬರೆದೆ ಉದ್ದುದ್ದ ಕವನ,
ಆದರೆ ಇತ್ತ ಕಡೆ ಹರಿಯಲೇ ಇಲ್ಲ ನಿನ್ನ ಧ್ಯಾನ.
ವಿಧ ವಿಧವಾಗಿ ಸೆಳೆಯಲು ಯತ್ನಿಸಿದೆ ನಿನ್ನ ಗಮನ,
ಕೊನೆಗೆ ವೈಫಲ್ಯದಿಂದ ಕಂಗೆಟ್ಟು ಆಶ್ರಯಿಸಿದೆ ಮೌನ.

ಆದರೂ ಬತ್ತಲಿಲ್ಲ ನನ್ನಲ್ಲಿರುವ ಪ್ರೀತಿಯ ಸೆಲೆ,
ತಡೆಯಿಲ್ಲದೆ ಹರಿಯುತ್ತಿದೆ ನಿನ್ನ ಮೇಲಿನ ಪ್ರೇಮದ ಹೊಳೆ.
ಒಂದು ಬಾರಿ ನನ್ನತ್ತ ತಿರುಗಿ ನೋಡು,
ನಿನ್ನ ಪಡೆಯುವ ದಾರಿಯ ನೀನೇ ತೋರು!
ಕೃಷ್ಣ ಶಾಸ್ತ್ರಿ ಸಿ.

No comments:

Post a Comment