Saturday, May 4, 2002

ಪಶ್ಚಾತ್ತಾಪ


೦೪-ಮೇ-೨೦೦೨,
ಬೆಂಗಳೂರು.
ಪಶ್ಚಾತ್ತಾಪ
-------------------
ಅರಿಯದೇ ಹೋದೆನು ನಿನ್ನ ಮನದಾಳದ ನೋವು,
ಕಾಣದೇ ಹೋದೆನು ನಿನ್ನ ಕಣ್ಣುಗಳಲ್ಲಿದ್ದ ಪ್ರೀತಿಯ ಹಸಿವು.
ಅಯ್ಯೋ, ಯಾಕಾಯಿತು ನನ್ನ ಮನ ಅಷ್ಟು ಕ್ರೂರ,
ಆಸರೆ ನೀಡುವ ಬದಲು ಓಡಿ ಹೋದೆ ಬಲು ದೂರ.

ಒಂದೊಮ್ಮೆ ನೀನಾಗಿದ್ದೆ ನನ್ನ ಬಾಳಿನ ಸಂಗೀತ,
ನಿನ್ನುಸಿರಲ್ಲೇ ಇತ್ತು ನನ್ನ ಹೃದಯದ ಬಡಿತ.
ನಿನ್ನ ಕಡೆಗಣಿಸಿ ಈಗ ಕೊರಗುವೆ ಪ್ರತಿದಿನ,
ನೆನಪಿನೊಂದಿಗಿರುವ ನಿಟ್ಟುಸಿರೇ ಈಗ ನನ್ನ ಜೀವನ.

ಪ್ರತಿಬಾರಿ ಎದ್ದಾಗ ಹೃದಯದಲ್ಲಿ ದುಃಖದ ಅಲೆ,
ನೆನಪಿಗೆ ಬರುವುದು ನಿನ್ನ ನಿರ್ಮಲ ಪ್ರೀತಿಯ ಬೆಲೆ.
ಕೃಷ್ಣ ಶಾಸ್ತ್ರಿ ಸಿ.

No comments:

Post a Comment