About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Sunday, June 14, 2015

ಪ್ರತಿಕ್ರಿಯೆ: ಹರಹರಾ... ಏನೀ ಆಹಾರ?... ಬರೀ ವ್ಯವಹಾರ!

ನಾಗೇಶ್ ಹೆಗಡೆಯವರ ಇತ್ತೀಚೆಗಿನ ಲೇಖನಕ್ಕೆ ಒಂದಷ್ಟು ಪ್ರತಿಕ್ರಿಯೆಗಳು!

ಮೂಲ ಲೇಖನ (ಖಂಡಿತಾ ಓದಿ):
ಆಹಾರ ಸುರಕ್ಷೆ ಹೇಗೆ?
ಹರಹರಾ... ಏನೀ ಆಹಾರ?... ಬರೀ ವ್ಯವಹಾರ!
http://www.prajavani.net/article/ಹರಹರಾ-ಏನೀ-ಆಹಾರ-ಬರೀ-ವ್ಯವಹಾರ

- ಸೇರ್ಪಡೆ ಹಾಗೂ ಬೇರ್ಪಡೆ ಎಂಬ ಎರಡು ಪಡೆಗಳು: ಹಾನಿಕರ ಸೇರ್ಪಡೆ ಇರುವ ಹಾಗೂ ಸತ್ವರಹಿತ ಆಹಾರಗಳಿಂದ ದೂರವಿರುವುದು - ಇವೆರಡೂ ಬಹಳ ಮುಖ್ಯ ವಿಷಯಗಳು. ಈ ವರ್ಗೀಕರಣವನ್ನು ಎತ್ತಿತೋರಿಸಿದ್ದು ನೋಡಿ ಖುಷಿಯಾಯಿತು.

- "ಜಾಗತೀಕರಣದ ನಂತರ ಈ ಎಲ್ಲ ಅವಾಂತರಗಳೂ ಈಗ ಎಲ್ಲ ದೇಶಗಳಲ್ಲಿ ಪುನರಾವರ್ತನೆ ಆಗುತ್ತಿವೆ" ಎಂಬುದು ನೂರಕ್ಕೆ ನೂರು ನಿಜ. ಉದಾಹರಣೆಗೆ ಅಮೇರಿಕಾದಲ್ಲಿ ಈಗ McDonalds ಎಂದರೆ ಸತ್ವರಹಿತ-ಸಂಸ್ಕರಿತ ಆಹಾರ ಎಂಬುದು ತುಸುವಾದರೂ ಅರೋಗ್ಯಪ್ರಜ್ಞೆ ಇರುವ ಎಲ್ಲರಿಗೂ ಗೊತ್ತು, ಹಾಗೂ ಇಂತಹ "cheap processed food"ಗಳಿಂದ ಪ್ರಜ್ಞಾವಂತ ಗ್ರಾಹಕರು ದೂರವಿರುತ್ತಾರೆ. ಆದರೆ ಭಾರತದಲ್ಲಿ ಇತ್ತೀಚೆಗಷ್ಟೇ ಕಾಲಿಟ್ಟ ಇವುಗಳಿಗೆ ವಿಶೇಷ status symbol ದೊರಕಿದೆ, ಇದು ನಿಜಕ್ಕೂ ದುರದೃಷ್ಟಕರ (ಹಾಗೆಂದು ಇಂದು ಭಾರತೀಯ ಮೂಲದ ಹೋಟೇಲುಗಳಲ್ಲಿ ಸಿಗುವ ಆಹಾರ ಸತ್ವಭರಿತ ಹಾಗೂ ವಿವಿಧ ವಿಷಗಳಿಂದ ಮುಕ್ತ ಎಂದೇನಲ್ಲ, ಅನೇಕ ಒತ್ತಡ-ಆಸೆಗಳಿಗೆ ಬಲಿಯಾಗಿ ಅವುಗಳ ಗುಣಮಟ್ಟವೂ ಕಡಿಮೆಯಾಗುತ್ತಲೇ ಸಾಗಿವೆ)

- ಮಧುಮೇಹ, ಬೊಜ್ಜು, ರಕ್ತದೊತ್ತಡ, ಕಿಡ್ನಿ ಸಮಸ್ಯೆ, ಕ್ಯಾನ್ಸರ್, ಆಸ್ತಮಾ ಮುಂತಾದ ರೋಗಗಳು ದಾಖಲೆ ಪ್ರಮಾಣದಲ್ಲಿ ಏರುತ್ತಿವೆ, ಹಾಗೂ ಇದರ ಹಿಂದೆ ಹತ್ತು-ಹಲವು ಕಾರಣಗಳಿದ್ದರೂ ಕೂಡ ಅನೇಕ ಸಲ ಆಹಾರವೇ ಕಾರಣವಾಗಿರುತ್ತದೆ ಎಂಬುದೂ ನಿಜವೇ. "We are what we eat" ಎಂಬ ಅರ್ಥವತ್ತಾದ ಮಾತು ನೆನಪಿಗೆ ಬಂತು.

- ಇನ್ನು, ತಮ್ಮ ಜೀವಮಾನದ ಗಳಿಕೆಯೆಲ್ಲವನ್ನೂ  ಆಸ್ಪತ್ರೆಗಳಿಗೆ ಕೊಟ್ಟು, ಮನೆಯವರನ್ನೂ ಸಾಲಕ್ಕೆ ಸಿಕ್ಕಿಸಿ ಸಾಯುವವರ ಕಥೆ. ಇದಕ್ಕೆ ಕಾರಣ ಬರೀ ರೋಗಗಳು ಎನ್ನುವ ಹಾಗಿಲ್ಲ, ಸುಲಭವಾಗಿ ಸಾಯಲು ಬಿಡದೆ ಇರುವ ಆಧುನಿಕ ಚಿಕಿತ್ಸಾ ಪದ್ಧತಿಗಳೂ ಕೂಡ ಕೆಲವೊಮ್ಮೆ ವರದೊಂದಿಗೆ ಶಾಪವಾಗಿಯೂ ವರ್ತಿಸುತ್ತವೆ ಎಂಬುದನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ಹಾಗಾಗ್ಯೂ ಆಹಾರಮೂಲದ ಖಾಯಿಲೆಗಳೂ ಇದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.

- ಸುಧಾರಿತ ದೇಶಗಳಲ್ಲಿ ಗ್ರಾಹಕರಿಗೆ ಮಾಹಿತಿಯನ್ನು ನೀಡುವ ವ್ಯವಸ್ಥೆ ಇದೆ ಎನ್ನುವುದು ಸ್ವಲ್ಪ ಮಟ್ಟಿಗೇನೋ ಸರಿ, ಆದರೆ ಇಲ್ಲಿಯೂ ಕೂಡ ಕಾನೂನು-ನೀತಿಗಳು ಅಥವಾ ಒಟ್ಟಾರೆ ವ್ಯವಸ್ಥೆ ಇವತ್ತಿಗೂ ಕೂಡ ಅತ್ಯಂತ ಜನಹಿತಪರ ಸ್ಥಿತಿಯನ್ನು ತಲುಪಿದೆ ಎಂದೇನೂ ಹೇಳುವಂತಿಲ್ಲ. ಮಾತ್ರವಲ್ಲ, ಎಲ್ಲಾ ಸುಧಾರಿತ ದೇಶಗಳಲ್ಲಿ ವ್ಯವಸ್ಥೆ ಹೆಚ್ಚುಕಮ್ಮಿ ಒಂದೇ ರೀತಿ ಇದೆ ಎಂದು ಹೇಳುವಂತಿಲ್ಲ; ಇತರ ಅನೇಕ ವಿಷಯಗಳಂತೆ ‘ಆರೋಗ್ಯಕರ ಆಹಾರ’ ಎಂಬ ವಿಷಯದ ಬಗ್ಗೆಯೂ ಇವರ ಧೋರಣೆಗಳ ಮಧ್ಯೆ ಸಾಕಷ್ಟು ವ್ಯತ್ಯಾಸಗಳು ಕಂಡುಬರುತ್ತವೆ.

ಇವೆಲ್ಲದರ ಬಗ್ಗೆ ಮತ್ತಷ್ಟು ಬರೆಯಲು, ವಿದೇಶ ಪ್ರಯಾಣಗಳಲ್ಲಿ ಗಳಿಸಿದ ಅನುಭವಗಳನ್ನು ಹಂಚಿಕೊಳ್ಳಲು ನಾಗೇಶ್ ಹೆಗಡೆಯವರು ಸ್ಫೂರ್ತಿ ಕೊಟ್ಟಿದ್ದಾರೆ, ಮುಂದಿನ ದಿನಗಳಲ್ಲಿ ಒಂದಷ್ಟು ಬರೆಯುವ ಆಲೋಚನೆ ಇದೆ :-)

0 comments:

Post a Comment