About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Tuesday, September 18, 2012

"ತುಂತುರು" ಸರ್. ಎಂ. ವಿ. ಮಳೆ ನೀರು ಸುಗ್ಗಿ ಕೇಂದ್ರಕ್ಕೆ ಒಂದು ಭೇಟಿ


ಇತ್ತೀಚೆಗೆ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬಂದ ಲೇಖನದಿಂದ ಆಕರ್ಷಿತರಾಗಿ ನನ್ನ ಮಾವ ಡಾ| ವಿ. ಜಿ. ಭಟ್ ಮತ್ತು ನಾನು ಬೆಂಗಳೂರಿನ ಜಯನಗರದ "ಸರ್. ಎಂ. ವಿಶ್ವೇಶ್ವರಯ್ಯ ಮಳೆ ನೀರು ಸುಗ್ಗಿ ಕೇಂದ್ರ"ಕ್ಕೆ ಒಂದು ಭೇಟಿ ಕೊಟ್ಟೆವು. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿಯು ಇದರ ಹಿಂದೆ ಇರುವ ಹಾಗೂ ಇದರ ಉಸ್ತುವಾರಿಯನ್ನು ನೋಡಿಕೊಳ್ಳುವ ಸಂಸ್ಥೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನೀವು ಅವರ ಅಧಿಕೃತ ತಾಣವನ್ನು ಸಂದರ್ಶಿಸಬಹುದು. ಇಲ್ಲಿ ನನ್ನ ಲೇಖನವನ್ನು ಕೆಲವು ಚಿತ್ರ ಹಾಗೂ ಲಘು ಟಿಪ್ಪಣಿಗಳಿಗೆ ಮಾತ್ರ ಸೀಮಿತವಾಗಿರಿಸುತ್ತಿದ್ದೇನೆ.

ಅಧಿಕೃತ ತಾಣ: www.bwssb.org (ಈ ಕೇಂದ್ರಕ್ಕೆಂದೇ ಪ್ರತ್ಯೇಕವಾದ ಹಾಗೂ ವಿಸ್ತೃತವಾದ ತಾಣ ಇನ್ನೂ ಇಲ್ಲ)
ಈಮೈಲ್ ವಿಳಾಸ: rwhthemepark@bwssb.org
ದೂರವಾಣಿ ಸಂಖ್ಯೆ: ೦೮೦-೨೬೬೫೩೬೬೬

ಸಾರ್ವಜನಿಕರಿಗೆ ತೆರೆದಿರುವ ಸಮಯ:
೧೦:೩೦ am - ೫:೦೦ pm (ಸೋಮವಾರ-ಶನಿವಾರ)
೧೦:೦೦ am - ೨:೦೦ pm (ಆದಿತ್ಯವಾರ)

ಈ ಕೇಂದ್ರಕ್ಕೆ ನೀವು ಕೂಡ ಒಮ್ಮೆ ಭೇಟಿ ನೀಡಿ, ಕಲಿಯಿರಿ-ನಲಿಯಿರಿ!

ಇತಿ,
ಕೃಷ್ಣ ಶಾಸ್ತ್ರಿ

ಪ್ರವೇಶ ದ್ವಾರ


ಪ್ರವೇಶ ದ್ವಾರದ ಬಳಿ ಆಕರ್ಷಕ ಕಲಾಕೃತಿ


ತುಂತುರು ಮಾಹಿತಿ ಕೇಂದ್ರದ ಮುಖ್ಯ ಕಟ್ಟಡ


ಮಳೆನೀರಿನ ಕೊಯ್ಲಿನ ಪ್ರಾತ್ಯಕ್ಷಿಕೆ


ಮಳೆನೀರಿನ ಕೊಯ್ಲಿನ ಮತ್ತೊಂದು ಪ್ರಾತ್ಯಕ್ಷಿಕೆ
(ಇದರಲ್ಲಿ ಛಾವಣಿಯ ಕೆಳಗೆ ನೀರಿನ ಹರಿಯುವಿಕೆಗಾಗಿ ಪಿ.ವಿ.ಸಿ. ಬದಲು ಬಿದಿರಿನ ಉಪಯೋಗ ಮಾಡಿದ್ದಾರೆ)


ಮಳೆನೀರನ್ನು ಶುದ್ಢೀಕರಿಸಲು ಇಂತಹ ಅನೇಕ ವಿಧದ ಶೋಧಕ (ಫಿಲ್ಟರ್)ಗಳ ಪ್ರಾತ್ಯಕ್ಷಿಕೆಯನ್ನು ಅಲ್ಲಿ ನೋಡಬಹುದು


ಕಣ್ಮನಗಳನ್ನು ತಣಿಸುವಂತಹ ಸುಂದರ ಉದ್ಯಾನವನವೂ ಅಲ್ಲಿ ಇದೆ


ಈ ಚಿತ್ರದಲ್ಲಿರುವುದಕ್ಕಿಂತಲೂ ಎಷ್ಟೋ ಹೆಚ್ಚು ಸುಂದರವಾಗಿದೆ ಆ ಉದ್ಯಾನವನ


ಸಂಜೀವಿನಿ ಎಂಬ ಒಂದು ಮೂಲಿಕೆಗಳ ಉದ್ಯಾನವನವನ್ನೂ ಮಾಡಿದ್ದಾರೆ


ಒಂದು ವಿಹಂಗಮ ನೋಟ


ಮಾಹಿತಿಯನ್ನು ಪರಿಣಾಮಕಾರಿಯಾಗಿ ಪ್ರಾತ್ಯಕ್ಷಿಕೆಗಳ ಮೂಲಕ ಜನರಿಗೆ ತಲುಪಿಸಲು ಮೊಬೈಲ್ ವಾಹನವೂ ಇದೆ!


ಇನ್ನು ಕೇಂದ್ರದ ಒಳಗೆ ಹೋದರೆ ಅನೇಕ ಕುತೂಹಲಕಾರಿಯಾದ ಹಾಗೂ ಉಪಯುಕ್ತ ಮಾಹಿತಿಗಳು ಲಭ್ಯವಿವೆ, ಮಾಹಿತಿಯನ್ನು ಪರಿಣಾಮಕಾರಿಯಾಗಿ ತಿಳಿಸಲು ಅವರು ಉಪಯೋಗಿಸಿದ ಕೆಲವು ವಿಧಾನಗಳು ನಿಜಕ್ಕೂ ಪ್ರಶಂಸನೀಯ. ಇವೆಲ್ಲದ ಬಗ್ಗೆ ನೀವು ಖುದ್ದಾಗಿ ಅಲ್ಲಿಗೆ ಭೇಟಿ ನೀಡಿ ತಿಳಿದುಕೊಳ್ಳಿ, ಎಲ್ಲಾ ಇಲ್ಲಿಯೇ ಬರೆದರೆ ಆಮೇಲೆ ಕುತೂಹಲ ಉಳಿಯುವುದಿಲ್ಲ, ಅಲ್ಲವೇ? :-)

ಮಾತ್ರವಲ್ಲ, ವಾರದ ಬೇರೆ ಬೇರೆ ದಿನಗಳಂದು ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ವಿವಿಧ ಕಾರ್ಯಕ್ರಮಗಳನ್ನೂ ಅವರು ಹಮ್ಮಿಕೊಳ್ಳುತ್ತಾರೆ. ಹೋಗುವ ಮೊದಲು ಒಮ್ಮೆ ಅವರಿಗೆ ಕರೆ ನೀಡಿ - ಆಗ ನಿಮ್ಮ ಭೇಟಿಯನ್ನು ಇನ್ನೂ ಹೆಚ್ಚು ಉಪಯುಕ್ತವಾಗುವಂತೆ ದಿನ ಹೊಂದಿಸಿಕೊಂಡು ಹೋಗಲು ಸಾಧ್ಯವಾಗಬಹುದು.

5 comments:

Anonymous said...

ಪ್ರದರ್ಶನ, ಶಿಕ್ಷಣಗಳ ಇಂಥ ಮಾದರಿಗಳು ಹೊಸದರಲ್ಲಿ ನೋಡುವುದು ಚಂದವೇ. ಇಂದ್ದೊಂದು ಇದೆ, ಎಂದು ಗೆಳೆಯ ಸುಂದರರಾಯರು ಹೇಳುವುದು ಕೇಳಿದ್ದೆ. ಆದರೆ ಪ್ರತಿ ಇಲಾಖೆಯೂ ಇಂಥಾ ಯೋಜನೆಗಳನ್ನು (ದೂರ ದೃಷ್ಟಿಯಿಲ್ಲದೆ ಹೊಸೆಯುವುದು ಅನಂತರ ಪರಿಪಾಲನೆಗೆ ಅನುದಾನ, ಸಿಬ್ಬಂದಿಯಿಲ್ಲದೆ ಮೂಲ ಹೂಡಿಕೆಯೂ ವ್ಯರ್ಥವಾಗುವುದು ನಾವು ಎಷ್ಟೂ ಕಂಡಿರುವುದರಿಂದ `ಸಾರ್ವಜನಿಕ ಹಣ' ಪೋಲಾದ ಬಗ್ಗೆ ದುಃಖವೇ ಹೆಚ್ಚಾಗುತ್ತಿದೆ. ಇರುವ ಕೆರೆ, ವಿತರಣಾಜಾಲಗಳ ಸಾಮರ್ಥ್ಯ ಉಳಿಸಿಕೊಳ್ಳುವಲ್ಲಿ, ಹೆಚ್ಚಿಸುವಲ್ಲಿ, ನೀರ ಕೊರತೆಯ ಸವಾಲನ್ನು ಎದುರಿಸುವಲ್ಲಿ ಇಲ್ಲದ ಬುದ್ಧಿವಂತಿಕೆ ಇಂಥಲ್ಲಿ ಸೋರಿಹೋಗುತ್ತಲೇ ಇರುತ್ತವೆ. ಅರಣ್ಯ ಇಲಾಖೆ ಚಾರ್ಮಾಡಿಯಲ್ಲಿ ಕಟ್ಟಿದ ಮಲಯಮಾರುತ, ಬಿಸಿಲೆ ದಾರಿಯಲ್ಲಿ ಕಟ್ಟಿದ ಪರಿಸರ ಶಿಕ್ಷಣ ಕೇಂದ್ರ, ಕುಶಾಲನಗರ ಬಳಿಯ ಕಾವೇರಿ ನಿಸರ್ಗಧಾಮ ಪಟ್ಟಿ ದೊಡ್ಡದಿದೆ.
- ಸಿನಿಕ ವರ್ಧನ

Vikas Hegde said...

Thanks for the information. I will visit.

Venkatesh Dodmane said...

ಕೃಷ್ಣಶಾಸ್ತ್ರಿಗಳೇ, ಫೋಟೊಗಳ ಜತೆ ಉತ್ತಮ ಮಾಹಿತಿ, ಧನ್ಯವಾದಗಳು.

ನೋಡಿ, ಹತ್ತಿರದಲ್ಲೇ ಇರುವ ಎಷ್ಟೋ ಜನರಿಗೆ ಇದರ ಮಾಹಿತಿಯೇ ಇಲ್ಲ, ಅ೦ದಮೇಲೆ ಇದರ ಉಪಯೋಗವ೦ತೂ ಹೆಚ್ಚಿನ ಜನರಿಗೆ ಹೇಗಾಗಿರುತ್ತದೆ?
ಹಾಗ೦ತ ಜನರ ನಿರಾಸಕ್ತಿ ಎ೦ದರೂ ತಪ್ಪಾದೀತು.

ಇದಕ್ಕೆ ಒ೦ದು ಕಾರಣ ಸರ್ಕಾರದ ಅಸಮರ್ಪಕ ಪ್ರಚಾರ ತ೦ತ್ರ ನಿರ್ವಹಣೆ.

ಇದೊ೦ದೇ ಅಲ್ಲ, ಇ೦ಥವು ಹಲವು ತಾಣಗಳು, ಯೋಜನೆಗಳ ಮಾಹಿತಿ ಜನರಿಗೆ ಗೊತ್ತಿಲ್ಲ. ಬಹುಷಃ ಈ ಯೋಜನೆಗೆ ವೆಚ್ಚ ಮಾಡಿದ ಅರ್ಧದಷ್ಟು ಹಣವನ್ನು ಖಾಸಗಿಯವರಿಗೆ ಕೊಟ್ಟು ಅವರಿಗೇ ಸ೦ಪೂರ್ಣ ನಿರ್ವಹಣೆಗೆ ಕೊಟ್ಟಿದ್ದರೆ ಇದೇ ಪಾರ್ಕನ್ನು ಬೆ೦ಗಳೂರಿನ ಪ್ರಸಿಧ್ದ ಪ್ರವಾಸೀ ತಾಣವನ್ನಾಗಿ ಮಾಡಿಬಿಡುತ್ತಿದ್ದರು.

ಇ೦ದು ಕಾರ್ಪೊರೇಶನ್ನು, ಮ೦ಡಳಿಗಳು ಅ೦ದರೇ ಸಾಕು ವಾಕರಿಕೆ ಬರುವ೦ತೆ ಆಗಿವೆ ಅವುಗಳ ನಿರ್ವಹಣೆ.
ನೀವು ಬೆ೦ಗಳೂರಿನ ಯಾವುದೇ ನಾಲ್ಕು ರಸ್ತೆಗಳಲ್ಲಿ ಓಡಾಡಿದರೆ ಸಾಕು ನೋಡುತ್ತೀರ - ರಾಜಕಾರಣಿ-ಪುಢಾರಿಗಳ ಹುಟ್ಟುಹಬ್ಬ, ಜಯಭೇರಿ ಸಾರುವ ದೊಡ್ಡದೊಡ್ಡ ಬ್ಯಾನರ್ ಗಳನ್ನ. ಇ೦ಥಾ ಅಸಹ್ಯ ಭಿತ್ತಿಪತ್ರಗಳ ಬದಲಾಗಿ ಇ೦ಥಾ ದೊಡ್ಡ ಬ್ಯಾನರ್ ಗಳನ್ನು ಪ್ರವಾಸೀ ತಾಣ, ಮಾಹಿತೀ ತಾಣಗಳ ಬಗ್ಗೆ ಕೊಟ್ಟಿದ್ದರೆ ಖ೦ಡಿತವಾಗಿಯೂ ಜನಮೆಚ್ಚುತ್ತಿದ್ದರು. ಆದರೆ ಅದರಿ೦ದ ಅವರಿಗೇನು ಉಪಯೋಗ!

ಒ೦ದು ಕಾಲದಲ್ಲಿ ಎಲ್ಲೆ೦ದರಲ್ಲಿ ಅಸಹ್ಯವಾಗಿ ಭಿತ್ತಿ ಪತ್ರ ಅ೦ಟಿಸುತ್ತಿದ್ದರು, ಇದು ಅದರ ಮು೦ದುವರೆದ ರೂಪ ಅಷ್ಟೇ.
ಬಿಬಿಎ೦ಪಿ ಯ ಪ್ರಕಾರ ಇವೆಲ್ಲಾ ಕಾನೂನು ಬಾಹಿರ. ಆದರೆ ಅವರು ಏನು ಮಾಡುತ್ತಿದ್ದಾರೆ? ಈ ಉಪಟಳವನ್ನು ತಡೆಯುವವರು ಯಾರು, ಹೇಗೆ - ಬೇಲಿಯೇ ಎದ್ದು ಹೊಲಮೇಯ್ದರೆ?
ತುಕ್ಕು ಹಿಡಿದ ಸಲಾಕೆಗೆ ಹೊಳಪು ತರುವವರು ಆರು...?

Arun said...

ಮಾನ್ಯ ಕೃಷ್ಣ ಶಾಸ್ತ್ರಿಗಳೇ, ಅತ್ಯತ್ತಮವಾದ ಮಾಹಿತಿಗಾಗಿ ಧನ್ಯವಾದಗಳು.

ಕೃಷ್ಣ ಶಾಸ್ತ್ರಿ - Krishna Shastry said...

@Venkatesh Dodmane: ಇರಲಿ, ಏನು ಮಾಡುವುದು? ಏನಾದರೂ ಒಳ್ಳೆಯದನ್ನು ಕಂಡಾಗ ನಮ್ಮ ಮಿತಿಗಳ ಒಳಗೆ ಸಾಧ್ಯವಾದಷ್ಟೂ ನಮ್ಮಷ್ಟಕ್ಕೆ ಪ್ರಚಾರ ಮಾಡೋಣ.

Post a Comment