About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Sunday, September 2, 2012

ದೈನಂದಿನ ಜೀವನದಲ್ಲಿ ಪರಿಸರ ಸಂರಕ್ಷಣೆ



ಸಾರ್ವಜನಿಕ ವಿತರಣೆಗಾಗಿ ಈ ಲೇಖನದ ಮುದ್ರಣಸ್ನೇಹೀ ಆವೃತ್ತಿಯ ಕೊಂಡಿಗಳು:

ಪೀಠಿಕೆ

ನಿಸರ್ಗದ ಜೊತೆ ಬೆರೆತು ಬಾಳಿದರೆ ಪರಿಸರದ ಮೇಲೆ ದುಷ್ಪರಿಣಾಮ ಬೀರುವ, ಅದರ ಉಳಿವಿಗೆ ಪೂರಕವಾಗುವ ವಿಷಯಗಳ ಬಗ್ಗೆ ನಮ್ಮ ಸಾಮಾನ್ಯ ಜ್ಞಾನ ತಾನಾಗಿಯೇ ಬೆಳೆಯುತ್ತದೆ. ಆದರೆ ಇದು ಹೇಳಿದಷ್ಟು ಸುಲಭವಲ್ಲ, ಯಾಕೆಂದರೆ ಆಧುನಿಕ ಜಗತ್ತಿನಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದ ದೆಸೆಯಿಂದ ಇಂದಿನ ಮಾನವನ ಜೀವನ ಹಾಗೂ ಚಟುವಟಿಕೆಗಳು ಅತ್ಯಂತ ಸಂಕೀರ್ಣವಾಗಿವೆ. ಇದರಿಂದ ಹೆಚ್ಚಿನ ಮನುಷ್ಯರು ಪ್ರಕೃತಿಯಿಂದ ವಿಮುಖರಾಗಿ ವಿವಿಧ ಅನೈಸರ್ಗಿಕ ವೃತ್ತಿಗಳಲ್ಲಿ, ಚಟುವಟಿಕೆಗಳಲ್ಲಿ ಕಾಲಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ, ಕೆಲವೊಮ್ಮೆ ಇದು ಮನುಷ್ಯನ ಉದಾಸೀನತೆ, ತಿಳಿಗೇಡಿತನ ಎಂದು ಕಂಡುಬಂದರೆ ಅನೇಕ ಸಲ ಇದರಲ್ಲಿ ಜನಸಾಮಾನ್ಯನ ದೈನಂದಿನ ಆದ್ಯತೆ, ಅನಿವಾರ್ಯತೆ ಹಾಗೂ ಅಸಹಾಯಕತೆಗಳು ಎದ್ದುಕಾಣುತ್ತವೆ. ಹೀಗಿರುವಾಗ ಬಹುಪಾಲು ಜನರಿಗೆ ಇಷ್ಟವಿಲ್ಲದಿದ್ದರೂ ಕೂಡ ನಮ್ಮ ಕಣ್ಣಮುಂದೆಯೂ, ತೆರೆಮರೆಯಲ್ಲಿಯೂ ನಿಸರ್ಗ ಬಸವಳಿಯುತ್ತಾ ಸಾಗುತ್ತಿದೆ, ಈ ಪ್ರಕ್ರಿಯೆಯಲ್ಲಿ ನಾವೆಲ್ಲರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗೀದಾರರು ಎಂಬುದು ಕೂಡ ನಮಗೆಲ್ಲರಿಗೂ ಈಗ ಚೆನ್ನಾಗಿ ಗೊತ್ತಾಗಿರುವ ಸತ್ಯ. ಈ ಬಗ್ಗೆ ಕಾಳಜಿ, ಚಿಂತೆ ಇರುವವರನ್ನೂ ಗಾಢವಾಗಿ ಕಾಡುತ್ತಿರುವ ಪ್ರಶ್ನೆ ಎಂದರೆ – ಈ ನಿಟ್ಟಿನಲ್ಲಿ ನಾವೇನು ಮಾಡಬಹುದು? ಅಥವಾ ದೊಡ್ಡ ಮಟ್ಟಿಗೆ ಏನೂ ಬದಲಾವಣೆ ತರಲಾರದ ಹತಾಶ ಸ್ಥಿತಿಗೆ ಮಾನವಕುಲ ಸಾಮೂಹಿಕವಾಗಿ ಸಿಲುಕಿಹಾಕಿಕೊಂಡಾಗಿದೆಯೇ?

ಭರವಸೆ, ಕನಸು ಇಲ್ಲದಿದ್ದರೆ, ನಾಳೆ ಇಲ್ಲ. ಮಾನವನು ಕಲ್ಪಿಸಲೂ ಅಸಾಧ್ಯವೆನಿಸಿದ ಅನೇಕ ಸಂಗತಿಗಳನ್ನು ಈಗಾಗಲೇ ಸಾಧಿಸಿ ತೋರಿಸಿದ್ದಾನೆ. ಇಂಥಾದ್ದರಲ್ಲಿ ನಾವೇ ಹುಟ್ಟುಹಾಕಿದ ಸಮಸ್ಯೆಗಳನ್ನು ಮೀರಿ ನಮ್ಮ ಭವಿಷ್ಯವನ್ನು ಸುಭದ್ರಗೊಳಿಸಲು ಸಾಧ್ಯವಿಲ್ಲವೇ? ಖಂಡಿತಾ ಸಾಧ್ಯ ಇದೆ ಎಂಬ ನಿಲುವಿನೊಂದಿಗೆ ಮುಂದಿನ ಹೆಜ್ಜೆ ಇಡಿ ಎಂದು ನಿಮ್ಮಲ್ಲಿ ನನ್ನ ನಿವೇದನೆ. ನಮ್ಮ ಸುತ್ತಮುತ್ತಲೂ ಏನಿದೆ, ಏನು ನಡೆಯುತ್ತಿದೆ ಎಂಬುದನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಎಚ್ಚರದಿಂದ ಗಮನಿಸಿ ಜಾಗೃತರಾಗುವುದು ಮೊತ್ತಮೊದಲ ಹೆಜ್ಜೆ. ಇವೆಲ್ಲದರಲ್ಲಿ ಪರಿಸರದ ಹಿತಾಸಕ್ತಿಯನ್ನು ಕಾಪಾಡುವ ಅಂಶಗಳನ್ನು ಎತ್ತಿಹಿಡಿದು, ಪರಿಸರವನ್ನು ಕಡೆಗಣಿಸುವ ಅಂಶಗಳನ್ನು ಕೆಳತಳ್ಳುವ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತೇನೆ ಎಂಬ ಮನೋಭಾವವನ್ನು ಎಲ್ಲರೂ ಮೈಗೂಡಿಸಿಕೊಂಡರೆ ನಿಧಾನವಾಗಿ ಈ ಸಮಸ್ಯೆಗಳು ತೀವ್ರತೆಯನ್ನು ಕಳೆದುಕೊಂಡು ಕೊನೆಗೆ ಇಲ್ಲವಾಗುವವು.

ಪರಿಸರದ ಬಗ್ಗೆ ಜಾಗೃತರಾಗುವ ದಿಕ್ಕಿನಲ್ಲಿ ಗಮನಿಸಬೇಕಾದ ಅಂಶಗಳು

ಜನರು, ಸಂಘ-ಸಂಸ್ಥೆಗಳು – ಪರಿಸರಕ್ಕೆ ಅವರ ಕೊಡುಗೆಗಳು, ಪಾತ್ರ ಹಾಗೂ ಅವರ ನೈಜ ಉದ್ದೇಶಗಳು
ವಿವಿಧ ಯೋಜನೆಗಳು – ಅವುಗಳ ಹಿನ್ನೆಲೆ, ಪ್ರಸ್ತುತ ಹಂತ, ಫಲಾನುಭವಿಗಳು, ಅನಿವಾರ್ಯತೆ, ಹಿತಾಸಕ್ತಿಗಳು
ತ್ಯಾಜ್ಯ – ಉತ್ಪಾದನೆ, ಸಂಸ್ಕರಣೆ ಹಾಗೂ ವಿಲೇವಾರಿ
ಇಂಧನ-ಶಕ್ತಿ – ಬಳಕೆಯ ಪ್ರಮಾಣ, ನವೀಕರಣಗೊಳ್ಳುವ ಮೂಲಗಳ ಶೇಕಡಾವಾರು ಕೊಡುಗೆ
ನೀರು – ಬಳಕೆಯ ಪ್ರಮಾಣ, ಮಳೆನೀರಿನ ಇಂಗುವಿಕೆಯ ಪ್ರಮಾಣ, ವಿವಿಧ ಮೂಲಗಳ ಸ್ಥಿತಿಗತಿ
ಆಹಾರ, ಕೃಷಿ - ಕೀಟನಾಶಕಗಳ ಬಳಕೆ, ಸಾವಯವ ಕೃಷಿಯ ಬೆಳವಣಿಗೆ, ಪ್ರಾಣಿಮೂಲ ಆಹಾರದಿಂದ ಪರಿಸರಕ್ಕೆ ಆಗುವ ಆಘಾತ
ನೆಲ - ಬಳಕೆಯಲ್ಲಿ ಆಗುತ್ತಿರುವ ವ್ಯತ್ಯಾಸಗಳು – ಕಾಡು ಕೃಷಿಭೂಮಿಯಾಗುವುದು, ಕೃಷಿಭೂಮಿ ನಿವೇಶನಗಳಾಗುವುದು
ಜನಸಂಖ್ಯೆ - ಹೆಚ್ಚಳ-ಕಡಿತ ಹಾಗೂ ಅವರ ಒಟ್ಟಾರೆ ಬೇಡಿಕೆಯ ಮೇಲಿನ ಪರಿಣಾಮ
ಆರ್ಥಿಕತೆ - ಏರಿಳಿತದಿಂದ ಜನರ ಜೀವನಶೈಲಿ, ಅವರ ಬೇಡಿಕೆಗಳು ಹಾಗೂ ಪರಿಸರದ ಮೇಲೆ ಆಗುವ ಪರಿಣಾಮ
ಸ್ಥಳೀಯ ಸಂಸ್ಕೃತಿ, ಹಿರಿಯರ ಜೀವನಕ್ರಮ - ಅದರಲ್ಲಿರುವ ಒಳಿತು-ಕೆಡುಕುಗಳು (ಪರಿಸರದ ದೃಷ್ಟಿಯಿಂದ)
ಸ್ಥಳೀಯ ಪ್ರಾಣಿ-ಪಕ್ಷಿ-ಜಲಚರಗಳು – ಅವುಗಳ ಜೀವನಕ್ರಮ, ಅವುಗಳ ಉಳಿವಿಗೆ ಅವಶ್ಯವಾದ ಪರಿಸರ
ಪ್ರಕೃತಿ ಮುನಿಸಿಕೊಂಡರೆ ತಾಳಿಕೊಳ್ಳುವ ನಿಟ್ಟಿನಲ್ಲಿ ಪೂರ್ವಸಿದ್ಧತೆಗಳು

ಮನುಷ್ಯನ ಅಗತ್ಯ-ಪೂರೈಕೆಗಳ ಸರಪಳಿ

ಮನುಷ್ಯನ ಜೀವನ, ಅಗತ್ಯಗಳು ಹಾಗೂ ಅವುಗಳ ಪೂರೈಕೆ – ಇದೊಂದು ಸಂಕೀರ್ಣವಾದ ಜಾಲ. ಇದನ್ನು ಹೆಚ್ಚು ಹೆಚ್ಚು ಅರ್ಥಮಾಡಿಕೊಂಡಷ್ಟೂ ಪರಿಸರ ಸಂರಕ್ಷಣೆಯ ಕುರಿತಾದ ಚಿಂತನೆ, ವಿವರಣೆಗಳು ಸುಲಭವಾಗುತ್ತವೆ. ಈ ನಿಟ್ಟಿನಲ್ಲಿ ರಚಿಸಲಾದ ’ಮನುಷ್ಯನ ಅಗತ್ಯ-ಪೂರೈಕೆಗಳ ಸರಪಳಿ’ ಎಂಬ ಚಿತ್ರ ನಿರೂಪಣೆ ಸಹಾಯಕಾರಿಯಾಗಬಲ್ಲುದು ಎಂದು ನಂಬಿದ್ದೇನೆ.


ನಾವು ಮಾಡಲೇಬೇಕಾದ ಸಂಗತಿಗಳು

೧) ತ್ಯಾಜ್ಯದ ಉತ್ಪಾದನೆಯನ್ನೇ ಮಿತಗೊಳಿಸಿ (Reduce, Reuse)
-        ದೈನಂದಿನ ಜೀವನದಲ್ಲಿ ಅಥವಾ ವಿವಿಧ ಆಚರಣೆಗಳ ಸಂದರ್ಭದಲ್ಲಿ, ಸುಲಭದಲ್ಲಿ ಮಣ್ಣಾಗಿ ಹೋಗುವ ಪರಿಸರ ಸ್ನೇಹೀ ಉತ್ಪನ್ನಗಳನ್ನು ಖರೀದಿಸಿ. ಉದಾ: ಪ್ಲಾಸ್ಟಿಕ್ ಚೀಲದ ಬದಲು ಕಾಗದ ಅಥವಾ ಬಟ್ಟೆಯ ಚೀಲ, ಪ್ಲಾಸ್ಟರ್ ಆಫ್ ಪ್ಯಾರಿಸ್ ಬದಲು ಮಣ್ಣಿನ ಗಣೇಶ, ಪ್ಲಾಸ್ಟಿಕ್ ಗೋಣಿಗಳ ಬದಲು ಸೆಣಬಿನ ನಾರಿನ ಗೋಣಿ.
-        ಪುನಃ ಉಪಯೋಗಿಸಲು ಸಾಧ್ಯವಿರುವಂತಹ ವಸ್ತುಗಳನ್ನು ಸುಮ್ಮನೆ ಎಸೆಯಬೇಡಿ, ಮರುಬಳಕೆ ಮಾಡಿ. ನಿಮಗೆ ಬೇಡದಿದ್ದರೆ ಇತರರಿಗಾದರೂ ದಾನ ಮಾಡಿ.
-        ಸಾಧ್ಯವಾದಲ್ಲೆಲ್ಲಾ ‘ಎಸೆಯುವ ಸಂಸ್ಕೃತಿ’ಯ ಬದಲು ’ರಿಪೇರಿ ಸಂಸ್ಕೃತಿ’ಯನ್ನು ಅಳವಡಿಸಲು ಸಾಧ್ಯವೋ ಎಂಬುದನ್ನು ನೋಡಿ.
-        ಅಂಗಡಿಯವರಿಗೂ, ವ್ಯಾಪಾರಿಗಳಿಗೂ ಇಂತಹ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ. ಹೆಚ್ಚಿನ ಬೇಡಿಕೆ ಇದೆ ಎಂದು ಗೊತ್ತಾದರೆ ಅವರೇ ಗ್ರಾಹಕರನ್ನು ಓಲೈಸುವುದಕ್ಕೋಸ್ಕರ ಅಂತಹ ಕ್ರಮಗಳನ್ನು ಕೈಗೊಳ್ಳಬಹುದು.

೨) ತ್ಯಾಜ್ಯದ ಸಮರ್ಪಕ ವಿಂಗಡನೆ, ವಿಲೇವಾರಿ ಹಾಗೂ ನವೀಕರಣದಲ್ಲಿ ಕೈಜೋಡಿಸಿ (Recycle)
-        ಮನೆಯಲ್ಲಿಯೇ ಜೈವಿಕ, ಹಸಿ ತ್ಯಾಜ್ಯಗಳ ಸಂಸ್ಕರಣೆ ಮಾಡಿ (ಉದಾ: ಅಡುಗೆಮನೆಯ ಆಹಾರ ತ್ಯಾಜ್ಯ, ಉದ್ಯಾನವನದ ಹಸಿರು ತ್ಯಾಜ್ಯ). ಇದರಿಂದ ನೀವು ಮನೆಯಲ್ಲಿಯೇ ಪರ್ಯಾಯ ಇಂಧನ ಅಥವಾ ಗೊಬ್ಬರ ತಯಾರಿಸಬಹುದು, ಬೀದಿಯಲ್ಲಿರುವ ದನಗಳು, ನಾಯಿಗಳು ಪ್ಲಾಸ್ಟಿಕ್ ತಿನ್ನುವುದನ್ನೂ ತಪ್ಪಿಸಬಹುದು. ಇದನ್ನು ಅಪಾರ್ಟ್‍ಮೆಂಟಿನಲ್ಲಿರುವವರೂ ಮಾಡಬಹುದು.
-        ನವೀಕರಿಸಲು ಸಾಧ್ಯವಿರುವ ಕಾಗದ, ಲೋಹ, ಪ್ಲಾಸ್ಟಿಕ್ ಮುಂತಾದುವುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಇವನ್ನು ಮಾರಿದರೆ ಉತ್ತಮ ಬೆಲೆಯೂ ಸಿಗುತ್ತದೆ. ನಿಮಗೆ ಇದು ತಲೆನೋವು ಎಂದೆನಿಸಿದರೆ ಮನೆಕೆಲಸದವರಿದ್ದರೆ ಅವರನ್ನು ಪ್ರೋತ್ಸಾಹಿಸಿ, ಹಣವನ್ನೂ ಅವರೇ ಇಟ್ಟುಕೊಳ್ಳಲಿ.
-        ಸೋಂಕು ಉಂಟುಮಾಡುವ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಸರಿಯಾದ ಚೀಲದಲ್ಲಿ ಭದ್ರವಾಗಿ ಕಟ್ಟಿ ವಿಲೇವಾರಿ ಮಾಡಿ, ಬೀದಿನಾಯಿಗಳು, ಕಾಗೆಗಳು ಅವನ್ನು ಎಳೆದಾಡಿ ಹರಡದಂತೆ ಎಚ್ಚರವಹಿಸಿ. ಉದಾ: ಸ್ಯಾನಿಟರಿ ನ್ಯಾಪ್‍ಕಿನ್, ಡಯಾಪರ್, ಸೂಜಿ, ಬ್ಯಾಂಡೇಜ್ ಮುಂತಾದ ಆಸ್ಪತ್ರೆಯ ತ್ಯಾಜ್ಯಗಳು.
-        ಅಪಾಯಕಾರಿ ತ್ಯಾಜ್ಯಗಳನ್ನು ಮಕ್ಕಳ ಕೈಗೆ ಸಿಗದಂತೆ ಸಂಗ್ರಹಿಸಿ ಜಾಗ್ರತೆಯಾಗಿ ವಿಲೇವಾರಿ ಮಾಡಿ. ಉದಾ: ಟ್ಯೂಬ್‍ಲೈಟುಗಳು, ಸಿ.ಎಫ್.ಎಲ್. ಬಲ್ಬುಗಳು, ಇಲೆಕ್ಟ್ರಾನಿಕ್ ಉಪಕರಣಗಳು ಅಥವಾ ಬಿಡಿಭಾಗಗಳು.
-        ಉಳಿದ ನಿಷ್ಪ್ರಯೋಜಕ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡಿ. ನೆನಪಿಡಿ, ಇವುಗಳನ್ನು ನವೀಕರಿಸಲೂ ಸುಲಭದಲ್ಲಿ ಸಾಧ್ಯವಿಲ್ಲ, ಸುಲಭವಾಗಿ ಮಣ್ಣಿಗೂ ಸೇರುವುದಿಲ್ಲ, ಆದರೆ ಕಡೇಪಕ್ಷ ಇವುಗಳನ್ನು ಉಳಿದವುಗಳಿಂದ ಪ್ರತ್ಯೇಕಿಸಿದರೆ ಒಳಿತು. ಉದಾ: ಕೊಳಕಾದ, ಹರಿದ ಬಟ್ಟೆ ತುಂಡುಗಳು, ಹರಿದ ಚಪ್ಪಲಿ, ಹಲವು ಪದರಿನ ಕೃತಕ ವಸ್ತುಗಳು (ಉದಾ: ಥರ್ಮಕೋಲ್), ಚಿಪ್ಸ್ ಪ್ಯಾಕೇಟುಗಳು.
-        ವಿಂಗಡನೆ ಮಾಡಿ ವಿಲೇವಾರಿ ಮಾಡುವ ಪ್ರಬುದ್ಧ ವ್ಯವಸ್ಥೆ ಇಲ್ಲದಿದ್ದಲ್ಲಿ ಅದಕ್ಕೋಸ್ಕರ ಒತ್ತಾಯಿಸಿ, ವಿಂಗಡನೆ ಮಾಡುವುದು ನಿಮ್ಮ ಜವಾಬ್ದಾರಿ, ಆದರೆ ಅದರ ಮುಂದಿನ ವ್ಯವಸ್ಥೆಯನ್ನು ಕೇಳುವುದು ನಿಮ್ಮ ಹಕ್ಕು.

೩) ಇಂಧನ, ವಿದ್ಯುತ್ ಶಕ್ತಿ ಉಪಯೋಗದಲ್ಲಿ ಮಿತವ್ಯಯ ಸಾಧಿಸಿ
-        ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಹೆಚ್ಚಾಗಿ ಬಳಸಲು ಪ್ರಯತ್ನ ಮಾಡಿ. ಇದರಿಂದ ಪರಿಸರವೂ ಉಳಿಯುತ್ತದೆ, ದೇಶದ ಪೆಟ್ರೋಲಿಯಂ ಆಮದಿನ ಹೊರೆಯೂ ಕಮ್ಮಿಯಾಗುತ್ತದೆ.
-        ನಿಮ್ಮ ಮನೆಯೊಳಗೆ ಉತ್ತಮ ಗಾಳಿ, ಬೆಳಕು ಇರುವಂತೆ ನೋಡಿಕೊಳ್ಳಿ, ಹಗಲು ಹೊತ್ತನ್ನು ಚೆನ್ನಾಗಿ ಉಪಯೋಗಿಸಿ. ಆಗ ಫ್ಯಾನ್, ವಾತಾನುಕೂಲಿ, ವಿದ್ಯುತ್ ದೀಪಗಳು, ಇವೆಲ್ಲದರಲ್ಲಿ ವಿದ್ಯುತ್ ಶಕ್ತಿಯನ್ನು ಉಳಿಸಬಹುದು.
-        ನವೀಕರಿಸಲು ಸಾಧ್ಯವಿರುವ ಮೂಲಗಳನ್ನು ಉಪಯೋಗಿಸಿ. ಉದಾ: ಸೋಲಾರ್ ನೀರಿನ ಹೀಟರ್, ಸೋಲಾರ್ ದೀಪಗಳು

೭) ಸಾಧ್ಯವಾದಾಗಲೆಲ್ಲಾ ರಾಸಾಯನಿಕ ಮುಕ್ತ, ಸಾವಯವ ಹಾಗೂ ಸಸ್ಯಮೂಲದ ಆಹಾರ ಪದಾರ್ಥಗಳನ್ನೇ ಖರೀದಿಸಿರಿ. ಇದರಿಂದ ಪರಿಸರಕ್ಕೂ ನಿರಾಳ, ನಿಮ್ಮ ಆರೋಗ್ಯಕ್ಕೂ ವರದಾನ.

೮) ಸುತ್ತಮುತ್ತಲೂ ಹಸಿರು ಹೆಚ್ಚುವಂತೆ ಪ್ರಯತ್ನ ಮಾಡಿ. ನಿಮ್ಮ ಹುಟ್ಟುಹಬ್ಬದಂದು, ಇತರ ವಿಶೇಷ ದಿನಗಳಂದು ಗಿಡ ನೆಡುವ ಕಾರ್ಯ ಕೈಗೊಳ್ಳಿ, ಅದನ್ನು ನೀರೆರೆದು ಪೋಷಿಸಲು ಮರೆಯಬೇಡಿ.

೯) ಇಂಗು ಗುಂಡಿಗಳನ್ನು ಸ್ಥಾಪಿಸಿ. ಮನೆಯ ಸುತ್ತಮುತ್ತಲೂ ಹರಿದು ಪೋಲಾಗಿಹೋಗುವ ಮಳೆನೀರನ್ನು ಇಂಗಿಸಲು ವ್ಯವಸ್ಥೆ ಕಲ್ಪಿಸಲು ಸಾಧ್ಯವಾದರೆ ಮಾಡಿ.

ಇನ್ನೂ ಹೆಚ್ಚಿಗೆ ಮಾಡಬಹುದಾದ ಸಂಗತಿಗಳು

೧) ಅಗತ್ಯವಾದ ವಸ್ತುಗಳನ್ನಷ್ಟೇ ಖರೀದಿಸಿ, ಇದರ ಮೂಲಕ ತ್ಯಾಜ್ಯದ ಉತ್ಪಾದನೆಯಲ್ಲಿ ಮತ್ತೊ ಕಡಿತ ಸಾಧಿಸಿ (Refuse, Reduce). ನಿರುಪಯುಕ್ತ ತ್ಯಾಜ್ಯಗಳು ಗ್ರಾಮಾಂತರ ಪ್ರದೇಶಕ್ಕೆ ಹೋಗಿ ಅಲ್ಲಿಯ ಜನರ ಜೀವನ ನರಕ ಮಾಡುತ್ತದೆ ಎಂಬುದನ್ನು ನೆನಪಿಡಿ.

೨) ಪ್ರಕೃತಿಯ 4 ‘R’s – Refuse, Reduce, Reuse, Recycle ಈ ಸಿದ್ಧಾಂತವನ್ನು ಸಾಧ್ಯವಾದಲ್ಲೆಲ್ಲಾ ಇತರರಿಗೆ ಮನದಟ್ಟು ಮಾಡಿ. ಸುತ್ತಮುತ್ತ ಇರುವ ಎಳೆಯರಿಗೆ ಈ ಬಗ್ಗೆ ಎಷ್ಟು ಅರಿವಿದೆ ಎಂಬುದನ್ನು ವಿಚಾರಿಸಿ, ಅವರಿಗೆ ಈ ಬಗ್ಗೆ ತಿಳಿಹೇಳಿ.

೩) ಸ್ಥಳೀಯ ಉತ್ಪನ್ನಗಳನ್ನೇ ಖರೀದಿಸಿ, ಅವುಗಳ ಕಾರ್ಬನ್ ಫುಟ್‍ಪ್ರಿಂಟ್ ಕಡಿಮೆ ಇರುತ್ತದೆ, ಇದು ಸ್ಥಳೀಯ ಆರ್ಥಿಕತೆಗೂ ಒಳ್ಳೆಯದು.

೪) ಪರಿಸರಕ್ಕೆ ಪೂರಕವಾಗಿ ಕೆಲಸ ಮಾಡುವ ಸಂಘ-ಸಂಸ್ಥೆ ಅಥವಾ ವ್ಯಕ್ತಿಗಳನ್ನು ಎತ್ತಿಹಿಡಿಯಿರಿ, ಪ್ರೋತ್ಸಾಹಿಸಿ – ಇವರ ಜೊತೆ ಕಾಲಕಾಲಕ್ಕೆ ವಿಚಾರವಿನಿಮಯ ನಡೆಸುತ್ತಿರಿ, ಸಂಪರ್ಕ ಇರಿಸಿಕೊಳ್ಳಿ, ಇವರ ಬಗ್ಗೆ ಇತರರಿಗೂ ಹೇಳಿ.

೫) ಸ್ಥಳೀಯ ಯೋಜನೆಗಳ ಬಗ್ಗೆ ಜಾಗೃತರಾಗಿರಿ, ಅಗತ್ಯ ಬಿದ್ದಲ್ಲಿ ಕೈಜೋಡಿಸಿ ಪರಿಸರ ಸಂರಕ್ಷಣೆಗಾಗಿ ಹೋರಾಡಿ.

೬) ನಿಮ್ಮ ಜನಪ್ರತಿನಿಧಿಗಳನ್ನೂ ಪರಿಸರ ಪ್ರೇಮಿಗಳಾಗಲು ಒತ್ತಾಯಿಸಿ, ಅವರು ಪರಿಸರಕ್ಕಾಗಿ ಏನು ಮಾಡಿದ್ದಾರೆ ಎಂದು ಸಂದರ್ಭ ಸಿಕ್ಕಿದಾಗಲೆಲ್ಲಾ ಕೇಳಿ. ವೋಟು ಹಾಕಲು ಇದೂ ಒಂದು ಮಾನದಂಡ ಎಂದು ಅವರಿಗೆ ಮನವರಿಕೆಯಾಗಲಿ.

೭) ಸಸ್ಯಜನ್ಯ ಆಹಾರಕ್ಕೆ ಹೆಚ್ಚಿನ ಒತ್ತುಕೊಡಿ. ಪ್ರಾಣಿಜನ್ಯ ಆಹಾರೋದ್ಯಮ (ಕೋಳಿ-ಹಂದಿ ಫಾರ್ಮ್, ಹೈನುಗಾರಿಕೆ ಹಾಗೂ ಮೀನುಗಾರಿಕೆ) ಈ ಜಗತ್ತಿನಲ್ಲಿ ನಮ್ಮ ಸಹಜೀವಿಗಳಾದ ಇತರ ಪ್ರಾಣಿ-ಪಕ್ಷಿ-ಜಲಚರಗಳ ಹಕ್ಕನ್ನು ಕಸಿಯುವುದು, ಅವುಗಳಿಗೆ ವಿವಿಧ ರೀತಿಯಲ್ಲಿ ನೋವುಂಟುಮಾಡುವುದು ಮಾತ್ರವಲ್ಲ, ಅಪಾರ ಪ್ರಮಾಣದಲ್ಲಿ ಪರಿಸರನಾಶಕ್ಕೂ, ನೆಲ-ಜಲ-ವಾಯುಮಾಲಿನ್ಯಕ್ಕೂ ಕಾರಣವಾಗಿದೆ. ಸಸ್ಯಜನ್ಯ ಆಹಾರ ಆರೋಗ್ಯದ ದೃಷ್ಟಿಯಿಂದಲೂ ಅತ್ಯುತ್ತಮ. ಇದರ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿ.

೮) ಮರಗಳನ್ನು ಕಡಿಯುವುದರ ಬದಲು ಸ್ಥಳಾಂತರಿಸಿ. ಉದಾಹರಣೆಗಳು ವಿದೇಶಗಳಲ್ಲಿ ಕಾಣಸಿಗುತ್ತವೆ, ಇದರ ಬಗ್ಗೆ ಅಧ್ಯಯನ ಮಾಡಿ.

೯) ಜನಸಂಖ್ಯೆಯನ್ನು ನಿಯಂತ್ರಿಸಿ. ಜನಸಂಖ್ಯೆಯು ಅನಿಯಂತ್ರಿತವಾಗಿ ಹೆಚ್ಚುವುದು ಶಿಕ್ಷಣದ ಕೊರತೆ ಇದ್ದಲ್ಲಿ. ಜನಸಂಖ್ಯೆಯ ಹೆಚ್ಚಳ ಎಲ್ಲಾ ರೀತಿಯಲ್ಲಿಯೂ ಪರಿಸರಕ್ಕೆ ಆಘಾತ ಉಂಟುಮಾಡುತ್ತದೆ. ಹೀಗಾಗಿ ಜನಸಂಖ್ಯೆಯ ಹೆಚ್ಚಳವನ್ನು ಮಿತಗೊಳಿಸುವಲ್ಲಿ, ಅಶಿಕ್ಷಿತ ಜನರಲ್ಲಿ ಅರಿವು ಮೂಡಿಸುವಲ್ಲಿ ಪಾಲ್ಗೊಳ್ಳಿ.

ಪರಿಸರ ಸಂರಕ್ಷಣೆಯಲ್ಲಿ ಉಪಯುಕ್ತವಾದ ಮಾಹಿತಿಮೂಲಗಳು

“ನೆನಪಿಡಿ, ಮಾಹಿತಿಗೇನೂ ಕೊರತೆಯಿಲ್ಲ, ಆಗಬೇಕಾದದ್ದು ಅನುಷ್ಠಾನ”

ಆಹಾರ, ಕೃಷಿ:
-        ಕೃಷಿಗೆ ಸಂಬಂಧಿಸಿದ ದಕ್ಷಿಣ ಕನ್ನಡದ ಪ್ರಗತಿಪರ ಪತ್ರಿಕೆ: http://www.adikepatrike.com/
-        ರಾಸಾಯನಿಕ ಮುಕ್ತ ಸಾವಯವ ಆಹಾರಕ್ಕಾಗಿ ಚಳುವಳಿ: http://www.indiaforsafefood.in/
ನೀರು:
-        ಕನ್ನಡದಲ್ಲಿಯೂ ಲಭ್ಯವಿರುವ ಉಪಯುಕ್ತ ತಾಣ: http://www.indiawaterportal.org/
-        ಮಳೆನೀರಿನ ಸಂಗ್ರಹ ಹಾಗೂ ಉಪಯೋಗ: http://www.rainwaterclub.org/
ತ್ಯಾಜ್ಯ ನಿರ್ವಹಣೆ
-        ಬೆಂಗಳೂರಿನಲ್ಲಿ ಸಣ್ಣ ಕ್ರಾಂತಿ ಶುರುಮಾಡಿದ ಗುಂಪು: The Ugly Indian http://theuglyindian.com/
-        ಭಾರತದ ಘನ ತ್ಯಾಜ್ಯಗಳ ಬಗ್ಗೆ ಉಪಯುಕ್ತ ಮಾಹಿತಿಗಳನ್ನೊಳಗೊಂಡ ಬ್ಲಾಗ್: http://swmindia.blogspot.in/
-        ಹಸಿ ತ್ಯಾಜ್ಯವನ್ನು ಮನೆಯಲ್ಲಿಯೇ ಸಂಸ್ಕರಿಸಲು ಒಂದು ವಿಧಾನ: Daily Dump http://www.dailydump.org/
-        ಬೆಂಗಳೂರಿನ ಒಂದು ಸಂಸ್ಥೆ: Waste Wise Trust http://www.wwt.co.in/
ಹಸಿರು ಸಾರಿಗೆ
-        ಬೆಂಗಳೂರಿನಲ್ಲಿ ಸಣ್ಣಮಟ್ಟಿಗೆ ಶುರುವಾಗಿರುವ ಸೈಕಲ್ ಕ್ರಾಂತಿ: ನಮ್ಮ ಸೈಕಲ್ http://www.nammacycle.in/
ಪ್ರಾಣಿ-ಪಕ್ಷಿಗಳ ಹಿತರಕ್ಷಣೆ
-        ಮಂಗಳೂರಿನ ಶಕ್ತಿನಗರದಲ್ಲಿರುವ ಸಂಸ್ಥೆ: Animal Care Trust http://www.actmangalore.org/
ಇತರೆ:
-        ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ http://kscst.iisc.ernet.in/
-        ಪಿಲಿಕುಳ ನಿಸರ್ಗಧಾಮ http://www.pilikula.com/
-        India Environment Portal http://www.indiaenvironmentportal.org.in/
ಫೇಸ್‍ಬುಕ್ ತಾಣದಲ್ಲಿ ಗುಂಪುಗಳು
-        ದಕ್ಷಿಣ ಕನ್ನಡ Eco Club https://www.facebook.com/groups/349230271767242/
-        ಕೃಷಿಕರ ಗುಂಪು: Agriculturist https://www.facebook.com/groups/Agriculturist/
ಪರಿಸರಾಸಕ್ತರ, ತಜ್ಞರ ಅಂತರ್ಜಾಲ, ಬ್ಲಾಗ್ ತಾಣಗಳು
-        ಮಂಗಳೂರಿನ ಅತ್ರಿ ಪುಸ್ತಕಾಲಯದ ಅಶೋಕವರ್ಧನ http://www.athreebook.com/
-        ಸುಂದರ ರಾವ್ http://sundararao.blogspot.in/

ವಿ.ಸೂ. ಮಾಹಿತಿಮೂಲಗಳ ಕುರಿತಾಗಿ ನಿಮಗೆ ಹೆಚ್ಚಿನ ಮಾಹಿತಿಯಿದ್ದಲ್ಲಿ ದಯವಿಟ್ಟು ಹಂಚಿಕೊಳ್ಳಿ ಎಂದು ವಿನಂತಿ.

26 comments:

GVR Hegde said...

it is a very useful blog. I got the information from Kannada prabha news paper about this group

Unknown said...

useful

Anonymous said...

vry nic

RUCHIL said...

intresting news!!...

sindu said...

Thank at last I found my essay for my project.. Danyavadagalu..

Positive in ME! said...

Ji Can v use these information to bring awareness in our area?

Unknown said...

vry hplfull

Unknown said...

vry hplfull

Rk bhat said...

Very good information

Unknown said...

very helpful

Ki said...

Covered beautifully

Water said...

Ya it's good

Unknown said...

sir uttama parisarakkagi indhana ulithaya bagge maahithi needabahuda.

Unknown said...

Thank you very much for your information

Unknown said...

Thank God my project is done

Unknown said...

Can u people give an essay on Vanya jeevi samrkshane

Unknown said...

It is very helpful. It was good.

Unknown said...

ಟೀಮ್ ಪರಿಸರ ಮಾಡಬೇಕು ಅಂತಾಯಿದೀನಿ ಇದರಲ್ಲಿ ನಿಮ್ಮ ಅಭಿಪ್ರಾಯ ಬೇಕು. ಎಲ್ಲಾ ಜನರಲ್ಲಿ ಹೋಗಿ ಪರಿಸರ ಬಗೆ ಹೇಳೋದು ಶಾಲೆ ಕಾಲೇಜು ಗಳಲಿ ಹೋಗಿ ಪರಿಸರ ಬಗೆ ಹೇಳುವುದು ಅದರ ಬಗೆ ತಿಳಿಸುವುದು

Unknown said...

Spr do it bro

Unknown said...

Ya it

Unknown said...

It.is.very.helfull.thank.u

Unknown said...

Super idea sir

Unknown said...

Nice

Unknown said...

It is very useful to all the children

Unknown said...

Correct

Unknown said...

Thank you so much
It was really helpful
Can you post more as our surroundings

Post a Comment