About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Wednesday, September 5, 2012

ಬೆಂಗಳೂರು ಟ್ರಾಫಿಕ್ ಪೋಲೀಸರ ಕನ್ನಡ ಪ್ರೇಮ



ಬೆಂಗಳೂರು ಟ್ರಾಫಿಕ್ ಪೋಲೀಸರ ಫೇಸ್‍ಬುಕ್ ಪುಟ ಸಿಕ್ಕಿತು, ಕೆಲವು ದಿನಗಳಿಂದ ಕಾಡುತ್ತಿದ್ದ ಪ್ರಶ್ನೆಯೊಂದನ್ನು ಹಾಕಿಯೇಬಿಟ್ಟೆ.

ಪ್ರಶ್ನೆ ಹಾಕಿ ಒಂದೇ ಘಂಟೆಯಲ್ಲಿ ಉತ್ತರಿಸಿದರು! ಅದೂ ಸಾಕಷ್ಟು ವಿವರಗಳೊಂದಿಗೆ!! ಅದೂ ಅಚ್ಚಕನ್ನಡದಲ್ಲಿ!!! ನಾನು ಸಂಭ್ರಮಾಶ್ಚರ್ಯದಲ್ಲಿ ಮುಳುಗಿದ್ದೇನೆ. ಸಂಭಾಷಣೆಯ ಕೊಂಡಿ ಈ ಕೆಳಗಿನಂತಿದೆ:

https://www.facebook.com/permalink.php?story_fbid=393605270705186&id=147207215344994


ಉತ್ತರ ಸಂಪೂರ್ಣವಾಗಿ ತೃಪ್ತಿಯನ್ನು ನೀಡಲಿಲ್ಲವಾದರೂ ಇದನ್ನು ನೋಡಿ ನನಗೆ ತುಂಬಾ ಖುಷಿ ಆಗಿದೆ, ಕನ್ನಡದ ಉಳಿವಿನ ಬಗ್ಗೆ ಹೊಸ ಭರವಸೆ ಮೂಡಿದೆ. ನಿಮಗೇನನಿಸುತ್ತಿದೆ?

6 comments:

Anonymous said...

parvaagilla. hoge ondu bittare berella sari ide. Kannada innoo sari agabahudu endu aashisona.

Ashoka said...

ಇದನ್ನೋದಿದ ನನಗೂ ಕೂಡಾ ಕನ್ನಡ ದ ಉಳಿವಿನ ಬಗ್ಗೆ ಹೊಸ ಭರವಸೆ ಮೂಡಿತು.
ಮನೆಯ ಬೀಗದ ಕೈ ಕಳ್ಳನ ಕೈಗೆ ಕೊಟ್ಟರೆ ಮನೆಯಲ್ಲಿ ಕಳ್ಳತನ ನಡೆಯದು ಅನ್ನುತ್ತಾರೆ ಹಿರಿಯರು.
ಕನ್ನಡವನ್ನು ಉಳಿಸಿ ಬೆಳೆಸಬೇಕಾದರೆ ಬಹುಶ ಇವರಿ೦ದ ಸಾದ್ಯ ಅನ್ನಿಸಿತು.

ವಿ.ರಾ.ಹೆ. said...

ಮೊದಲಿಂದಲೂ ಬೆಂಗಳೂರು ಟ್ರಾಫಿಕ್ ಪೋಲೀಸ್ ಪುಟದಲ್ಲಿ ಕನ್ನಡದಲ್ಲಿ ಪ್ರಶ್ನೆ ಹಾಕಿದರೆ ಅವರು ಕನ್ನಡದಲ್ಲಿಯೇ ಉತ್ತರಿಸುತ್ತಾರೆ. ಹಲವು ವರ್ಷಗಳಿಂದ ಇದನ್ನು ನೋಡುತ್ತಿದ್ದೇನೆ. ನಾನು ಪ್ರಶ್ನೆ ಹಾಕಿ ಉತ್ತರವನ್ನೂ ಪಡೆದಿದ್ದೇನೆ. ಇದರಲ್ಲಿ ಕನ್ನಡದ ಉಳಿವಿನ ಬಗ್ಗೆ ‘ಹೊಸ‘ ಭರವಸೆ ಏನು ಕಂಡಿತು ನಿಮಗೆ?!! ‘ಕನ್ನಡದ ಉಳಿವು‘ ಅನ್ನುವುದರ ವ್ಯಾಪ್ತಿ ಬಹಳ ದೊಡ್ಡದಿದೆ.

ಕೃಷ್ಣ ಶಾಸ್ತ್ರಿ - Krishna Shastry said...

@ವಿ.ರಾ.ಹೆ. ಕನ್ನಡದ ಉಳಿವು ಎಂಬುದರ ವ್ಯಾಪ್ತಿ ಬಹಳ ದೊಡ್ಡದಿದೆ, ಹೌದು. ಇದರಲ್ಲಿ ಬಹುಮುಖ್ಯವಾದುದು ದೈನಂದಿನ ಜೀವನದಲ್ಲಿ ಅತ್ಯಂತ ಸ್ವಾಭಾವಿಕವಾಗಿ ಕನ್ನಡವನ್ನು ಬಳಸುವುದು.

ಸರಕಾರೀ ಯಂತ್ರಗಳು ಅಂತರ್ಜಾಲದಲ್ಲಿ ಕೂಡ ಇಷ್ಟರಮಟ್ಟಿಗೆ ಕನ್ನಡ ಬಳಸುತ್ತಾರೆ ಎಂಬುದು ನನಗೆ ತಿಳಿದಿರಲಿಲ್ಲ. ಇತ್ತೀಚೆಗಷ್ಟೇ ಬೆಂಗಳೂರಿಗೆ ಬಂದ ನನಗೆ ಇದನ್ನು ನೋಡಿ ಖುಷಿ ಆಯಿತು, ಅದಕ್ಕೆ ಬರೆದೆ, ಅಷ್ಟೆ.

ವಿ.ಸೂ. ಕೆಲವು ಕಡೆ ಇವರು ಕನ್ನಡವನ್ನು ಮಾತ್ರ ಬಳಸಿ ಇತರರಿಗೆ ಅನಾನುಕೂಲ ಉಂಟುಮಾಡುತ್ತಾರೆ ಎಂಬ ಟೀಕೆಗಳನ್ನೂ ನೋಡಿದ್ದೇನೆ. ಇಂತಹ ಟೀಕೆಗಳಲ್ಲಿ ಕೆಲವುದರಲ್ಲಿ ಹುರುಳಿದೆ ಎಂದೂ ಇನ್ನು ಕೆಲವುದರ ಹಿಂದೆ ಸ್ಥಳೀಯ ಭಾಷೆ-ಸಂಸ್ಕೃತಿಗಳ ಬಗ್ಗೆ ಅಸಡ್ಡೆಯಿದೆ ಎಂದೂ ಕಾಣುತ್ತದೆ. ಇರಲಿ, ಅದು ಬೇರೆಯೇ ವಿಷಯ.

Anonymous said...

ಪ್ರಿಯ ಕೃಷ್ಣ, ಕೆಟ್ಟ {ಹೋಗೆ} ಅಥವಾ ಅತಿಯಾಗಿ {ಹೋಗೆ} ಉಗುಳುವ ವಾಹನಗಳಮೇಲೆ ಸಂಬಂದಿಸಿದ ಆರ್.ಟಿ.ಓ. ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. {ಸಂಚಾರ} {ಪೋಲಿಸೆರವರಾದ} ನಾವು, ವಾಹನದ {ಹೋಗೆ} ಹೊರಸೂಸುವ ಪರೀಕ್ಷೆಯ ಪ್ರಮಾಣಪತ್ರವು ನ್ಯಾಯಸಮ್ಮತವಾಗಿದೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬಹುದು. ಒಂದು ವೇಳೆ ವಾಹನವು ಕೆಟ್ಟ {ಹೋಗೆ} ಉಗುಳುತಿದ್ದರೆ, ಅವರಿಗೆ ಒಂದು ನೋಟೀಸನ್ನು ನೀಡಿ ನ್ಯಾಯಾಲಯದ ಮುಂದೆ ಹಾಜರಾಗಿ, ನೋಟೀಸನ್ನು ಜಾರಿಮಾಡಿದ {ವಾಹನು} ಕೆಟ್ಟ {ಹೋಗೆ} ಉಗುಳುತಿಲ್ಲದಿರುವುದನ್ನು ಸಾಭೀತುಪಡಿಸಬೇಕು, ಇಲ್ಲದಿದ್ದಲ್ಲಿ ನ್ಯಾಯಾಲಯವು ವಿಧಿಸುವ ದಂಡ ಅಥವಾ ಶಿಕ್ಷೆ(ಜೈಲುವಾಸ) ಅನುಭವಿಸಬೇಕು. ನೀವು ಕೆಟ್ಟ {ಹೋಗೆ }ಉಗುಳುವ ವಾಹನದ ಸಂಖ್ಯೆಯನ್ನು ನೀಡಿದರೆ ಆ ವಾಹನದ ಮೇಲೆ ದಂಡ ವಿಧಿಸುವ ಕಾನೂನು ನಮಗೆ ಇರುವುದಿಲ್ಲ, ನೀವು ನೀಡಿದ ವಾಹನದ ಸಂಖ್ಯೆಯು, ಮುಂದಿನ ಯಾವ ಯಾವ ಸ್ಥಳದಲ್ಲಿ {ಸಂಜರಿಸುತಿದೆಯಂದು} ಹುಡುಕಿ, ಹಿಡಿದು, ಅವರ ವಾಹನವನ್ನು ಪರಿಶೀಲಿಸಿ ನೋಟೀಸನ್ನು ನೀಡುವ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.

ಕೃಷ್ಣ ಶಾಸ್ತ್ರಿ - Krishna Shastry said...

@Anonymous: ಹುಳುಕನ್ನೇ ಎತ್ತಿ ಹಿಡಿಯುವುದು ಮುಖ್ಯ ಎಂದಾದರೆ ನಿಮ್ಮ ಪ್ರಯತ್ನಕ್ಕೆ ಶಹಬ್ಬಾಸ್ ಎನ್ನುತ್ತೇನೆ :-) ಇದನ್ನು ಫೇಸ್‍ಬುಕ್ಕಿನಲ್ಲಿಯೂ BTPಗೆ ಕಾಣುವಂತೆ ಹಾಕಿದರೆ ಇನ್ನೂ ಉತ್ತಮವಲ್ಲವೇ?!

Post a Comment