Friday, August 24, 2012

ಮನುಷ್ಯನ ಅಗತ್ಯ-ಪೂರೈಕೆ ಸರಪಳಿ


ನೀವು ಆಹಾರ ಸರಪಳಿಯನ್ನು ನೋಡಿರಬಹುದು, ಆದರೆ ಮನುಷ್ಯನ ಅಗತ್ಯ-ಪೂರೈಕೆಗಳ ಸರಪಳಿಯನ್ನು ನೋಡಿದ್ದೀರಾ? ಇಲ್ಲಿದೆ ನೋಡಿ ಈ ನಿಟ್ಟಿನಲ್ಲಿ ಒಂದು ಪ್ರಯತ್ನ.

ಈ ಚಿತ್ರವನ್ನು (ಎಲ್ಲಿಂದ ಎಲ್ಲಿಗೆ ಬಾಣದ ಗುರುತು ಹೋಗಿದೆ ಹಾಗೂ ಹೋಗಲಿಲ್ಲ ಎಂಬುದನ್ನು) ಸೂಕ್ಷ್ಮವಾಗಿ ಗಮನಿಸಿದರೆ ವಿವಿಧ ವಿಷಯಗಳ ಮಧ್ಯೆ ಪರಸ್ಪರ ಇರುವ ಜಟಿಲ ಸಂಬಂಧ ವ್ಯಕ್ತವಾಗುವುದು.

ನಾವು ನಿತ್ಯವೂ ಓದುವ-ಕೇಳುವ ಅನೇಕ ವಿಷಯಗಳನ್ನು ಇದರ ಮೂಲಕ ಸುಲಭವಾಗಿ ವಿವರಿಸಬಹುದು, ಪ್ರತ್ಯೇಕವಾಗಿ ಮಕ್ಕಳಿಗೆ. ಉದಾ: ಜನಸಂಖ್ಯೆಯ ಹೆಚ್ಚಳದಿಂದ ಯಾವ ರೀತಿಗಳಲ್ಲಿ ಪರಿಸರಕ್ಕೆ ಹಾನಿಯುಂಟಾಗಬಹುದು? ಶಕ್ತಿ, ಇಂಧನ ಇತ್ಯಾದಿ ನಮ್ಮ ಒಟ್ಟಾರೆ ಜೀವನದಲ್ಲಿ ಯಾವ ಪಾತ್ರ ವಹಿಸಿವೆ? ಇತ್ಯಾದಿ.

ಒಟ್ಟಿನಲ್ಲಿ ಯಾವುದಾದರೊಂದರ (ಮನುಷ್ಯನ ಸಂಖ್ಯೆಯನ್ನೂ ಸೇರಿಸಿ) ಹೆಚ್ಚಳ ಅಥವಾ ಕೊರತೆಯು ಹೇಗೆ ಇನ್ನೊಂದರ ಮೇಲೆ, ಹಾಗೂ ಕೊನೆಗೆ ಒಟ್ಟಾರೆ ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರಬಹುದು ಎಂಬಂತಹ ಅಧ್ಯಯನಗಳಲ್ಲಿ ಅಥವಾ ಸುಲಭ ವಿವರಣೆಯ ಸಂದರ್ಭಗಳಲ್ಲಿ ಇದು ಸಹಾಯಕಾರಿಯಾಗಬಹುದೆಂದು ನಂಬಿದ್ದೇನೆ.


No comments:

Post a Comment