About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Monday, August 27, 2012

ಒಂದು ಮೊಬೈಲ್ ಕರೆ


ಕೆಲವು ನಿಮಿಷಗಳ ಹಿಂದೆ ಒಂದು ಮೊಬೈಲ್ ಕರೆ ಬಂತು, ಸ್ವೀಕರಿಸಿದೆ.

ನಾನು: ಹಲೋ

Good morning, this is XYZ from Bimal Maruti

ನಾನು: ಸರಿ, ಹೇಳಿ

XYZ: Can I speak to you now? Is this a good time?

ನಾನು: ಹೇಳಿ, ಹೇಳಿ, ಪರವಾಗಿಲ್ಲ

XYZ: Sir, this is regarding the feedback form

ನಾನು: ನಿಮ್ಗೆ ಕನ್ನಡ ಬರತ್ತಾ?

(ಅತ್ತ ಕಡೆಯಿಂದ ಅಸ್ಪಷ್ಟ ಉತ್ತರ, ಕನ್ನಡ ಬರತ್ತೆ ಎಂದೇನೋ ಹೇಳಿದ ಹಾಗಾಯಿತು)

ನಾನು: ಕನ್ನಡ ಬರೋದಾದ್ರೆ ಕನ್ನಡದಲ್ಲೇ ಮಾತಾಡಿ, ಸುಮ್ನೆ ಯಾಕೆ ಇಂಗ್ಲಿಷ್ ಬಿಡ್ತೀರಾ?

XYZ: Sorry sir, you cannot follow English?

ನಾನು: (ವಿನಯಪೂರ್ವಕವಾಗಿಯೇ) ನೀವು ಬೆಂಗಳೂರಿನಲ್ಲಿ ಇರೋದಲ್ವಾ? ಕನ್ನಡದಲ್ಲಿ ಮಾತಾಡಿ, ಏನು ತೊಂದರೆ?

XYZ: hmm, one min sir

೫ ಕ್ಷಣ ಕಾದೆ, ಆ ಕಡೆಯಿಂದ ಟಕ್ ಅಂತ ಡಿಸ್‍ಕನೆಕ್ಟ್ ಆಯಿತು, ಪುನಃ ಕರೆ ಬರಲೂ ಇಲ್ಲ, ಹೇಗಿದೆ ನೋಡಿ ಅವರ ಗ್ರಾಹಕ ಸೇವಾ ದಕ್ಷತೆ?

ನಮಗೆ ಅನಿವಾರ್ಯವಾದ ಕೆಲಸವಾಗಬೇಕಾದಾಗ ಹೀಗೆಲ್ಲಾ ಮಾಡಲು ಸಾಧ್ಯವಾಗುವುದಿಲ್ಲ, ಆದರೆ ಅನಿವಾರ್ಯತೆ ಆಚೆ ಬದಿಯವರಿಗಿದ್ದಾಗಲಾದರೂ ನಮ್ಮ ಕನ್ನಡವನ್ನು ತುಸು ಎತ್ತಿ ಹಿಡಿಯೋಣವೇ?

ಇತಿ,
ಕೃಷ್ಣ ಶಾಸ್ತ್ರಿ

6 comments:

Anonymous said...

ತುಂಬಾ ಸರಿಯಾಗಿದೆ; ಅನಿವಾರ್ಯವಾದ ಹೊರತು ಇಂಗ್ಲೀಷಿನಲ್ಲಿ ಮಾತನಾಡದಿದ್ದರೆ ಕನ್ನಡ ಉಳಿಯುತ್ತದೆ.
- ವಿ. ಜಿ. ಭಟ್

Unknown said...

ಇವರು ಎ೦ಥ ಕನ್ನಡಿಗರು?

Unknown said...

ಇವರು ಎ೦ಥ ಕನ್ನಡಿಗರು?

KVK said...

Nange Kannada dalli 121/125 anka bandittu, sslc nalli. Adre iga illi bari Hindi, Telugu matadtini :-(

ವಿ.ರಾ.ಹೆ. said...

ಸುಮಾರು ಬ್ಯಾಂಕುಗಳ, ಸಂಸ್ಥೆಗಳ, ಕಂಪನಿಗಳ ಗ್ರಾಹಕ ಸೇವೆಯಲ್ಲಿ ಕನ್ನಡ ಆಯ್ಕೆಯೇ ಇಲ್ಲ. ಬರೀ ಇಂಗ್ಲೀಷು ಮತ್ತು ಇಲ್ಲಿ ಅಗತ್ಯವಿರದ ಹಿಂದಿ ಇರುತ್ತದೆ. ನಾವು ಗ್ರಾಹಕರು ಇದರ ಬಗ್ಗೆ ದೂರು ಕೊಡಬೇಕು ಮತ್ತು ಸಾಧ್ಯವಿರುವ ಕಡೆಯೆಲ್ಲಾ ಕನ್ನಡವನ್ನೇ ಬಳಸಬೇಕು, ಮತ್ತು ಕೇಳಬೇಕು.

Unknown said...

ನಿಮಗಿದು ಗೊತ್ತೆ ??
ಗ್ರಾಹಕರ ಸೇವಾ ಆಯ್ಕೆ ಮಾಡುವವರು ಕೊಡ ಕನ್ನಡಿಗರಲ್ಲ !!!
ಎಲ್ಲರೂ ಅವರವವರ ರಾಜ್ಯದವರನ್ನು ಮಾತ್ರ ಮೇಲೆ ಎತುತ್ತ ಇದ್ದಾರೆ.
ಇದೆ ಬೆಂಗಳೋರು ನಗರದ ವಿಪರ್ಯಾಸ !!!!
.

Post a Comment