About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Friday, July 20, 2012

ಸಹಾಯ ಬೇಕು: ತ್ಯಾಜ್ಯ ನಿರ್ವಹಣಾ ಸಂಸ್ಥೆಯೊಂದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕು


ಪ್ರಿಯರೇ,

ತ್ಯಾಜ್ಯ ನಿರ್ವಹಣೆ/ವಿಲೇವಾರಿ ಒಂದು ದೊಡ್ಡ ಸಮಸ್ಯೆ. ಇದರ ಪರಿಹಾರದ ಹೆಸರಿನಲ್ಲಿ ಅನೇಕ ಕಂಪನಿಗಳು ತಲೆಯೆತ್ತುತ್ತಿವೆ, ಉತ್ಪನ್ನಗಳು ಮಾರುಕಟ್ಟೆಯಲ್ಲಿ ಬರಲಾರಂಭಿಸಿವೆ. ಆದರೆ ಈ ಕ್ಷೇತ್ರದಲ್ಲಿ ಕೆಲವರು ಮೂಲೋದ್ದೇಶಕ್ಕಿಂತಲೂ ಹೆಚ್ಚಾಗಿ ಲಾಭೋದ್ದೇಶದ ಬೆನ್ನು ಹತ್ತಿದರೆ, ಆಂಶಿಕವಾಗಿ ಅಥವಾ ಸಂಪೂರ್ಣವಾಗಿ ಸುಳ್ಳು ಹೇಳಿ ತಮ್ಮ ಬೇಳೆ ಬೇಯಿಸಲು ಯತ್ನಿಸಿದರೆ ಅದರಲ್ಲಿ ಆಶ್ಚರ್ಯವಿಲ್ಲ. ಹಾಗೆಂದು ಒಟ್ಟಾರೆ ನಮ್ಮೆಲ್ಲರ ಹಾಗೂ ಪರಿಸರ ಒಳಿತಿಗಾಗಿ ಕೆಲಸ ಮಾಡುವವರನ್ನು, ಹೊಸ ಆವಿಷ್ಕಾರ ಮಾಡುವವರನ್ನು ಸದಾ ಸಂಶಯದ ದೃಷ್ಟಿಯಿಂದಲೇ ನೋಡುವುದು, ಗಾಳಿ ಸುದ್ದಿ ಹಬ್ಬಿಸುವುದು ಕೂಡ ಸರಿಯಲ್ಲ. ಒಟ್ಟಿನಲ್ಲಿ ನಾನು ಸಾಧ್ಯವಾದಲ್ಲೆಲ್ಲಾ ತುಸು ಜಾಗ್ರತೆಯಿಂದಿರಲು ಯತ್ನಿಸುತ್ತಿದ್ದೇನೆ.

ದಯವಿಟ್ಟು ಈ ಕೆಳಗಿನ ತಾಣವನ್ನು ನೋಡಿ ಎಂದು ವಿನಂತಿ: http://nowaste.in/

ಇವರು ಕೇರಳದ ಕೆಲವು ಆಸ್ಪತ್ರೆಗಳಲ್ಲಿ ತಮ್ಮ ಉಪಕರಣವನ್ನು ಅಳವಡಿಸಿದ್ದಾರಂತೆ, ಹಾಗೂ ಇದರ ಫಲಿತಾಂಶದಿಂದ ಅಂತಹ ಆಸ್ಪತ್ರೆಗಳ ಮಾಲಕರು/ಮ್ಯಾನೇಜ್‍ಮೆಂಟ್ ಬಹಳ ತೃಪ್ತರಾಗಿದ್ದಾರಂತೆ. ಏಕಕಾಲಕ್ಕೆ ವಿವಿಧ ರೀತಿಯಲ್ಲಿ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿರುವ ಕೇರಳದ ಖಾಸಗೀ ಆಸ್ಪತ್ರೆಗಳನ್ನು ಸರಕಾರೀ ಮಾಲಿನ್ಯ ನಿಯಂತ್ರಣ ವಿಭಾಗ ಕೂಡ ಹಿಂಡುತ್ತಿರುವ ಇಂದಿನ ದಿನಗಳಲ್ಲಿ ಇದೊಂದು ಸರಳ ಪರಿಹಾರ ಎಂದು ಅವರಿಗೆ ಕಂಡುಬಂದರೆ ಅಚ್ಚರಿಯಿಲ್ಲ. ಆದರೆ ಮೇಲ್ನೋಟಕ್ಕೆ ಅದ್ಭುತ ಎಂದು ಕಂಡುಬಂದರೂ ಕೂಡ ಪರಿಸರದ ವಿಷಯದಲ್ಲಿ ತುಸು ಅಧ್ಯಯನ ನಡೆಸಿದವರಿಗೆ ಇದರಲ್ಲಿ ಟೊಳ್ಳುತನ ಎದ್ದು ಕಾಣುವುದು ಸಹಜ ಎಂಬುದು ನನ್ನ ಅಭಿಪ್ರಾಯ.

ನಾನು ಅವರಲ್ಲಿ ಹಲವು ಪ್ರಶ್ನೆಗಳನ್ನು ಕೇಳಿದೆ, ಆದರೆ ಅದಕ್ಕೆ ಅವರು ಲಿಖಿತರೂಪದಲ್ಲಿ ಕೊಟ್ಟ ಉತ್ತರಗಳು ಅಷ್ಟೇನೂ ಸಮಾಧಾನಕರವಾಗಿರಲಿಲ್ಲ. ಇನ್ನುಳಿದಂತೆ ಮುಖತಃ ಭೇಟಿಯಾದಾಗ ವಿವರಿಸುತ್ತೇವೆ ಎಂಬ ಭರವಸೆ ಕೊಟ್ಟಿದ್ದಾರೆ.

1) Kindly let me know how do you compare generic incinerator and CORT equipment on various parameters?

Ans: CORT Incinerator also comes under generic category. Only difference is that IT WORKS WITHOUT ANY FUEL due to its constructional technique.

2) Could you kindly quantify least minimum CO2 emission in your equipment? What about emission of other gases?

Ans: Depends upon the waste in put.

3) What would the "Ash" contain? Could you explain it with some typical waste examples? This is very important.

Ans: Ash can be used as "manure".

4) Regarding "Waste to Ash", what kind of quantity reduction we are talking about here and eventually how to dispose the Ash off?

Ans: 100kgs reduces to max. 4-5 kgs of ashes.

5) Would you recommend your product for bio-medical waste also?

Ans: Not recommended for Bio-medical waste. However, almost 80% of the hospital waste are non-bio medical waste and can be burned without fuel if used CORT.

6) Is this product reviewed/recommended by any pro-environment organizations/specialists? Kindly share the details.

Ans: NA

7) Is this product recognized/recommended by government pollution control boards? Please share more details.

Ans: It is an energy conserving one. It is acceptable as per rule for general category of solid waste.

ದಯವಿಟ್ಟು ಗಮನಿಸಿ: ಇವರು ತಮ್ಮ ತಾಣದಲ್ಲಿ ಯಾವುದೇ ರೀತಿಯಲ್ಲಿಯೂ ತ್ಯಾಜ್ಯದ ಮರುಬಳಕೆಯನ್ನು ಎತ್ತಿ ಹಿಡಿಯುತ್ತಿಲ್ಲ. ಇದು ಪರಿಸರ-ಹಸಿರಿನ ಬಗ್ಗೆ ನಿಜವಾದ ಕಾಳಜಿ ಇರುವ ಸಂಸ್ಥೆಯೊಂದರ ಕಾರ್ಯವೈಖರಿ ಆಗಲು ಸಾಧ್ಯವಿಲ್ಲ. ಮಾತ್ರವಲ್ಲ ಯಾವುದೇ ವೈಜ್ಞಾನಿಕ ಪುರಾವೆಗಳನ್ನು ಲಗತ್ತಿಸದೇ, ಯಾವುದೇ ಗುಣಮಟ್ಟ ನಿಯಂತ್ರಣ ಸಂಸ್ಥೆಗಳ ಮಾನ್ಯತೆ (Quality Certification) ಪಡೆಯದೆ ಮಾಲಿನ್ಯರಹಿತಎಂಬ ಹಣೆಪಟ್ಟಿಯನ್ನು ಧರಿಸಿಕೊಳ್ಳುತ್ತಿದ್ದಾರೆ. ಬೂದಿಯನ್ನು ಗೊಬ್ಬರವಾಗಿ ಹಾಕಬಹುದು ಎಂಬ ಮಾತಂತೂ ತೀರಾ ಅವೈಜ್ಞಾನಿಕ ಎಂದು ನನಗೆ ಕಾಣುತ್ತದೆ. ಪರಿಸರ ಪರ ತಜ್ಞರು ಹಾಗೂ ಸಂಸ್ಥೆಗಳ ಬಗ್ಗೆ ಕೂಡ ಇವರಿಗೆ ಅಸಡ್ಡೆ ಇರುವಂತಿದೆ (ಪ್ರಶ್ನೆ ೬ಕ್ಕೆ NA ಎಂದು ಉತ್ತರಸದ್ದಾರೆ ನೋಡಿ!)

ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ದಯವಿಟ್ಟು ತಿಳಿಸುವಿರಾ?

ಬಹುಷಃ ಮುಂದಿನ ವಾರ ನನಗೆ ಇವರ ಜೊತೆಗೆ ಮೀಟಿಂಗ್ ಇರಲೂಬಹುದು. ಆದರೆ ಅಷ್ಟರಲ್ಲಿ ಇತರ ಮೂಲಗಳಿಂದ ಈ ಬಗ್ಗೆ ಹೆಚ್ಚು ಮಾಹಿತಿ ಸಂಗ್ರಹ ಮಾಡಲು ಯತ್ನಿಸುತ್ತಿದ್ದೇನೆ. ನಿಮ್ಮ ಬಳಿ ಈ ಬಗ್ಗೆ ಹೆಚ್ಚಿನ ಮಾಹಿತಿ ಇದ್ದರೆ ಅಥವಾ ಈ ಕ್ಷೇತ್ರದಲ್ಲಿರುವ (ಪರಿಸರ ಪ್ರೇಮಿ) ತಜ್ಞರ ಸಂಪರ್ಕ ಮಾಹಿತಿ ಇದ್ದರೆ ದಯವಿಟ್ಟು ಹಂಚಿಕೊಳ್ಳಿ ಎಂದು ವಿನಂತಿ.

ಈ ಬಗ್ಗೆ ಹೆಚ್ಚು ಮಾಹಿತಿ ಸಂಗ್ರಹವಾದರೆ ಅದನ್ನು ನಾನು ನಿಮ್ಮೊಡನೆ ಇಲ್ಲಿ ಹಂಚಿಕೊಳ್ಳುತ್ತೇನೆ.

ಇತಿ,
ಕೃಷ್ಣ ಶಾಸ್ತ್ರಿ.


-------------------------------------------------------------------------------

ವಿ.ಸೂ. ಈ ವಿಷಯವಾಗಿ ನಾನು ಇನ್ನೂ ಹೆಚ್ಚಿನ ಜನರನ್ನು ತಲುಪಬೇಕು ಎನ್ನುವ ಉದ್ದೇಶದಿಂದ ಆಂಗ್ಲಭಾಷೆಯಲ್ಲಿ ಮುಂದುವರಿಸುತ್ತೇನೆ. ಅನಾನುಕೂಲತೆಯಾಗಿದ್ದಲ್ಲಿ ಕ್ಷಮಿಸಿರಿ.

5 comments:

Anonymous said...

ಬೂದಿಯನ್ನು ಗೊಬ್ಬರವಾಗಿ ಹಾಕಬಹುದು ಎಂಬ ಮಾತಂತೂ ತೀರಾ ಅವೈಜ್ಞಾನಿಕ ಎಂದು ನನಗೆ ಕಾಣುತ್ತದೆ - i dont know whether its scientifically proven or not. but its a common practice in our side. lot of agri waste is heaped up in summer and burnt to create 'sootumaNNu'. ash is used as manure to areca and coconut trees. I have seen lot of people using ash (boodi from 'beshineera ole' etc) as manure for growing vegetables too - Murali

ಕೃಷ್ಣ ಶಾಸ್ತ್ರಿ - Krishna Shastry said...

ಮುರಳಿ, ಯಾವುದರ ಬೂದಿ ಎಂಬುದು ಮುಖ್ಯವಾಗುತ್ತದೆ. ನಗರದ ಘನ ತ್ಯಾಜ್ಯಗಳನ್ನು ಹೊತ್ತಿಸಿ ಬಂದ ಬೂದಿ ಖಂಡಿತಾ ಪರಿಸರಸ್ನೇಹಿಯಾಗಿರಲು ಸಾಧ್ಯವಿಲ್ಲ ಎಂದು ನನ್ನ ನಂಬಿಕೆ.

Anonymous said...

The company has no answer to question no.6, which proves that it must be a bogus company.How can they say that 80% of hospital waste is not biomedical waste and can be incinarated using their equipment.
its better to use a product certified by ISO or central pollution control board.
.

Mahesh said...

ತಾವು ಮನೆಗಳ ತ್ಯಾಜ್ಯ ನಿರ್ವಹಣೆ/ವಿಲೇವಾರಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಲ್ಲಿ http://www.dailydump.org/ ಸಂಸ್ಥೆಯು ನಿಮಗೆ ಸಹಕಾರಿಯಾಗಬಹುದು.

ಕೃಷ್ಣ ಶಾಸ್ತ್ರಿ - Krishna Shastry said...

@ಮಹೇಶ್: ಧನ್ಯವಾದಗಳು. Dailydump ಬಗ್ಗೆ ಚೆನ್ನಾಗಿ ಗೊತ್ತು, ನಮ್ಮ ಮನೆಯಲ್ಲೇ ಇದೆ ಅವರ ಕಾಂಪೋಸ್ಟ್ ಕುಂಡಗಳು ಆದರೆ ಅವರು ಜೈವಿಕ ತ್ಯಾಜ್ಯಗಳ ಮೇಲೆ ಮಾತ್ರ ಕೆಲಸ ಮಾಡುತ್ತಾರೆ, ಮಾತ್ರವಲ್ಲ ಸದ್ಯಕ್ಕೆ ಅವರು ಕಾಸರಗೋಡು ಪರಿಸರದಲ್ಲಿ ಇಲ್ಲ.

Post a Comment