About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Tuesday, July 31, 2012

ಭೂಮಿ ನಡುಗಿಸುವ ಗೋವಿನ ಸಿಂಹನಾದ!


ಗೋ ವಧೆಯಿಂದ ಭೂಕಂಪವಾಗುತ್ತದಂತೆ, ಕೇಳಿದ್ದೀರಾ? ಆಧುನಿಕ ಮೂಢನಂಬಿಕೆಗಳ ಸಾಲಿನಲ್ಲಿ ಬಹುಷಃ ಇದು ಪ್ರಥಮ ಸ್ಥಾನ ಪಡೆಯುತ್ತದೆಯೋ ಏನೋ!

ವಿಜಯವಾಣಿಯಲ್ಲಿ ಕೆಲವು ಸಮಯದಿಂದ ‘ದೇಸಿರಾಸು’ ಎಂಬ ಲೇಖನಮಾಲೆಯೊಂದು ಬರುತ್ತಿದೆ. ಮೊದಮೊದಲು ಪರವಾಗಿಲ್ಲ ಎಂಬಂತಿದ್ದ ಈ ಲೇಖನಮಾಲೆ ಇತ್ತೀಚೆಗೆ ಹಾಸ್ಯಾಸ್ಪದವಾಗುತ್ತಾ ಸಾಗಿದೆ. ಕಳೆದ ಎರಡು ಕಂತುಗಳನ್ನು ನೋಡಿ:

ಭಾಗ ೧೨: ಗೋ ವಧೆಯಿಂದಾಗುವ ಅಪಾಯ

ಭಾಗ ೧೩: ವೇದನಾ ತರಂಗಗಳ ಪ್ರಭಾವ

ಹಳೆಯ ಸಂಪ್ರದಾಯಗಳಲ್ಲಿ ಕೆಲವು ಒಳ್ಳೆಯ ಅಂಶಗಳಿರುತ್ತವೆ ನಿಜ, ಅವುಗಳನ್ನು ವಿಜ್ಞಾನದ ಒರೆಗೆ ಹಚ್ಚಿ ಸತ್ಯಾಸತ್ಯತೆಯನ್ನು ಪ್ರತ್ಯೇಕಿಸುವ ಅಧ್ಯಯನಗಳು ಸ್ವಾಗತಾರ್ಯವೇ ಹೌದು. ಆದರೆ ‘ಇದು ವಿಜ್ಞಾನಿಗಳೇ ಒಪ್ಪುವ ಸತ್ಯ’ ಎಂಬುದನ್ನು ಯಾವುದೇ ಎಗ್ಗಿಲ್ಲದೇ ಹೇಳುವುದನ್ನು ನೋಡಿದರೆ ವಾಕರಿಕೆ ಬರುತ್ತದೆ. ಜಗತ್ತಿನಲ್ಲಿ ಅರ್ಥಹೀನ ಅಧ್ಯಯನಗಳು ಸಾವಿರಾರು ನಡೆಯುತ್ತವೆ, ಕುತರ್ಕ, ಹಾಸ್ಯಾಸ್ಪದ ಸಿದ್ಧಾಂತಗಳನ್ನೂ ಅನೇಕರು ಮಂಡಿಸುತ್ತಾರೆ, ಕೆಲವರು ಸ್ವಂತ ಖರ್ಚಿನಲ್ಲಿಯೋ ಅಥವಾ ಯಾರನ್ನಾದರೂ ಮರುಳು ಮಾಡಿಯೋ ಪುಸ್ತಕಗಳನ್ನೂ ಪ್ರಕಟಿಸುತ್ತಾರೆ, ಆದರೆ ಅದರರ್ಥ ಅವುಗಳೆಲ್ಲಾ ಒಪ್ಪತಕ್ಕ ಮಾತೆಂದಲ್ಲ. ವೈಜ್ಞಾನಿಕ ಮಾನ್ಯತೆ ಪಡೆದಿದೆ ಎಂದು ಎದೆ ತಟ್ಟಿ ಹೇಳಿಕೊಳ್ಳುವ ಮೊದಲು ಈ ಕೆಳಗಿನ ಅಂಶಗಳನ್ನು ಗಮನಿಸಬೇಕು:

·         ಉನ್ನತ ಮಟ್ಟದ ವೈಜ್ಞಾನಿಕ ಪತ್ರಿಕೆಗಳು ಆ ಸಂಶೋಧನಾ ವರದಿಯನ್ನು ಪ್ರಕಟಿಸಲು ಒಪ್ಪಿಕೊಂಡಿವೆಯೇ
·         ಪ್ರಬುದ್ಧ ವೈಜ್ಞಾನಿಕ ಸಮಾವೇಶಗಳಲ್ಲಿ ಅಂತಹ ಪ್ರಬಂಧಗಳನ್ನು ಮಂಡಿಸಲು ಅವಕಾಶ ನೀಡಿದ್ದಾರೆಯೇ
·         ಅಥವಾ ಕರ್ತೃವಿಗೆ ವಿಜ್ಞಾನ ಜಗತ್ತಿನಲ್ಲಿ ಈಗಾಗಲೇ ಶ್ರೇಷ್ಠ ಸ್ಥಾನವಿದೆಯೇ
·         ಪ್ರಕಟವಾದ ಮೇಲೆ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ವಿಜ್ಞಾನಿಗಳು ಅದನ್ನು ನೋಡಿ ತಲೆದೂಗಿದ್ದಾರೆಯೇ

ಸಂಶೋಧನೆ, ಅಧ್ಯಯನ, ವರದಿ ಸಂಪೂರ್ಣವಾಗಿಲ್ಲದಿದ್ದರೂ ಕೂಡ ‘ಸರಿಯಾದ ದಿಕ್ಕಿನಲ್ಲಿದೆ, ವೈಜ್ಞಾನಿಕ ತಳಹದಿಯ ಮೇಲೆಯೇ ಮುನ್ನಡೆಯುತ್ತಿದೆ’ ಎಂಬುದು ಕಂಡರೆ ಅದಕ್ಕೆ ಮಾನ್ಯತೆ ದೊರಕಿಯೇ ದೊರಕುತ್ತದೆ. ಆದರೆ ಅಷ್ಟೂ ಇಲ್ಲದೆ ಇದ್ದರೆ ಅದನ್ನು ಮುಗ್ಧ ಸಾರ್ವಜನಿಕರ ತಲೆಗೆ ತುಂಬಲು ಯತ್ನಿಸುವುದು ದೊಡ್ಡ ಅಪರಾಧವೇ ಸರಿ.

ಈ ಲೇಖನ ಮಾಲೆಯಲ್ಲಿ ಬರೆದ ಗೋವಧೆ, ವೇದನಾ ತರಂಗ, ಭೂಕಂಪ ಇತ್ಯಾದಿಗಳ ಬಗ್ಗೆ ನೀವೇ ಅಂತರ್ಜಾಲದಲ್ಲಿ ಹುಡುಕಾಡಿ ನೋಡಿ, ಗೊತ್ತಾಗುತ್ತದೆ ಇದಕ್ಕೆ ವೈಜ್ಞಾನಿಕ ಜಗತ್ತಿನಲ್ಲಿ ಎಷ್ಟು ಮಾನ್ಯತೆ ಇದೆ ಎಂಬುದಾಗಿ. ಅನಾವಶ್ಯಕವಾಗಿ ಐನ್‍ಸ್ಟೈನ್ ಹೆಸರನ್ನೂ ಎಳೆದುಹಾಕಿ ಇದನ್ನು ಹುಟ್ಟುಹಾಕಿದವರಿಗೆ ನಾಚಿಕೆ ಇರಲಿಲ್ಲ, ಆದರೆ ಇಂಥಾದ್ದನ್ನು ವಿವೇಚನಾರಹಿತವಾಗಿ ಪ್ರಕಟಿಸಿದ್ದು ಇನ್ನೂ ಬೇಸರದ ಸಂಗತಿ. ಗೋವನ್ನಾಗಲೀ ಯಾವುದೇ ಪ್ರಾಣಿಯನ್ನಾಗಲೀ ಕೊಲೆಯಿಂದ, ಹಿಂಸೆಯಿಂದ ರಕ್ಷಿಸಬೇಕು ಸರಿ, ಆದರೆ ಇಂತಹ ವಾದಗಳನ್ನು ಮಂಡಿಸಿದರೆ ಮೂಲ ಉದ್ದೇಶಕ್ಕೆ ತೀವ್ರ ಧಕ್ಕೆ ಬರುತ್ತದೆ ಎಂಬುದನ್ನು ಏಕೆ ಯಾರೂ ಗಮನಿಸುವುದಿಲ್ಲ? ಇದನ್ನು ಪ್ರಕಟಿಸಿದ ಸಂಪಾದಕರಿಗಂತೂ ದೊಡ್ಡ ನಮಸ್ಕಾರ.

ಗೋವಿನ ಬಗ್ಗೆ ಅಥವಾ ಇನ್ನಿತರ ಪ್ರಾಣಿಗಳ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಅವುಗಳನ್ನು ಮನುಷ್ಯರು ಸಾಕುವುದರಿಂದ ಎಷ್ಟು ಅಪಾರ ಪ್ರಮಾಣದಲ್ಲಿ ಪರಿಸರಕ್ಕೆ (ನೆಲ-ಜಲ-ವಾಯುವಿಗೆ) ಧಕ್ಕೆಯುಂಟಾಗುತ್ತದೆ ಎಂಬುದರ ಬಗ್ಗೆ ಜಾಗೃತಿ ಮೂಡಿಸಬೇಕು, ಹತ್ಯೆಯ ಹೊರತಾಗಿಯೂ ಎಲ್ಲೆಲ್ಲಿ ಪ್ರಾಣಿಹಕ್ಕುಗಳ ದಮನವಾಗುತ್ತದೆ ಎಂಬುದನ್ನು ಎತ್ತಿತೋರಿಸಬೇಕು, ಸಸ್ಯೋತ್ಪನ್ನಗಳು ಹೇಗೆ ಪ್ರಾಣಿಜನ್ಯ ಉತ್ಪನ್ನಗಳಿಗಿಂತ ಆರೋಗ್ಯಕ್ಕೆ ಪೂರಕ ಎಂಬುದರ ಬಗ್ಗೆ ಬೆಳಕನ್ನು ಚೆಲ್ಲಬೇಕು, ಹಂತ ಹಂತವಾಗಿ ಹೇಗೆ ನಾವು ಪ್ರಾಣಿಗಳ ಜೊತೆ (ಅವುಗಳ ಸ್ವಾತಂತ್ರ್ಯಹರಣವನ್ನೂ ಮಾಡದೆ) ಈ ಭೂಮಿಯಲ್ಲಿ ಸಹಬಾಳ್ವೆಯನ್ನು ನಡೆಸಬಹುದು ಎಂಬುದರ ಬಗ್ಗೆ ವಿಚಾರವನ್ನು ಹುಟ್ಟುಹಾಕಬೇಕು. ಅದು ಬಿಟ್ಟು ಪೊಳ್ಳು ವಿಜ್ಞಾನದ ಆರಾಧನೆಯನ್ನು ಮಾಡುತ್ತಾ ಕೂರುವುದು ಪತ್ರಿಕೆಗಳಿಗೆ ಶೋಭೆ ತರುವುದಿಲ್ಲ.

ವಿ.ಸೂ. ವಿಜಯವಾಣಿ ಪತ್ರಿಕೆಯಲ್ಲಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಅನೇಕ ಮೌಲ್ಯಯುತ ಲೇಖನಗಳು ಬರುವುದನ್ನು ನಾನು ಗಮನಿಸಿದ್ದೇನೆ, ಅವುಗಳನ್ನು ಓದುವಂತೆ ಅನೇಕ ಸಲ ಇತರರನ್ನು ಪ್ರೇರೇಪಿಸಿದ್ದೇನೆ ಕೂಡ. ಆದರೆ ಇದರೊಂದಿಗೇ ನಾನು ಸದಾ ಗಮನಿಸುವ ಒಂದು ವಿಷಯವೆಂದರೆ ಗ್ರಾಮಾಂತರ ಪ್ರದೇಶಗಳ ಜನರನ್ನು, ಸಾಕಷ್ಟು ಕಡಿಮೆ ಶಿಕ್ಷಣ ಇರುವ ಜನತೆಯನ್ನು ತಲುಪುವುದು ಇಂತಹ ಪ್ರಾಂತೀಯ ಭಾಷೆಯ ಪತ್ರಿಕೆಗಳು ಮಾತ್ರ, ಅವುಗಳು ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸಬೇಕು  ಎಂಬುದು ನನ್ನಾಸೆ.

ಈ ಲೇಖನಮಾಲೆಯ ಇಲ್ಲಿಯವರೆಗಿನ ಕಂತುಗಳು ಇಲ್ಲಿವೆ ನೋಡಿ. ಇದರಲ್ಲಿಯೂ ಕೆಲವು ಕಡೆ ಪೊಳ್ಳು ವಿಜ್ಞಾನ, ಅರೆ ಸತ್ಯಗಳು ಇವೆ ಎಂಬುದರಲ್ಲಿ ನನಗೆ ಸಂಶಯವಿಲ್ಲ.

ಭಾಗ ೧: ಗೋ ಆಧಾರಿತ ಕೃಷಿ

ಭಾಗ ೨: ಈ ಭಾಗ ನನಗೆ ಸಿಗಲಿಲ್ಲ, ಯಾವಾಗ ಪ್ರಕಟವಾಯಿತೋ ಗೊತ್ತಿಲ್ಲ

ಭಾಗ ೩: ಸಗಣಿ ಗೊಬ್ಬರದ ಸಮರ್ಪಕ ಬಳಕೆ

ಭಾಗ ೪: ಹಸಿರು ಕ್ರಾಂತಿ ಅವಾಂತರ

ಭಾಗ ೫: ೨೨೫ ರೂಪಾಯಿ ತಲಾದಾಯದಲ್ಲಿ ಬದುಕುವುದು ಹೇಗೆ?

ಭಾಗ ೬: ಗೋ ಸಂಪತ್ತಿನ ಕೊಡುಗೆ

ಭಾಗ ೭: ದೇಸಿ ರಾಸುಗಳ ಚಿಕಿತ್ಸಕ ಗುಣ

ಭಾಗ ೮: ರೋಗ ನಿರೋಧಕ ಶಕ್ತಿ

ಭಾಗ ೯: ಗೋ ಅರ್ಕ ಪ್ರಭಾವ

ಭಾಗ ೧೦: ದೇಸಿ ಹಸುವಿನ ಹಾಲಿನ ಮಹತ್ವ

ಭಾಗ ೧೧: ದೇಸಿ ಗೋವಿನ ಬೆಣ್ಣೆ-ತುಪ್ಪದ ಮಹತ್ವ

ಭಾಗ ೧೨: ಗೋ ವಧೆಯಿಂದಾಗುವ ಅಪಾಯ

ಭಾಗ ೧೩: ವೇದನಾ ತರಂಗಗಳ ಪ್ರಭಾವ

3 comments:

Ranjan said...

Krishna, being educated especially in highly westernised science we tend to question everything and need proof for everything.. I am not too sure of this cow episode but there are many things in our Hindu culture and our great country which we cannot see from eyes but still they happen and those who experience are sacred to even talk about them with the same fear that people will ask for scientific proof for everything. this is very unfortunate, sad and bad trend for our culture's future. that's all i can say..

ಕೃಷ್ಣ ಶಾಸ್ತ್ರಿ - Krishna Shastry said...

Dear Ranjan,

I support honest analysis of our ancient knowledge sources, but unnecessarily sensationalizing something and selectively ignoring several great values in our culture - that is not something I can support easily.

This particular claim is based on some so called scientists whose research has not been peer reviewed and agreed upon by leading experts. So, this is clearly not the case of questioning or analyzing old beliefs. Science has sanctity of its own and we should respect that, I strongly feel.

And if this is mainly about belief and not science, then let people say it boldly, why take help of science? This is an attempt to keep the innocent public in dark and confused state, and to finally cash it out.

I think not asking proof for anything has led us (Indians) to a pitiful state today. I think we should look at saints like Vivekananda who did not accept Ramakrishna Paramahamsa as his Guru until he tested the elder and got convinced that he is worthy of being a Guru.

Anonymous said...

Dear Ranjan You are saying right...

Post a Comment