About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Friday, December 9, 2011

ಪ್ರಯತ್ನ-ಫಲಿತಾಂಶಗಳ ಸಂಬಂಧ ಹಾಗೂ ವಿಕಾಸದ ಹಂತಗಳು

 
ಎಷ್ಟು ಪ್ರಯತ್ನ ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ? ಎಂಬುದಕ್ಕೆ ಉತ್ತರ ಸುಲಭದ್ದಲ್ಲ. ಒಬ್ಬೊಬ್ಬರ ಕ್ಷಮತೆ ಬೇರೆ ಬೇರೆಯಾಗಿರುತ್ತದೆ. ಆದರೂ ಯಾವುದೇ ಒಂದು ಹೊಸ ವಿಷಯದಲ್ಲಿ ನಾವು ತೊಡಗುವಾಗ ಎಲ್ಲರಲ್ಲಿಯೂ ಸಾಮಾನ್ಯವಾಗಿ ಕಾಣುವ ವಿಕಾಸದ ಹಂತಗಳಿವೆ, ಅವನ್ನು ಈ ಕೆಳಗಿನಂತೆ ವಿಂಗಡಿಸಿದ್ದೇನೆ.


ಕಳಪೆ ಫಲಿತಾಂಶ
ಉತ್ತಮ ಫಲಿತಾಂಶ
ಹೆಚ್ಚು ಪ್ರಯತ್ನ
ಹಂತ ೧ - ಆರಂಭ
ಹೆಚ್ಚು ಪ್ರಯತ್ನ
ಕಳಪೆ ಫಲಿತಾಂಶ
ಹಂತ ೨ - ವಿಶ್ವಾಸ
ಹೆಚ್ಚು ಪ್ರಯತ್ನ
ಉತ್ತಮ ಫಲಿತಾಂಶ
ಕಡಿಮೆ ಪ್ರಯತ್ನ
ಹಂತ ೩ - ಜಂಭ/ಅತಿಯಾಸೆ
ಕಡಿಮೆ ಪ್ರಯತ್ನ
ಕಳಪೆ ಫಲಿತಾಂಶ
ಹಂತ ೪ - ಪಕ್ವ
ಕಡಿಮೆ ಪ್ರಯತ್ನ
ಉತ್ತಮ ಫಲಿತಾಂಶ

ವಿವರಣೆ: ಸಾಮಾನ್ಯವಾಗಿ ನಾವು ಹೊಸ ಕೆಲಸದಲ್ಲಿ ಮೊದಮೊದಲು ಬೆವರಿಳಿಸುತ್ತೇವೆ, ಎಷ್ಟು ಮಾಡಿದರೂ ಸರಿಯಾಗುವುದಿಲ್ಲ, ಇತರರು ಸಲೀಸಾಗಿ ಮಾಡುವುದನ್ನು ಬೆರಗುಗಣ್ಣುಗಳಿಂದ ನೋಡುತ್ತೇವೆ. ನಿಧಾನಕ್ಕೆ ಅನುಭವ/ಜ್ಞಾನ ಹೆಚ್ಚಾಗಿ ಆತ್ಮವಿಶ್ವಾಸ ಬರುತ್ತದೆ. ಆದರೆ ಆಗ ಒಂದು ಗಂಡಾಂತಕಾರಿ ಹಂತವನ್ನು ತಲುಪುತ್ತೇವೆ, ಲೋಕವನ್ನೇ ಜಯಿಸುವ ಅತಿ ಆತ್ಮವಿಶ್ವಾಸದಿಂದ (ಜಂಭ) ಮುನ್ನುಗ್ಗಿ ಎಡವುತ್ತೇವೆ, ನೆಲ ಕಚ್ಚುತ್ತೇವೆ, ಪಾಠ ಕಲಿಯುತ್ತೇವೆ. ಹೆಚ್ಚಿನವರು ಅದೃಷ್ಟಶಾಲಿಗಳಾಗಿರುತ್ತಾರೆ – ಏನೋ ಒಂದಷ್ಟು ಗೀರು-ಗಾಯಗಳಾಗಿರುತ್ತವೆ, ವಾಸಿಯಾಗಿ ಮುಂದುವರೆಯಲು ಏನೂ ಅಡ್ಡಿಯಾಗುವುದಿಲ್ಲ. ಕೊನೆಗೆ ಅನುಭವದಿಂದ ಪಕ್ವರಾಗಿ ಆ ಕೆಲಸದಲ್ಲಿ ನಿಪುಣರಾಗುತ್ತೇವೆ.
ಉದಾಹರಣೆಗಳು

ಇದನ್ನು ಉದಾಹರಣೆಗಳ ಸಮೇತ ನೋಡೋಣ, ಆಗ ಇನ್ನೂ ಸ್ಪಷ್ಟವಾಗುತ್ತದೆ.

ಉದಾ ೧: ನೀವು ಕಾರು ಚಲಾಯಿಸಲು ಕಲಿಯುತ್ತಿದ್ದೀರಿ ಎಂದಿಟ್ಟುಕೊಳ್ಳೋಣ.


ಕಳಪೆ ಚಾಲನೆ
ಉತ್ತಮ ಚಾಲನೆ
ಹೆಚ್ಚು ಪ್ರಯತ್ನ
ಹಂತ ೧ - ಆರಂಭ
ಹೆಚ್ಚು ಪ್ರಯತ್ನ
ಕಳಪೆ ಚಾಲನೆ
(ಮೊದಲು ಸ್ಟೀರಿಂಗ್ ಚಕ್ರ, ಗೇರು, ಹಾರ್ನ್, ಲೈಟ್ ಇತ್ಯಾದಿ ಎಲ್ಲವನ್ನೂ ಒಟ್ಟಿಗೇ ಸಂಭಾಳಿಸುವುದು ಅಸಾಧ್ಯವೆಂದು ತೋರುತ್ತದೆ, ಎಷ್ಟು ಕಷ್ಟಪಟ್ಟರೂ ವಾಹನ ನೆಟ್ಟಗೆ ನಾಜೂಕಾಗಿ ಮುಂದೆ ಹೋಗುವುದಿಲ್ಲ)
ಹಂತ ೨ - ವಿಶ್ವಾಸ
ಹೆಚ್ಚು ಪ್ರಯತ್ನ
ಉತ್ತಮ ಚಾಲನೆ
(ಸ್ವಲ್ಪ ಸಮಯ ಹೋದಂತೆ ವಾಹನ ಹಿಡಿತಕ್ಕೆ ಬರುತ್ತದೆ, ಎಲ್ಲವನ್ನೂ ಜಾಗ್ರತೆಯಿಂದ ಸಂಭಾಳಿಸುವುದು ಕಷ್ಟವಾದರೂ ಕೂಡ ವಾಹನವನ್ನು ಚಲಾಯಿಸುವುದು ಸಾಧ್ಯ ಎಂಬ ವಿಶ್ವಾಸ ಮೂಡುತ್ತದೆ)
ಕಡಿಮೆ ಪ್ರಯತ್ನ
ಹಂತ ೩ - ಜಂಭ/ಅತಿಯಾಸೆ
ಕಡಿಮೆ ಪ್ರಯತ್ನ
ಕಳಪೆ ಚಾಲನೆ
(ಓ, ಇದು ಇಷ್ಟೇನೆ ಎಂಬ ಭಾವನೆ ಬರುತ್ತದೆ, ಅಥವಾ ಹೆಚ್ಚು ವೇಗದಲ್ಲಿ ಓಡಿಸುವ ಆಸೆಯಾಗುತ್ತದೆ, ಆದರೆ ಅಪಘಾತಗಳಾಗುತ್ತವೆ, ಅಥವಾ ಅದೃಷ್ಟವಿದ್ದರೆ ಸ್ವಲ್ಪದರಲ್ಲಿಯೇ ತಪ್ಪುತ್ತವೆ)
ಹಂತ ೪ - ಪಕ್ವ
ಕಡಿಮೆ ಪ್ರಯತ್ನ
ಉತ್ತಮ ಚಾಲನೆ
(ಕೊನೆಗೆ ತಪ್ಪುಗಳಿಂದ, ಅನಾಹುತಗಳಿಂದ ಪಾಠ ಕಲಿತು ಮನಸ್ಸು/ಬುದ್ಧಿ/ದೇಹ ಪಕ್ವವಾಗಿರುತ್ತದೆ. ವಾಹನ ಚಾಲನೆಯ ಮೇಲೆ ಒಳ್ಳೆಯ ಹಿಡಿತ ಬಂದಿರುತ್ತದೆ, ನಿರಾಳವಾಗಿ ಓಡಿಸುತ್ತೇವೆ)



ಉದಾ ೨: ನೀವು ಅಡುಗೆ ಮಾಡಲು ಕಲಿಯುತ್ತಿದ್ದೀರಿ ಎಂದಿಟ್ಟುಕೊಳ್ಳೋಣ.


ಕಳಪೆ ಅಡುಗೆ
ಉತ್ತಮ ಅಡುಗೆ
ಹೆಚ್ಚು ಪ್ರಯತ್ನ
ಹಂತ ೧ - ಆರಂಭ
ಹೆಚ್ಚು ಪ್ರಯತ್ನ
ಕಳಪೆ ಅಡುಗೆ
(ಮೊದಲು ತರಕಾರಿ ತುಂಡರಿಸುವಿಕೆ, ಮಸಾಲೆಯ ಪ್ರಮಾಣ, ಎಷ್ಟು ಉರಿ, ಸಮಯ ಇತ್ಯಾದಿ ಎಲ್ಲವನ್ನೂ ಒಟ್ಟಿಗೇ ಸಂಭಾಳಿಸುವುದು ಅಸಾಧ್ಯವೆಂದು ತೋರುತ್ತದೆ, ಎಷ್ಟು ಕಷ್ಟಪಟ್ಟರೂ ಅಡುಗೆ ಒಳ್ಳೆಯದಾಗುವುದಿಲ್ಲ)
ಹಂತ ೨ - ವಿಶ್ವಾಸ
ಹೆಚ್ಚು ಪ್ರಯತ್ನ
ಉತ್ತಮ ಅಡುಗೆ
(ಸ್ವಲ್ಪ ಸಮಯ ಹೋದಂತೆ ಎಲ್ಲವನ್ನೂ ಜಾಗ್ರತೆಯಿಂದ ಸಂಭಾಳಿಸುವುದು ಕಷ್ಟವಾದರೂ ಕೂಡ ಶುಚಿ-ರುಚಿಕರ ಅಡುಗೆಯನ್ನು ಬೇಕಾದಷ್ಟು ಪ್ರಮಾಣದಲ್ಲಿ ಮಾಡುವುದು ಸಾಧ್ಯ ಎಂಬ ವಿಶ್ವಾಸ ಮೂಡುತ್ತದೆ)
ಕಡಿಮೆ ಪ್ರಯತ್ನ
ಹಂತ ೩ - ಜಂಭ/ಅತಿಯಾಸೆ
ಕಡಿಮೆ ಪ್ರಯತ್ನ
ಕಳಪೆ ಅಡುಗೆ
(ಓ, ಇದು ಸುಲಭ ಎಂಬ ಭಾವನೆ ಬರುತ್ತದೆ, ಅಥವಾ ಅನೇಕ ತಿನಿಸುಗಳನ್ನು ಒಟ್ಟಿಗೇ ಮಾಡುವ ಆಸೆಯಾಗುತ್ತದೆ, ಆದರೆ ಏನೇನೋ ಆಗಿಬಿಡುತ್ತದೆ, ಸುಟ್ಟು ಹೋಗಬಹುದು, ರುಚಿ ಕೆಡಬಹುದು, ಅದೃಷ್ಟ ಕೆಟ್ಟರೆ ಅನಾಹುತಗಳೂ ಆಗಬಹುದು)
ಹಂತ ೪ - ಪಕ್ವ
ಕಡಿಮೆ ಪ್ರಯತ್ನ
ಉತ್ತಮ ಅಡುಗೆ
(ಕೊನೆಗೆ ತಪ್ಪುಗಳಿಂದ, ಅನಾಹುತಗಳಿಂದ ಪಾಠ ಕಲಿತು ಮನಸ್ಸು/ಬುದ್ಧಿ/ದೇಹ ಪಕ್ವವಾಗಿರುತ್ತದೆ. ಅಡುಗೆಯ ಮೇಲೆ ಒಳ್ಳೆಯ ಹಿಡಿತ ಬಂದಿರುತ್ತದೆ, ಸಲೀಸಾಗಿ ಬೇಕಾದ ರೀತಿಯಲ್ಲಿ ಅಡುಗೆ ಮಾಡಿ ಆಸ್ವಾದಿಸಬಹುದು)

ಹೆಚ್ಚಿನವರು ಎಲ್ಲಿರುತ್ತಾರೆ?

ಹಂತ ೧ ಹಾಗೂ ೨ ಸಾಮಾನ್ಯವಾಗಿ ಸೀಮಿತ ಅವಧಿಯದ್ದಾಗಿರುತ್ತದೆ. ಹೆಚ್ಚಿನವರು ಹಂತ ೩ರಲ್ಲಿ ಬಹಳಷ್ಟು ಸಮಯ ಇದ್ದು (ಕೆಲವರು ಹೆಚ್ಚು, ಕೆಲವರು ಕಡಿಮೆ) ಕೊನೆಗೆ ೪ನೇ ಹಂತ ತಲುಪುತ್ತಾರೆ. ಕೆಲವೊಮ್ಮೆ ಸಾಮರ್ಥ್ಯದ ಕೊರತೆಯಿಂದ ಒಂದು ಕೆಲಸದಲ್ಲಿ ನೈಪುಣ್ಯತೆಯನ್ನು/ಪ್ರಾವೀಣ್ಯತೆಯನ್ನು ಎಂದಿಗೂ ಸಾದಿಸದೇ ಇರಬಹುದು. ಅದು ಬೇರೇಯೇ ಸಮಸ್ಯೆ. ಇಲ್ಲಿ ಅಂತಹ ಸಾಮರ್ಥ್ಯದ ಕೊರತೆ ಇಲ್ಲ ಎಂಬುದಾಗಿ ಪರಿಗಣಿಸಿದ್ದೇನೆ.

ಮಾತ್ರವಲ್ಲ, ೪ನೇ ಹಂತದಲ್ಲಿ ಸತತವಾಗಿ ಇರುವುದು ಅನೇಕರಿಗೆ ಸಾಧ್ಯವಾಗುವುದಿಲ್ಲ. ಆಗಾಗ ಎಚ್ಚರತಪ್ಪಿ ಅಥವಾ ಮಿತಿಗಳನ್ನು ಮೀರುವ ಗುರಿಯೊಂದಿಗೆ ೩ನೇ ಹಂತದ ಗುಣಗಳನ್ನು ಪ್ರದರ್ಶಿಸುವುದು ಸರ್ವೇಸಾಮಾನ್ಯ. ಇಲ್ಲಿ ಅಪಾಯವಿದೆ – ಹೀಗಾಗಿ ಜಾಗೃತರಾಗಿರುವುದು ಉತ್ತಮ.

ಕೊನೆಯ ಮಾತು

ಕೊನೆಯದಾಗಿ ನಾನು ಹೇಳುವುದಿಷ್ಟೇ: ನಿಮಗೆ ಹೆಚ್ಚಾಗಿ ಅರಿವು/ನೈಪುಣ್ಯತೆಯಿಲ್ಲದ ಯಾವುದೇ ಒಂದು ಹೊಸ ಕೆಲಸವನ್ನು ಕೈಗೆತ್ತಿಕೊಂಡಾಗ ಇದನ್ನು ನೆನಪಿನಲ್ಲಿಡಿ, ೪ನೇ ಹಂತ ತಲುಪಲು ಪ್ರಯತ್ನ ಮಾಡಿ, ೩ನೇ ಹಂತದ ಬಗ್ಗೆ ಜಾಗರೂಕರಾಗಿರಿ :-)

1 comments:

Shankara Bhat said...

ಯಾವುದೇ ಕೆಲಸದಲ್ಲಿ ನಿಪುಣನಾಗ ಬೇಕಾದರೂ ಪ್ರಯತ್ನ ಅಗತ್ಯ.1000 ಕಿ.ಮೀ ಓಡಿಸಿದರೆ ಡ್ರ್ಯೆವಿಂಗ್ ಬರುತ್ತದೆ.
ಒಂದು ಹತ್ತು ಸಲಮಾಡಿದರೆ ಅಡಿಗೆ ಬರುತ್ತದೆ.ಎಲ್ಲದಕ್ಕೂಅನುಭವ ಬೇಕು.ಗಾದೆಯೆ ಇದೆಯಲ್ಲ "ಬೊಗಳೀ ಬೊಗಳೀ
ರಾಗ.......'

Post a Comment