About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Friday, August 12, 2011

ಕನ್ನಡ vs. Kanglish

ನಮಸ್ತೆ,

ಕನ್ನಡವನ್ನು ಉಳಿಸುವ, ಬೆಳೆಸುವ ನಿಟ್ಟಿನಲ್ಲಿ ವಿವಿಧ ಜನರು ವಿವಿಧ ರೀತಿಯಲ್ಲಿ ನಡೆಸುವ ಹೋರಾಟದ ಪರಿಚಯ ನಿಮಗೆ ಒಂದಲ್ಲ ಒಂದು ರೀತಿಯಲ್ಲಿ ಆಗಿರಬಹುದು ಎಂದು ನಂಬುತ್ತೇನೆ. ಈ ನಿಟ್ಟಿನಲ್ಲಿ ನನ್ನ ಒಂದು ಮುಖ್ಯ ನಿಲುವು ಏನೆಂದರೆ ಕಂಗ್ಲಿಷ್ ಸಂಸ್ಕೃತಿಯನ್ನು ಆದಷ್ಟೂ ಕಡಿಮೆ ಮಾಡಿ ಕನ್ನಡದಲ್ಲೇ ಬರೆಯಬೇಕು ಎನ್ನುವುದು. ಆದರೆ ಅಂತರ್ಜಾಲದಲ್ಲಿರುವ ಅನೇಕ ಕನ್ನಡ ಗುಂಪುಗಳನ್ನು ನೋಡಿದರೆ ಕಂಗ್ಲಿಷ್ ಹಾವಳಿ ಬಹಳ ಪ್ರಬಲವಾಗಿದೆ. ಆಗೊಮ್ಮೆ ಈಗೊಮ್ಮೆ ನಾನು ಇದನ್ನು ವಿರೋಧಿಸುತ್ತಾ, ಕನ್ನಡದ ಬಳಕೆಯನ್ನು ಉತ್ತೇಜಿಸುತ್ತಾ ಇರುತ್ತೇನೆ.

ಕಳೆದ ವರುಷ ಅಂದರೆ ೨೦೧೦ರ ಜನವರಿ-ಫೆಬ್ರವರಿ ತಿಂಗಳಲ್ಲಿ ಕನ್ನಡ ಅಂತರ್ಜಾಲ ಗುಂಪೊಂದರಲ್ಲಿ ಒಂದು ಬಿಸಿ-ಬಿಸಿ ಸಂಭಾಷಣೆ ನಡೆಯಿತು, ಅದನ್ನು ನಿಮ್ಮ ಮುಂದಿಡುತ್ತಿದ್ದೇನೆ. ಈ ವಿಷಯದಲ್ಲಿ ಆಸಕ್ತಿ ಇರುವವರಿಗೆ ಈ ಸಂಭಾಷಣೆ ಉಪಯುಕ್ತವೆನಿಸುವುದು ಎಂದು ನಂಬಿದ್ದೇನೆ. ಅದನ್ನು ಹೊರತುಪಡಿಸಿ ಯಾರನ್ನೂ ಅವಹೇಳನ ಮಾಡುವ ಪ್ರಯತ್ನ ಇದಲ್ಲ. ಮಾತ್ರವಲ್ಲ, ಈ ಪತ್ರಗಳು ಸಾಕಷ್ಟು ಸಾರ್ವಜನಿಕವಾಗಿಯೇ ಹರಿದಾಡಿದ್ದರಿಂದಾಗಿ ಹೆಸರುಗಳನ್ನು ತೆಗೆಯುವ/ಮಾರ್ಪಡಿಸುವ ಗೋಜಿಗೆ ಹೋಗಲಿಲ್ಲ. ಯಾರಿಗಾದರೂ ಆಕ್ಷೇಪ ಇದ್ದರೆ ನಿಸ್ಸಂಕೋಚವಾಗಿ ಹೇಳಿ, ಹೆಸರು ಬದಲಾಯಿಸಬಲ್ಲೆ.

ಆಗ ನಾನು ದನಿ ಎತ್ತಿದ್ದು ಒಬ್ಬ ಕನ್ನಡ-ಪರ ಹೋರಾಟಗಾರರ ವಿರುದ್ಧ. ಇಂದಿಗೂ ಅವರು ಕನ್ನಡದ ಪರವಾಗಿ ಅನೇಕ ಕೆಲಸಗಳನ್ನು ಮಾಡುತ್ತಿದ್ದಾರೆ, ಹಾಗೂ ಅ ಬಗ್ಗೆ ನನಗೆ ಅವರ ಮೇಲೆ ಗೌರವವಿದೆ. ಆದರೆ ಕನ್ನಡ ಬಳಕೆಯಲ್ಲಿ ಮಾತ್ರ ಅವರು ಇಂದಿಗೂ ಸಾಕಷ್ಟು ಹಿಂದೆ ಇದ್ದಾರೆ.

ಹೀಗೆ ಅನೇಕರು ಈಗಲೂ ಇದ್ದಾರೆ. Facebookನಲ್ಲಿ ಕಂಗ್ಲಿಷ್ ಬಳಸುವುದಕ್ಕೆ ಹೊಸ ಸಬೂಬು ಏನೆಂದರೆ ಕನ್ನಡ ಬರೆಯುವ ಸೌಲಭ್ಯ ಇಲ್ಲ ಎನ್ನುವುದು. ಅದರ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ಆದರೆ ಉದ್ದುದ್ದದ ಪತ್ರ ಬರೆಯುವಾಗ ಕಂಗ್ಲಿಷ್ ಬರೆದರೆ ಅದರಿಂದ ಕನ್ನಡಕ್ಕೆ ಹಾನಿ ಇದೆ ಎಂಬುದಂತೂ ನಾನು ನಂಬುವ ಸಿದ್ಧಾಂತ. ಉಳಿದಂತೆ ಈ ಕೆಳಗಿನ ಸಂಭಾಷಣೆಯಲ್ಲಿ ನನ್ನ ನಿಲುವು ಸ್ಪಷ್ಟವಾಗುತ್ತದೆ ಎಂದು ನಂಬಿದ್ದೇನೆ.

ವಿ.ಸೂ. ಈ ಸಂಭಾಷಣೆಯಲ್ಲಿ ಗಮನಿಸಬೇಕಾದ ಇನ್ನೊಂದು ಮುಖ್ಯ ಅಂಶವೆಂದರೆ ಕನ್ನಡ-ಪರ ಹಾಗೂ ಕನ್ನಡಿಗರ-ಪರ – ಇವೆರಡರ ಮಧ್ಯೆ ಇರುವ ವ್ಯತ್ಯಾಸ.

ಇತಿ,
ಕೃಷ್ಣ ಶಾಸ್ತ್ರಿ.

Email 1
ಆನಂದ್ ಅವರೆ,

ನೀವು ಕಹಳೆಗೆ ಅನೇಕಾನೇಕ ಪತ್ರಗಳನ್ನು ಬರೆಯುತ್ತೀರಿ - ಸುಮಾರು ವಿಷಯಗಳ ಬಗ್ಗೆ ನಿಮಗೆ ಆದರೆ ನಿಮ್ಮಲ್ಲಿ ಒಂದು ಪ್ರಶ್ನೆ ಕೇಳಬೇಕಿತ್ತು. ನೀವು ಕನ್ನಡದಲ್ಲೇ ಯಾಕೆ ಬರೆಯುವುದಿಲ್ಲ?

ಈ ಗುಂಪಿನಲ್ಲಿ ಆಂಗ್ಲ ಭಾಷೆಯಲ್ಲಿ ಬರೆಯುವುದು ತೀರಾ ಅಪ್ರಾಸಾಂಗಿಕ ಹಾಗೂ ಗುಂಪಿನ ಮೂಲ ತತ್ವಗಳಿಗೆ ವಿರುದ್ಧ ಕೂಡ. ಆದೇ ವೇಳೆ, ಕಂಗ್ಲಿಷ್‍ನಲ್ಲಿ ಬರೆಯುವುದು ಕೂಡ ಭಾಷೆಯನ್ನು ಸಾಕಷ್ಟು ಕೊಲ್ಲುತ್ತದೆ ಎಂಬುದನ್ನು ತುಂಬಾ ಜನ ಮರೆಯುತ್ತಾರೆ (ನಿಮ್ಮನ್ನೂ ಸೇರಿಸಿ). ಕೆಲವು ವರ್ಷಗಳ ಹಿಂದೆ ಸಂಗತಿ ಬೇರೆ ಇತ್ತು, ಆದರೆ ಈಗ ಕನ್ನಡದಲ್ಲಿ ಪತ್ರಿಸುವುದು ಬಹಳ ಸುಲಭ - ಯಾಹೂನಲ್ಲಿ ಇದು ಸಾಧ್ಯವೋ ಗೊತ್ತಿಲ್ಲ, ಆದರೆ ಗೂಗಲ್‍ನಲ್ಲಿ ಖಂಡಿತಾ ಸಾಧ್ಯ - ಬರಹ ಇತ್ಯಾದಿ ಏನೂ ಬೇಕಾಗಿಲ್ಲ.

ನಿಮಗೇನನಿಸುತ್ತದೆ? ನಿಮ್ಮ ದೀರ್ಘವಾದ ಕಂಗ್ಲಿಷ್ ಪತ್ರಗಳನ್ನು ಅದೆಷ್ಟು ಜನರು ಓದುತ್ತಾರೆ? ಸರಿಯಾದ ಕನ್ನಡದಲ್ಲಿದ್ದರೆ ಸುಲಭವಾಗಿ ಕಣ್ಣು ಹಾಯಿಸಿ ನೋಡಲು ಸಾಧ್ಯ, ಆದರೆ ನೀವು ಬರೆಯುವ ಪತ್ರಗಳನ್ನು, ಅವು ಉತ್ತಮವಾಗಿದ್ದರೂ ಕೂಡ ನನ್ನಂತಹವರು ಅರ್ಥಾತ್ ಹತ್ತು ಹಲವು ಕೆಲಸ-ಕಾರ್ಯಗಳಲ್ಲಿ ನಿರತರಾಗಿ ಸಮಯದ ಅಭಾವವಿರುವವರು ಓದುವುದೇ ಇಲ್ಲ.

ನಿಮ್ಮಿಂದ ಎಷ್ಟು ಪತ್ರಗಳು ಬರುತ್ತವೆ ಅಂದರೆ, ಅದೇನೋ ಅಂತಾರಲ್ಲಾ - you overshadow all others ಅಂತ, ಹಾಗೆ. ನಿಮ್ಮಿಂದಾಗಿ ನಾನು ಕಹಳೆಯ ಪತ್ರಗಳನ್ನು ನೋಡುವುದೇ ನಿಂತು ಹೋಗಿದೆ. ಇದೊಂದು ಕನ್ನಡ ಗುಂಪಲ್ಲ, ಕಂಗ್ಲಿಷ್ ಗುಂಪು ಎಂಬ ಭಾವನೆ ಬರುತ್ತದೆ.

ಇದರ ಬಗ್ಗೆ ಮೊದಲು ಬರೆದ ಪತ್ರಗಳಿಗೆ ನಿಮ್ಮದೇನೂ ಉತ್ತರ/ಪ್ರತಿಕ್ರಿಯೆ ಇಲ್ಲ, ಈಗ ನಿಮ್ಮನ್ನೇ ನೇರವಾಗಿ ಕೇಳೋಣ ಅಂತ ಈ ಪತ್ರವನ್ನು ಬರೆಯುತ್ತಿದ್ದೇನೆ. ನಿಮ್ಮ ಅನಿಸಿಕೆಗಳನ್ನು ದಯವಿಟ್ಟು ತಿಳಿಸಿ.

ಇತಿ,
ಕೃಷ್ಣ ಶಾಸ್ತ್ರಿ

Email 2
Krishna ravare,

Egalu kanglish nalli bareyuvudakke nannu skhamisi.

Kelakanda sankhyagae kare maaduvire? maatadona.

Vandanegalu
Anand

Email 3
ಆನಂದ್ ಅವರೆ,

ನನ್ನ ಬಳಿ ಸದ್ಯಕ್ಕೆ ಸೆಲ್ ಫೋನ್ ಇಲ್ಲ, ಇತ್ತೀಚೆಗಷ್ಟೆ ಸ್ಥಳಾಂತರ ಮಾಡಿದ್ದೇನೆ. ಹಾಗೂ, ಇದರಲ್ಲಿ ದೂರವಾಣಿಯಲ್ಲಿ ಮಾತನಾಡುವಂತದ್ದು ಏನೂ ಇಲ್ಲ ಎಂದು ನನ್ನ ಅಭಿಪ್ರಾಯ.

ನಿಮ್ಮ ಅನಿಸಿಕೆಗಳನ್ನು ದಯವಿಟ್ಟು ಪತ್ರಿಸಿರಿ ಎಂದು ವಿನಂತಿ. ಕನ್ನಡದಲ್ಲಿ ಪತ್ರ ಬರೆಯಲು ಸಾಧ್ಯವಿಲ್ಲದಿದ್ದ ಪಕ್ಷದಲ್ಲಿ ಆಂಗ್ಲ ಭಾಷೆಯಲ್ಲಿಯೇ ಬರೆಯಿರಿ, ಕಂಗ್ಲಿಷ್ ಓದುವುದು ಕಷ್ಟಕರ.

ಇತಿ,
ಕೃಷ್ಣ ಶಾಸ್ತ್ರಿ

Email 4
ಆನಂದ್ ಅವರೆ,

ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ, ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬೇಕಾಗಿ ವಿನಂತಿ.

ಇತಿ,
ಕೃಷ್ಣ ಶಾಸ್ತ್ರಿ

Email 5
ಆನಂದ್ ಅವರೆ,

ನಿಮ್ಮ ಉತ್ತರ ನನಗೆ ಇನ್ನೂ ತಲುಪಿಲ್ಲ. ಕಹಳೆ ಹಾಗೂ ಇನ್ನಿತರ ಗುಂಪುಗಳಿಗೆ ನೀವು ಈಗಲೂ ಪ್ರತಿದಿನ ಅನೇಕ ಪತ್ರಗಳನ್ನು ಕಳುಹಿಸುತ್ತಿರುವುದನ್ನು ನಾನು ಗಮನಿಸುತ್ತಿದ್ದೇನೆ, ಆದರೆ ನನ್ನ ಈ ಪತ್ರಕ್ಕೆ ಪ್ರತಿಕ್ರಿಯಿಸುತ್ತಿಲ್ಲ.

ಹೀಗಿದ್ದಲ್ಲಿ ನೀವು ಉದ್ದೇಶಪೂರ್ವಕವಾಗಿ ನನ್ನ ಪತ್ರಗಳನ್ನು ಕಡೆಗಣಿಸುತ್ತಿದ್ದೀರಿ ಎಂದು ನಾನು ಭಾವಿಸಬೇಕಾಗುತ್ತದೆ. ಇದು ಒಂದು ಉತ್ತಮ ಬೆಳವಣಿಗೆ ಖಂಡಿತವಾಗಿ ಅಲ್ಲ.

ದಯವಿಟ್ಟು ಆದಷ್ಟು ಬೇಗನೆ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ, ಈ-ಮೈಲ್‍ಗಳ ವಿಷಯಕ್ಕೆ ಬಂದಾಗ ನೀವು ಕನ್ನಡ ಬಳಕೆಯಲ್ಲಿ ಏತಕ್ಕೆ ಇಷ್ಟು ಹಿಂದೆ ಇದ್ದೀರಿ ಎಂಬುದರ ಕುರಿತಾಗಿ ಸ್ಪಷ್ಟನೆ ನೀಡಿ. ಇಲ್ಲವಾದರೆ ನಾನು ಖೇದದೊಂದಿಗೇ ಇದರ ಬಗ್ಗೆ ಕಹಳೆ ಗುಂಪಿಗೆ ಬರೆಯಬೇಕಾಗುತ್ತದೆ.

ಇತಿ,
ಕೃಷ್ಣ ಶಾಸ್ತ್ರಿ

Email 6
ಕಹಳೆ ಸದಸ್ಯ/ಸದಸ್ಯೆಯರಿಗೆ ನಮಸ್ಕಾರ,

ಈ ಕೆಳಗಿನ ಸಂಭಾಷಣೆಯನ್ನು ನಾನು ನಿಮಗೆಲ್ಲರಿಗೂ ಬಹಳ ಖೇದದೊಂದಿಗೇ ಕಳುಹಿಸುತ್ತಿದ್ದೇನೆ. ಸಾಧ್ಯವಾದರೆ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.

ನನಗೆ ಕಂಡಂತೆ ಆನಂದ್ ಅವರಿಗೆ ಕನ್ನಡದ ಬಗ್ಗೆ, ಕನ್ನಡಿಗರ ಮೇಲೆ ಅಪಾರ ಕಾಳಜಿ ಇದೆ, ಆದರೆ ಈ ಕೆಳಗೆ ವಿವರಿಸಿದಂತೆ ಕಂಗ್ಲಿಷ್‍ನಲ್ಲಿ ಬರೆಯುವ ಮೂಲಕ ಅವರು ಕನ್ನಡಕ್ಕೆ ಧಕ್ಕೆಯನ್ನೂ ತರುತ್ತಿದ್ದಾರೆ, ಇದು ಬಹಳ ಬೇಸರದ ಸಂಗತಿ. ಮಾತ್ರವಲ್ಲ, ಮತ್ತೆ ಮತ್ತೆ ಪತ್ರ ಬರೆದರೂ ಕೂಡ ಉತ್ತರ ಕೊಡುವುದಕ್ಕೂ ಹಿಂಜರಿಯುವ ಹಾಗೆ ಕಾಣುತ್ತದೆ, ಯಾಕೋ ಗೊತ್ತಿಲ್ಲ. ಕೊನೆಗೆ ಈಗ ನಾನು ಈ ವಿಷಯವನ್ನು ನೂರಾರು ಜನರ ಮುಂದೆ ತರಬೇಕಾಯಿತು ನೋಡಿ.

ಒಂದೇ ವಿಷಯದ ಬಗ್ಗೆ ಒಬ್ಬೊಬ್ಬರ ಅಭಿಮಾನ, ತೋರಿಸುವ ಕಾಳಜಿ ಬೇರೆ ಬೇರೆ ಇರುತ್ತದೆ, ಸರಿ. ಆದರೆ ಹೀಗೆ ಅಸಡ್ಡೆ ತೋರಿಸುವುದು ತರವಲ್ಲ ಎಂದು ನನ್ನ ನಿಲುವು.

ಇತಿ,
ಕೃಷ್ಣ ಶಾಸ್ತ್ರಿ.

Email 7
ಕೃಷ ಶಾಸ್ತ್ರಿ ರವರೆ,

ಕಂಗ್ಲಿಷ್ ಉಪಯೋಗಿಸಿತ್ತಿರುವ ಕಾರಣ ಸಮಯದ ಅಭಾವ, ಒಂದ್ ಕಂಪನಿ ನಲ್ಲಿ ಕೆಲಸ ಮಾಡಿಕೊಂಡು ಹಿಂತ ಒಂದಿಸ್ತು ಕೆಲಸಗಳನ್ನು ಮಾಡುತಿದ್ದೇನೆ. MNC  ಗಳಲ್ಲಿ ಚಡ್ಡಿ ಹರಿದು ಇಡ್ತಾರೆ, ಏನೋ  ಒಂದಿಸ್ತು  ಸಮಯ ಸಿಗುತ್ತೆ ಅದರಲಿ ಇವೆಲ್ಲ ಮಾಡ್ತಿದ್ದೇನೆ. ಕನ್ನಡದಲ್ಲಿ ಟೈಪ್ ಮಾಡಿ ಅದನ್ನ ಕಾಪಿ ಪೇಸ್ಟ್ ಮಾಡಲು ಸಮಯವಿಲ್ಲ ನನಗೆ.

ಕಂಗ್ಲಿಷ್ ಉಪಯೋಗಿಸಿದರೆ ಅಭಿಮಾನ ಇಲ್ಲ ಅಂತ ಅರ್ಥ ನಾ? ನಾನು ಆಂಧ್ರದಲ್ಲಿ ಓದಿದ್ದು , ಹೊರನಾಡು ಕನ್ನಡಿಗ ೧೨ ವರುಷ ದಿಂದ, ಅಲ್ಲಿ ಕನ್ನಡ ಇರಲಿಲ್ಲ , ನಮ್ಮ taiyeE ತಂದೆ ಗಳು ನಾಳೆ ನೀನು ನಮ್ಮ ನಾಡಿಗೆ ಹೋದರೆ, ನಮ್ಮನ್ನ ಬೈತಾರೆ ಜನಗಳು ಅಂತ ಕನ್ನಡ ಬರೆಯೋದು, ಓದಿಸೋದು ಮಾಡಿಸ್ತಿದ್ರು, ಈಗಿನ ಕಾಲದಲಿ ಎಷ್ಟು ಜನಾ ತಂದೆ ತಯಂದರು ಮಾಡ್ತಿದ್ದಾರೆ? ಬಾಷೆ ಮೇಲೆ ಅಭಿಮಾನ , ಪ್ರೀತಿ ತೋರಿಸೋದು ಹೊರ ರಾಜ್ಯಕ್ಕೆ ಅಥವ ಹೊರದೇಶಕ್ಕೆ ಹೋದವರು? , ಬರಿ ಇಂಗ್ಲಿಷ್ ವ್ಯಾಮೋಹಕ್ಕೆ ಅವರ ಮಕ್ಕಳನ್ನು ಬಲಿಕೊಟ್ಟು, ನಮ್ಮ ಬಾಷೆ ಕೂಡ ಬಲಿ ಕೊಡ್ತಿದ್ದಾರೆ.

ನಾನು ಹಿಂಜರಿಯೋಹಾಗೆ ಇದಿದ್ದರೆ ಯಾವಾಗಲೋ ಹಿಂಜರಿತಿದ್ದೆ... ನನದು ಎಷ್ಟು ಇದಿಯೋ ಅಸ್ತು ನೋಡಿಕೊಂಡು ಸುಮ್ನಿರ್ತಿದ್ದೆ, ನನಗೆ ಯಾಕೆ ಬೇಕು ಊರ್ಮಂಡಿ ಉಸಾಬರಿ ಅಂತ ಹೇಳೋಕೆ ಒಂದು ಸೆಕೆಂಡ್ ಸಾಕು, 

ನಾವುಗಳು ಮಾಡಿದಸ್ತು  E-PROTEST  ನೀವುಗಳು ಎಷ್ಟು ಮಾಡಿದ್ದಿರಿ? ನೀವುಗಳು ಭಾಷೆ ಉದ್ದಾರ ಮಾಡೋಕೆ ನಮ್ಮ ಜನಗಳಿಗೆ ಅರಿವು ಕೊಡೋಕೆ ಏನ್ ಮಾಡ್ತಿದ್ದಿರಿ? ಸ್ವಲ್ಪ ತಿಳಿಸಿ. ನಿಮಗೆ ನನ್ನ ಮೊಬೈಲ್ ನಂಬರ್ ಕೊಟ್ಟಿದೀನಿ ಬಿಡುವಿನ ವೇಳೆ ಯಲ್ಲಿ ಮಾತನಾಡೋಣ ಇದರ ಬಗ್ಗೆ ಅಂತ , ನೀವು ಕರೆ ಮಾಡಲಿಲ್ಲ. 

ಬಾಷೆ ನಾ ಅವಮಾನ ಮಾಡ್ತಿದ್ದೀನಿ ಅಂತ ಹೇಳ್ತಿದ್ದಿರಿ? ತಪ್ಪು ತಪ್ಪು ಕಂಪೋಸ್ ಮಾಡಿ ನಾನು ಯಾಕೆ ನಮ್ಮ ಬಾಷೆ ನಾ ಹಾಳು ಮಾಡಲಿ ಅಂತ ಕಂಗ್ಲಿಷ್ ನಲ್ಲಿ ಸ್ಪಷ್ಟವಾಗಿ ಬರಿತಿದ್ದೇನೆ. ನೋಡಿ ಇದರಲ್ಲೇ ಎಷ್ಟು ತಪ್ಪು ಸಿಗುತ್ತೆ ಅಂತ ನೋಡಿ. ನೀವು ನೂರಾರು ಜನದ ಮುಂದೆ ನನ್ನನ್ನು ತೋರಿಸಿದರೆ ಅವರಿಗೆ ಗೊತ್ತು ಯಾರು ಏನ್ ಮಾಡ್ತಿದ್ದಾರೆ ಅಂತ.ಆನಂದ್ ಎಂ ಬಿ

Email 8
ಆನಂದ್ ಅವರೆ,

ಇದರಲ್ಲಿ ಫೋನ್‍ನಲ್ಲಿ ಮಾತನಾಡುವಂಥದ್ದು ಏನೂ ಇಲ್ಲ, ಈಗ ಬರೆದಿರುವುದನ್ನೇ ಮೊದಲೇ ನನಗೆ ಬರೆಯಬಹುದಿತ್ತಲ್ಲವೇ? ನಿಮಗೆ ಸಮಯದ ಅಭಾವವಿದೆ ಅಂತ ಕೂಡ ನನಗೆ ನೀವು ಮೊದಲು ತಿಳಿಸಲಿಲ್ಲ. ಹಾಗಾಗ್ಯೂ, ಇಂಗ್ಲಿಷ್‍ನಲಿ ಬರೆದರೂ ಪರವಾಗಿಲ್ಲ ಎಂದು ಕೂಡ ತಿಳಿಸಿದ್ದೆ. ಆದರೆ ನೀವು ತಾಳ್ಮೆಯಿಂದ ಉತ್ತರ ಬರೆಯುವ ಸೌಜನ್ಯವನ್ನು ತೋರಿಸಲಿಲ್ಲ. ನಾನು ಸ್ಥಳಾಂತರಗೊಂಡಿದ್ದರಿಂದ ನನ್ನ ಬಳಿ ಸದ್ಯಕ್ಕೆ ಸರಿಯಾದ ಫೋನ್ ಇಲ್ಲ ಎಂದು ಕೂಡ ನಾನು ಹೇಳಿದ್ದೆ.

ಯಾಕೆ copy paste ಮಾಡಬೇಕು? ಈಗ ಅಂತರ್ಜಾಲದಲ್ಲಿಯೇ ನೇರವಾಗಿ ಕನ್ನಡದಲ್ಲಿ ಟೈಪ್ ಮಾಡಬಹುದಲ್ಲವೇ? ಅದನ್ನೂ ಕೂಡ ನಿಮಗೆ ಹೇಳಿದ್ದೇನೆ. ನೀವು ನನ್ನ ಪತ್ರಗಳನ್ನು ಸರಿಯಾಗಿ ಓದಲಿಲ್ಲ ಎಂದು ಕಾಣುತ್ತದೆ.

(ನೀವು ಸರಿಯಾಗಿ ಪತ್ರಗಳನ್ನು ಓದುವುದಿಲ್ಲ ಎಂಬುದು ನನಗೆ ಮೊದಲೇ ಗೊತ್ತಿತ್ತು ಬಿಡಿ - ನಾನು ಹೊಸವರ್ಷದ ಶುಭಾಷಯಗಳನ್ನು ಗುಂಪಿಗೆ ಕಳುಹಿಸಿ, ಆದಷ್ಟೂ ಕಂಗ್ಲಿಷ್‍ನಲ್ಲಿ ಬರೆಯದಿರಿ ಅಂತ ಸದಸ್ಯರಲ್ಲಿ ವಿನಂತಿಸಿದಾಗ ನೀವು ಅದನ್ನು ಇನ್ನಿತರ ಎಲ್ಲಾ ಗುಂಪುಗಳಿಗೆ forward ಮಾಡಿ ಕಂಗ್ಲಿಷ್‍ನಲ್ಲೇ Nimma gamanakke, mathu karya paalane ge. ಅಂತ ಬರೆದಿದ್ದಿರಿ, ಅದನ್ನು ನೋಡಿ ನನಗೆ ನಗಬೇಕೋ ಅಳಬೇಕೋ ಗೊತ್ತಾಗಿರಲಿಲ್ಲ - ನೀವು ಯಾವ ಪತ್ರಗಳನ್ನೂ ಸರಿಯಾಗಿ ಓದದೆ ಸುಮ್ಮನೆ forward ಮಾಡುವ ಧೀರ ಅಂತ ಭಾವಿಸಿದರೆ ಅತಿಶಯೋಕ್ತಿ ಇಲ್ಲ, ಅಲ್ಲವೇ?)

ತಪ್ಪು ತಪ್ಪು ಕಂಪೋಸ್ ಮಾಡಿ ನಾನು ಯಾಕೆ ನಮ್ಮ ಭಾಷೆಯನ್ನು ಹಾಳು ಮಾಡಲಿ ಅಂತ ಕಂಗ್ಲಿಷ್‍ನಲ್ಲಿ ಬರೀತಿದ್ದೇನೆ ಅಂತ ವಾದಿಸುತ್ತಿದ್ದೀರಿ - ಪ್ರಾಮಾಣಿಕವಾಗಿ ಆಲೋಚನೆ ಮಾಡಿ ನೋಡಿ, ಇದು ಆತ್ಮವಂಚನೆಯಲ್ಲವೇ? ಹಾಸ್ಯಾಸ್ಪದ ಮಾತಲ್ಲವೇ? ನಿಮ್ಮ ಕಂಗ್ಲಿಷ್ ಹೇಗೆ ಭಾಷೆಯನ್ನು ಕೊಲ್ಲಬಹುದು ಎಂಬುದರ ಬಗ್ಗೆ ನಾನು ಒಂದು ಚಿತ್ರಣವನ್ನು ನಾನು ನನ್ನ ಮೊದಲ ಪತ್ರದಲ್ಲಿ ಕೊಡಲಿಲ್ಲವೇ? ಅದರಲ್ಲಿ ನಿಮಗೆ ಯಾವ ಭಾಗ ಅರ್ಥವಾಗಲಿಲ್ಲ ಎಂದು ನನಗೆ ಗೊತ್ತಿಲ್ಲ.

ಮತ್ತೆ ನೀವು ಈ ಕೆಳಗೆ ಬರೆದಿರುವುದರಲ್ಲಿ ಅಂಥಾ ದೊಡ್ಡ ತಲೆ ಹೋಗುವ ಅಪರಾಧ ಏನೂ ಇಲ್ಲ, ಕೀಳರಿಮೆ ಬಿಟ್ಟು ಕನ್ನಡದಲ್ಲಿಯೇ ಟೈಪ್ ಮಾಡಿ ಎಂದು ವಿನಂತಿ.

"ನಾವುಗಳು ಮಾಡಿದಷ್ಟು ನೀವುಗಳು ಮಾಡುವುದಿಲ್ಲ - ನೀವೇನು ಮಾಡಿದ್ದೀರಿ ಹೇಳಿ" ಎಂಬಂತಹ ಮಾತುಗಳು ಅಹಂಕಾರದ ಮಾತಾಯಿತು, ಅದಕ್ಕೆ ನಾನು ಪ್ರತಿಕ್ರಿಯಿಸಲು ಇಚ್ಛೆಪಡುವುದಿಲ್ಲ. ಬಿಸಿರಕ್ತವನ್ನು ಬದಿಗಿಟ್ಟು ಬೇರೆಯವರ ಮಾತುಗಳಲ್ಲಿರುವ ಸತ್ಯವನ್ನು ಅರ್ಥೈಸಿಕೊಂಡು ತುಸು ಗೌರವ ಕೊಡುವುದನ್ನು ಕಲಿತುಕೊಳ್ಳಿ ಎಂದಷ್ಟೇ ಹೇಳಬಲ್ಲೆ.

ಒಟ್ಟಿನಲ್ಲಿ, ನನ್ನ ಕಡೆಯಿಂದ ಎಲ್ಲವನ್ನೂ ಸ್ಪಷ್ಟವಾಗಿಯೇ ಬರೆದಿದ್ದೇನೆ, ಆತ್ಮೀಯತೆ ಹಾಗೂ ತಾಳ್ಮೆಯಿಂದಲೇ ವರ್ತಿಸಿದ್ದೇನೆ. ಆದರೆ ಈ ಎಲ್ಲಾ ಗುಣಗಳು ನಿಮ್ಮ ಪತ್ರಗಳಲ್ಲಿ ನನಗೆ ಕಾಣಿಸುತ್ತಿಲ್ಲ. ಕರ್ನಾಟಕದಿಂದ ದೂರ ಇದ್ದೂ ಕನ್ನಡದ ಬಗ್ಗೆ ಅಭಿಮಾನ ಉಳಿಸಿಕೊಂಡಿದ್ದೀರಿ ನೀವು, ಎಂಬುದು ಸಂತಸದ ಮಾತು. ನಿಮ್ಮ ಒಳ್ಳೆಯ ಕೆಲಸಗಳ ಬಗ್ಗೆ ನಾನು ಮೆಚ್ಚುಗೆಯ ಮಾತುಗಳನ್ನು ಮೊದಲೇ ಆಡಿರುವೆ. ನೀವು ನಿಮ್ಮ ಅನೇಕಾನೇಕ ಪತ್ರಗಳನ್ನು (ಅದರಲ್ಲಿಯೊ ದೀರ್ಘ ಪತ್ರಗಳನ್ನು) ಆದಷ್ಟೂ ಕನ್ನಡದಲ್ಲಿಯೇ ಬರೆಯಿರಿ ಎಂದಷ್ಟೇ ಆಶಿಸುವೆ.

ಇದು ಆನಂದ ಅವರಿಗೆ ಮಾತರವಲ್ಲ, ಕಂಗ್ಲಿಷ್‍ ಪತ್ರಗಳಿಂದ ’ಕಹಳೆ’ ಗುಂಪನ್ನು ಕಲುಷಿತಗೊಳಿಸುತ್ತಿರುವ ಇನ್ನೆಲ್ಲಾ ಸದಸ್ಯ/ಸದಸ್ಯೆಯರಿಗೂ ಕೂಡ. ಈಗ ಕನ್ನಡದಲ್ಲಿ ಪತ್ರ ಬರೆಯುವುದು ಮೊದಲಿನಷ್ಟು ಕಷ್ಟವಿಲ್ಲ, ಯಾಕೆ  ಶುದ್ಧ ಕನ್ನಡದಲ್ಲಿ ಬರೆಯಲು ಒಂದಷ್ಟು ದಿನ ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡಬಾರದು ನೀವು?

ಇತಿ,
ಕೃಷ್ಣ ಶಾಸ್ತ್ರಿ

Email 9
Anand avara bagge thumbaa laghuvaagi baredaddannu nodi theera besara aaithu. Ee groupnalli iruva athyantha kriyasheela sadasyaralli anand obbaru. Avara bagge kelaginavaru barediddannu nodidare, avar uddeshada bagge shanke moodutthe.. Ivaru, yaaro groupnalli huli hindalu bandavaru antha. Avarige nijavaagi bhashe bagge horata maduva kaalaji iddare, hogi bashe, nelada mele dabbalike maaduttiruvavara mele horata maadali. Adu bittu illi nammavaranne sumne sumne tharatege thegedukolluvudu nijavaagiyoo vishadaneeya.

Anand avare, neevu ee reethiya prathikriyegalinda vichalitharaagabedi. Namma prema & bembala sadaa thammanthavarige. Thamma kannada abhimanada mele ellashtoo samshayavilla. Badalaagi thamma kannada para horatada bagge mecchuge ide.

Dhanyavaada,

Shantharam Kamath

Email 10
Kamath sahebre/snehithare

Nanna hrudpoorvaka namanagalu nimagae...

Mecchide kannadiga, tumba santoshavaithu... idanna chain mails thara yelkondu hoogalu nanagae istavilla, nanna minche nalli helidanthe, yaar  yaar yen maadtiddare adu nimgaligae gothu.

snehithareu ee thara minchegalu bareyudrinda, nanna demotivate maadidanthe agutte nanagae,

nanagae besaravaagide, ondistu olle kelsagalu maadoke bidolvalla namma jana antha.. yare aagali nimgaligae sahaaya maadalu istavilla andare sumniddubidi, nammanthavarannu demotivate maadabedi antha nanna prarthane.

Kamath ravare nimmanthavara support beku nanage, nimmanthavarindale ondistu ollekelsagalu maadtiddene, inu ondistu olle kelasagalu maadalu mundaaguve..

Jai kannadambe
Anand MB

Email 11
ಶಾಂತಾರಾಮ್ ಅವರೇ,

ಆನಂದ್ ಅವರ ಇಲ್ಲಿಯವರೆಗಿನ ಸೇವೆಗಳನ್ನು ನಾನೆಲ್ಲಿ ಹೀಗಳೆದಿದ್ದೇನೆ? ಒಮ್ಮೆ ದಯವಿಟ್ಟು ತೋರಿಸಿ ಕೊಡುತ್ತೀರಾ? ಅವರಿಗೆ ಕನ್ನಡದ ಬಗ್ಗೆ, ಕನ್ನಡಿಗರ ಬಗ್ಗೆ ಅಪಾರ ಕಾಳಜಿ ಇದೆ ಎಂಬುದನ್ನು ನಾನು ಕೂಡ ಒಪ್ಪಲಿಲ್ಲವೇನು? ಆದರೆ ಆನಂದ್ ಅವರೇ ನನ್ನ ವೈಯಕ್ತಿಕ ಪತ್ರಗಳಿಗೆ ಸರಿಯಾಗಿ ಉತ್ತರ ಕೊಡದೆ ಕೊನೆಗೆ illogical ಆಗಿ ಈ ವಿಷಯವನ್ನು ಇಲ್ಲಿಯವರೆಗೆ ತಂದದ್ದು ಎಂದು ನಿಚ್ಚಳವಾಗಿ ಕಾಣುವ ವಿಷಯ.

ನಾನು ಆನಂದ್ ಅವರ ಬಗ್ಗೆ ಕೇವಲವಾಗಿ ಬರೆದಿದ್ದೇನೆ ಅಂತ ಹೇಳುತ್ತೀರಿ, ನಾನು ಎಲ್ಲಿಯೂ ಶಿಷ್ಟಾಚಾರವನ್ನು ಮೀರಿ ಬರೆಯಲಿಲ್ಲ - ನಿಮಗೆ ಶಿಷ್ಟಾಚಾರ ಹಾಗೂ ಆರೋಗ್ಯಕರ ಚರ್ಚೆಯ ಪರಿಕಲ್ಪನೆಯೇ ಇಲ್ಲ ಎಂದು ತೋರುತ್ತದೆ. ಇರಲಿ, ನೀವು ನನಗೆ ಅಂತಹ ಒಂದು ಹಣೆಪಟ್ಟಿ ಕಟ್ಟಿದರೂ ಕೂಡ ನಾನು ನಿಮ್ಮ ಪ್ರಚೋದನೆಗೆ ಒಳಗಾಗುವುದಿಲ್ಲ, ನನ್ನ ಮೂಲ ಉದ್ದೇಶವನ್ನೇ ಪುನಃ ಒತ್ತಿ ಹೇಳುತ್ತೇನೆ:

"ಕಂಗ್ಲಿಷ್ ಬಿಟ್ಟು ಕನ್ನಡ ಬಳಸಿ"

ನಾಳೆ ಏನೇನೋ ಸಬೂಬು ಹೇಳಿ ಅಂಗಡಿಗಳ ಬೋರ್ಡ್‍ಗಳು, ಇಲೆಕ್ಟ್ರಾನಿಕ್ ಡಿಸ್ಪ್ಲೇಗಳು, ವೆಬ್‍ಸೈಟ್‍ಗಳು, ATMಗಳು, ಮತ್ತಿತರ ಜಾಗಗಳಲ್ಲಿ ಕಂಗ್ಲಿಷ್‍‍ನಲ್ಲಿ ರಾರಾಜಿಸತೊಡಗಿದರೆ ನಾವು ಅದನ್ನು ಇಷ್ಟಪಡುತ್ತೇವೆಯೇ?ಅದರ ವಿರುದ್ಧ ಪ್ರತಿಭಟನೆ ಮಾಡಬೇಕೆಂದು ತೋರುವುದಿಲ್ಲವೇ?

ನಾನೇನು ಈ ಗುಂಪಿನಲ್ಲಿ ಹುಳಿ ಹಿಂಡಲು ಬಂದವನಲ್ಲ. ನಿಮಗೆ ಗೊತ್ತಿಲ್ಲದಿರಬಹುದು, ನಾನು ಕಹಳೆ ಗುಂಪಿನ ಆರಂಭಿಕ ಸದಸ್ಯರಲ್ಲಿ ಒಬ್ಬ, ಇದರ ಅನೇಕ ಏಳು-ಬೀಳುಗಳಲ್ಲಿ ಭಾಗಿಯಾದವನು, ಇತ್ತೀಚೆಗೆ ವೈಯಕ್ತಿಕ ಕಾರಣಗಳಿಂದಾಗಿ ನನಗೆ ಇಂಟರ್‌ನೆಟ್ ಬಳಸುತ್ತಿರಲಿಲ್ಲ ಹಾಗೂ ಗುಂಪಿನಲ್ಲಿ ನನ್ನ ಚಟುವಟಿಕೆ ಇರಲಿಲ್ಲ.  ಆದರೆ ಅಲ್ಲೊಮ್ಮೆ ಇಲ್ಲೊಮ್ಮೆ ಗೂಂಪಿಗೆ ಬರುವ ಪತ್ರಗಳನ್ನು ಗಮನಿಸುತ್ತಲೇ ಇದ್ದೆ, ಇತ್ತೀಚೆಗೆ ಕಂಗ್ಲಿಷ್ ಬಳಕೆ ತುಂಬಾ ಜಾಸ್ತಿಯಾಗಿದೆ ಎಂಬುದನೂ ನೋಡುತ್ತಿದ್ದೆ, ಸದ್ಯಕ್ಕೆ ತೀರಾ ಅಸಹನೀಯವಾಗುವ ಮಟ್ಟದಲ್ಲಿದೆ. ಆನಂದ್ ಅವರು ಕಹಳೆ ಮಾತ್ರವಲ್ಲ ಇನ್ನಿತರ ಅದೆಷ್ಟೋ ಗುಂಪುಗಳಿಗೆ ಸಕ್ರಿಯವಾಗಿ ಪತ್ರ ಬರೆಯುವವರು, ಅವರು ಕನ್ನಡದಲ್ಲೇ ಪತ್ರಿಸಬೇಕು ಎಂಬ ಆಸೆ ನನಗೆ ಎಂಬುದು ನಿಮಗೆಲ್ಲರಿಗೂ ಸ್ಪಷ್ಟವಾಗುವುದಿಲ್ಲವೇ?

ಆನಂದ್ ಅವರೇ,

ಯಾಕೆ ಕನ್ನಡದಲ್ಲಿ ಬರೆಯಲು ಸಾಧ್ಯವಿಲ್ಲ ಎಂಬುದಕ್ಕೆ ಇದುವರೆಗೆ ಸ್ಪಷ್ಟವಾದ ಕಾರಣವನ್ನು ಕೊಟ್ಟಿಲ್ಲ ಅವರು, ಸಮಯದ ಅಭಾವ ಸರಿಯಾದ ವಾದವಲ್ಲ ಎಂಬುದನ್ನು ನಾನು ಈಗಾಗಲೇ ಹೇಳಿದ್ದೇನೆ, ಸುಲಭವಾಗಿ ಕನ್ನಡಡಲ್ಲಿ ಬರೆಯಲು ಅವಕಾಶಗಳಿವೆ, ಅಲ್ಲವೇ?

ತೀರಾ ಅನಿವಾರ್ಯವಿದ ಸನ್ನಿವೇಶಗಳಲ್ಲಿ ಗತ್ಯಂತರವಿಲ್ಲದೆ ತುಸು ಕಳಪೆ ಮಟ್ಟದ ವಿಷಯಗಳನ್ನು ಒಪ್ಪಿಕೊಂಡು ಹೊಂದಾಣಿಕೆ ಮಾಡುವುದರಲ್ಲಿ ಅರ್ಥ ಇದೆ, ಆದರೆ ಸುಲಭ ಆಯ್ಕೆಗಳು ಎದುರಿದ್ದಾಗಲೂ ಉದಾಸೀನತೆಯಿಂದಲೋ, ಗಟ್ಟಿ ಮನಸ್ಸು ಮಾಡದೆಯೋ ಅಥವಾ ಇನ್ನಿತರ ಕಾರಣಗಳಿಂದ ಹೊಂದಾಣಿಕೆ ಮಾಡಿಕೊಳ್ಳುವುದು ಉಚಿತವಲ್ಲ.

ಕನ್ನಡ ಬಳಸಲು ಕನ್ನಡಿಗರನ್ನೇ ಪ್ರೇರೇಪಿಸಲು ಹಾಗೂ ಅದರ ಮಹತ್ವವನ್ನು ಮನವರಿಕೆ ಮಾಡಿಕೊಡಲು ಇಷ್ಟು ಕಷ್ಟವಾಗುತ್ತದೆ ಎಂದರೆ ನೀವೆಲ್ಲಾ ಕನ್ನಡೇತರರಿಗೆ ಕಳುಹಿಸುವ ನೂರಾರು ಪತ್ರಗಳು ಅವರ ಮನಮುಟ್ಟುತ್ತದೆ ಎಂದು ನಿಮಗೆ ಕಾಣುತ್ತದೆಯೇ? ಬೆದರಿಕೆಗಳಿಗೆ, ಗೂಂಡಾಗಿರಿಗೆ ಹೆದರಿ ಕೆಲವು ಕನ್ನಡಪರ ಬದಲಾವಣೆಗಳು ಬರುವುದನ್ನು ಕಾಣಬಹುದು, ಆದರೆ ಅದರಿಂದ ಎಷ್ಟೋ ಮುಖ್ಯ ವಿಚಾರ ಎಂದರೆ ನಾವೇ ಒಗ್ಗಟ್ಟಿನಿಂದ ನಮ್ಮೊಳಗೇ ಕನ್ನಡ ಬಳಕೆಯನ್ನು ಜಾಸ್ತಿ ಮಾಡುವುದು.

ನೈಜ ಕಳಕಳಿಯಿಂದ ನಾನು ಬರೆದ ಪತ್ರಕ್ಕೆ ಉತ್ತರ ಕೊಡುವುದನ್ನು ಬಿಟ್ಟು ವಿಷಯವನ್ನು ಎಲ್ಲೆಲ್ಲಿಗೋ ಕೊಂಡೊಯ್ಯಬೇಡಿ. ನಿಮಗೆ ಕನ್ನಡದಲ್ಲಿ ಬರೆಯಲು ಅದೇನು ಕಷ್ಟ ಎಂಬುದನ್ನು ವಿವರಿಸಿ ಈ ಚರ್ಚೆಯನ್ನು ಆರೋಗ್ಯಕರವಾಗಿಯೇ ಮುಂದುವರಿಸಿ ಎಂದು ವಿನಂತಿಸುತ್ತೇನೆ.

ಇತಿ,
ಕೃಷ್ಣ ಶಾಸ್ತ್ರಿ.

Email 12
Mitrare,

    Krishna avare neevu helittiruva maathu kannada paravaagi sariyaage ide.......Adu nimma kannada preethiyannu etti torisuttade.....Aadre Anand maadittiruva kelsa nu ashte shreshta vadaddu.......Nodi eega naanu nanage gottiruva Fresher opening mails annu fwd maadatheni(from around 2 yrs)....and kelavondu sala naanu kooda mail annu "Kannada in English" format nalli bareyutteni.....adakke kaarana namagiruva samayada abhavave horatu berenu illa(Anand avarannnu serisi)....
   Neevu nimmindaada kannada shaya vannu maadi...Naanu nanninda daada sahaya maaduve....and Anand avaru avarindada sahaya vannu maadli....
   ...Namma gumpinalli ee charchegelu mundu variyuvudu beda......Idu nanna ondu prarthane ashte.....
   .....Gumpinalli iruva ellarigu olleyadagali endu aashisuttene...

Nimma,
Sundar
Email 13
ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ನಿಮಗಿರುವ ಆಸಕ್ತಿಯು ಒಳ್ಳೆಯದೇ, ಆದರೆ ನನ್ನ ಪ್ರಶ್ನೆಗಳಿಗೆ ನೀವು ನೀಡಿದ ಉತ್ತರಗಳ್ ಸಮಾಧಾನಕರವಾಗಿಲ್ಲ.

ಕನ್ನಡದಲ್ಲಿ ಬರೆಯಲು ಸಮಯದ ಅಭಾವವೇ ಕಾರಣವೇ? ನೀವು ಕಂಗ್ಲಿಷ್‍ನಲ್ಲಿ ಬರೆಯಲು ಎಷ್ಟು ಸಮಯ ತೆಗೆದುಕೊಳ್ಳುತ್ತೀರಿ, ಕನ್ನಡದಲ್ಲಿ ಬರೆಯಲೂ ಅಷ್ಟೇ ಸಮಯ ಸಾಕು. ಹಾಗಾಗಿ ನಿಮ್ಮ ವಾದವನ್ನು ವಿನಯಪೂರ್ವಕವಾಗಿಯೇ ತಳ್ಳಿ ಹಾಕುತ್ತೇನೆ.

ಕಂಗ್ಲಿಷ್‍ನಲ್ಲಿ ಬರೆಯುವಾಗ ಸ್ವಲ್ಪ ಹೆಚ್ಚುಕಡಿಮೆ ಆದರೆ ಪರವಾಗಿಲ್ಲ, ಆದರೆ ಕನ್ನಡದಲ್ಲಿ ಬರೆಯುವಾಗ ಸ್ವಲ್ಪ ಆಚೆ-ಈಚೆ ಆದರೂ ಕನ್ನಡಕ್ಕೆ ಲಿಪ್ಯಂತರಣಗೊಳ್ಳುವಾಗ ಆಭಾಸವಾಗುತ್ತದೆ ಎಂಬ ಭಯವೇ? ಹಾಗಿದ್ದರೆ ಅಭ್ಯಾಸ ಮಾಡಲು ನಿಮಗೆ ಮನಸ್ಸಿಲ್ಲ ಎಂದು ಹೇಳಿದ ಹಾಗೆ ಆಯ್ತು.

ಒಂದು ವಿಷಯ ಆಲೋಚನೆ ಮಾಡಿ ನೋಡಿ - ಕರ್ನಾಟಕದಲ್ಲಿ ನೆಲೆಸಿರುವ ಕನ್ನಡೇತರರಿಗೆ, ಅವರಿಗೆ ಸಮಯ ಅಭಾವವಿರುವುದಿಲ್ಲವೇ? ದೂರದೂರಿನಲ್ಲಿದ್ದುಕೊಂಡು ಮನೆಯವರೊಂದಿಗೆ ಬರೀ ದೂರವಾಣಿಯಲ್ಲಿ ಸಂಪರ್ಕವನ್ನಿಟ್ಟುಕೊಂಡು, ಇದ್ದ ರಜೆಯನ್ನೆಲ್ಲಾ ಊರಿಗೆ ಹೋಗಿ ಬರಲು ವ್ಯಯಿಸುವ ಅವರಿಗೆ ಎಷ್ಟೋ ಜಾಸ್ತಿ ಸಮಯದ ಅಭಾವವಿರುತ್ತದೆ. ಆದರೆ ಅವರು ಕನ್ನಡ ಕಲಿಯಬೇಕು ಎಂದು ನಾವು ಅಪೇಕ್ಷಿಸುವುದಿಲ್ಲವೇ? (ಅವರಲ್ಲಿ ಅಧಿಕಪ್ರಸಂಗಿಗಳೂ ಸುಮಾರು ಜನ ಇರುತ್ತಾರೆ, ಆದರೆ ಮುಗ್ಧರೂ ಇರುತ್ತಾರೆ ಎಂಬುದನ್ನು ಮರೆಯಬೇಡಿರಿ)

ಕನ್ನಡಿಗರಿಗೇ ಕನ್ನಡದಲ್ಲಿ ಬರೆಯದಿರಲು ಅನೇಕ ನೆವಗಳು ಸಿಗುವುದಾದರೆ, ಇತರರನ್ನು ಕೇಳುವ ನೈತಿಕ ಹಕ್ಕು ನಮಗಿಲ್ಲ. ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ - ಇದು ಸರಿಯಲ್ಲ. ನಮ್ಮಲ್ಲಿ ತಪ್ಪುಗಳಿದ್ದರೆ ಒಪ್ಪಿಕೊಳ್ಳುವ ದೊಡ್ಡತನ ಬೇಕು, ಸರಿಯಾದ ದಾರಿಯಲ್ಲಿ ನಡೆದು ತೋರಿಸಿ ಇತರರಿಗೆ ಮಾದರಿಯಾಗುತ್ತೇನೆ ಎಂಬ ಛಲ ಬೇಕು. ಅಲ್ಲವೇ?

ಇಷ್ಟೆಲ್ಲಾ ಕೇಳಿದ ಮೇಲೆ ದಯವಿಟ್ಟು ಪುನಃ ಹೇಳಿ - ನಿಮಗೆ ಕಂಗ್ಲಿಷ್ ಬಿಟ್ಟು ಕನ್ನಡದಲ್ಲಿ ಬರೆಯಲು ಏನು ಅಂಥಾ ತೊಂದರೆ? ಅನಿವಾರ್ಯ ಕಾರಣಗಳಿದ್ದರೆ ಒಪ್ಪೋಣವಂತೆ, ನನಗೇನೂ ಬೇಸರವಿಲ್ಲ, ಅರ್ಥಮಾಡಿಕೊಳ್ಳಬಲ್ಲೆ. ಆದರೆ ಮೇಲೆ ಹೇಳಿದಂತೆ ಸಮಯದ ಅಭಾವ ಎಂಬ ಕಾರಣವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಅದನ್ನು ನಾನು ನಿರಂತರವಾಗಿ ಪ್ರತಿಭಟಿಸುತ್ತಲೇ ಇರುತ್ತೇನೆ.

ಇತಿ,
ಕೃಷ್ಣ ಶಾಸ್ತ್ರಿ.

Email 14
ಹೋಗ್ಲಿ ಬಿಡಿ. ಈ ತರದ ಜನ ಮೈಲ್ ಫಾರ್ವರ್ಡ್ ಮಾಡೋದೇ ಕನ್ನಡ ಪರ ಕೆಲಸ ಅಂದ್ಕೊಂಡಿರ್ತಾರೆ. ನೀವು ಆವರ ಜೊತೆ ವಾದ ಮಾಡುವದರಲ್ಲಿ ಅರ್ಥ ಇಲ್ಲ. ಎಲ್ಲ ಮೈಲ್‍ಗಳನ್ನು ನಿಮ್ಮ ಗಮನಕ್ಕೆ ಅಂತ ಕಳಿಸೋದು ಬಿಟ್ಟರೆ ಅದಿನ್ಯಾವ ಘನಂದಾರಿ ಕೆಲಸ ಮಾಡಿದಾರೋ ನನ್ಗತ್ತು ಗೊತ್ತಿಲ್ಲ. 

ನೀವು ಸುಮ್ಮನೇ ನಿಮ್ಮ ಕನ್ನಡ ಪರ ಕೆಲಸ ಮಾಡಿ.

ಹಾರೈಕೆಯೊಂದಿಗೆ
ಆನಂದ್   ( ಬೇರೆ ಆನಂದ್ :-)  ) 
Email 15
ಆನಂದ್ ಅವರೇ,

ನಿಮ್ಮ ಪತ್ರಕ್ಕೆ ಧನ್ಯವಾದಗಳು.

ನಾನು ಇದನ್ನು ಇಷ್ಟಕ್ಕೇ ಬಿಡುವುದಿಲ್ಲ, ನಮ್ಮ ನಮ್ಮಲ್ಲಿಯೇ ಇರುವ ಹುಳುಕುಗಳನ್ನು ಮುಚ್ಚಿಹಾಕುವ ಕೆಲಸವನ್ನು ಕೂಡ ಮಾಡಬೇಕಾಗುತ್ತದೆ. ಕಹಳೆ ಗುಂಪನ್ನು ಆದಷ್ಟೂ ಕನ್ನಡಮಯ ಮಾಡಬೇಕೆಂದು ನಾನು ಅದೆಷ್ಟೋ ಕಾಲದಿಂದ ಸಮಯ ಸಿಕ್ಕಾಗಲೆಲ್ಲಾ ಪ್ರಯತ್ನಿಸುತ್ತಿದ್ದೇನೆ.

ನೋಡೋಣ, ಕನ್ನಡ ಬಳಸದೇ ಇರುವುದಕ್ಕೆ ಇವರೆಲ್ಲಾ ಏನು ಉತ್ತರ ಕೊಡುತ್ತಾರೆ ಅಂತ.

ಇತಿ,
ಕೃಷ್ಣ ಶಾಸ್ತ್ರಿ

Email 16
If its a small email and there is dearth in time, then i dont see an issue in writing english or kanglish emails as composing in kannada on google translation DOES take more time with all the necessary corrections. i have seen anand writing kannada emails from time to time, so its not that anand only writes in english/kanglish.

however, lengthy kanglish mails are painful to read and irritating and i happen to just trash them.

i hope this will bring an end to this bitter conversation.
Email 17
ದೀಪಕ್ ಅವರೆ,

ಮೊದಲನೆಯದಾಗಿ ಎಲ್ಲಾ ಬಗೆಯ ಚರ್ಚೆಗಳನ್ನು ’ಕಹಿ’ ಎಂದು ಪರಿಗಣಿಸುವುದಕ್ಕೆ ನನ್ನ ಅನುಮೋದನೆ ಇಲ್ಲ, ಇದು ಬಹಳ ಸುಲಭವಾಗಿ ಆರೋಗ್ಯಕರ ಚರ್ಚೆಯಾಗಲು ಸಾಧ್ಯವಿರುವಂತಹ ವಿಷಯ. ಅದನ್ನು ಹಾಗೆಯೇ ಕೊಂಡೊಯ್ಯುವುದು ನಮ್ಮ ನಮ್ಮ ಕೈಗಳಲ್ಲೇ ಇದೆ.

ಈ ಮೊದಲು ಹೇಳಿದಂತೆ ನಾನು ಕೂಡ ದೀರ್ಘ ಪತ್ರಗಳ ಬಗ್ಗೆಯೇ ಹೆಚ್ಚು ಚಿಂತಿತನಾಗಿರುವೆನು (ನನ್ನ ಮೊಟ್ಟ ಮೊದಲ ಪತ್ರದಲ್ಲಿ ಇದನ್ನು ನೀವು ಗಮನಿಸಬಹುದು), ಆದರೆ ಸಣ್ಣ/ದೊಡ್ಡ ಎಂಬುದನ್ನು ಹೇಗೆ ವಿಂಗಡಿಸುವುದು? ಉದಾ: ನಿಮ್ಮೀ ಕೆಳಗಿನ ಪತ್ರ ಕನ್ನಡದಲ್ಲಿ ಬರೆಯಲು ಯೋಗ್ಯವಾದಷ್ಟು "ದೊಡ್ಡದು" ಎಂದು ನನಗೆ ತೋರುತ್ತದೆ. ಆದರೆ ಬಹುಷಃ ನಿಮಗೆ ಅದು ಸಾಕಷ್ಟು "ಸಣ್ಣದು" ಎಂಬ ಭಾವನೆ ಇದ್ದಂತಿದೆ. ಈ ಕೆಳಗೆ ಶಾಂತಾರಾಮ್, ಆನಂದ್, ಸುಂದರ್ ಅವರೆಲ್ಲಾ ಬರೆದ ಪತ್ರಗಳೂ ಅಷ್ಟೆ. ಸುಮ್ಮನೆ ಕಣ್ಣು ಹಾಯಿಸಿ ಓದಲು ಸಾಧ್ಯವಿಲ್ಲ, ಅವು ಕಂಗ್ಲಿಷ್‍ನಲ್ಲಿರುವುದರಿಂದ.

ಮಾತ್ರವಲ್ಲ, ನಾವು ಗುಂಪಿಗೆ ಏನನ್ನು forward ಮಾಡುತ್ತೇವೆ ಅನ್ನುವುದು ಕೂಡ ಮುಖ್ಯ. ಉದ್ಯೋಗಾವಕಾಶಗಳ ಬಗ್ಗೆ ಇರುವ ಪತ್ರಗಳ ಬಗ್ಗೆ ನಾನೇನೂ ಹೇಳುವುದಿಲ್ಲ, ಆದರೆ ಇತರ ಎಷ್ಟೋ ಪತ್ರಗಳು ಗುಂಪಿಗೆ ಬರುತ್ತವೆ, ಅವುಗಳು ಬಹುತೇಕ ಕಂಗ್ಲಿಷ್, ಇಂಗ್ಲಿಷ್‍ನಲ್ಲಿರುತ್ತವೆ. ಪೂರ್ತಿ ಇಂಗ್ಲಿಷ್‍ನಲ್ಲಿರುವ ಜೋಕ್‍ಗಳನ್ನೂ ಆಲೋಚನೆ ಮಾಡದೇ ಕಳುಹಿಸಿಬಿಡುತ್ತಾರೆ. ಇವೆಲ್ಲಕ್ಕೂ ಒಂದು ಬ್ರೇಕ್ ಹಾಕಿ ಸ್ವಲ್ಪ ಆತ್ಮವಿಮರ್ಶೆ ಮಾಡಿಕೊಳ್ಳಬೇಕು, ಅಲ್ಲವೇ?

ಗೂಗಲ್‍ನಲ್ಲಿ ಕನ್ನಡದಲ್ಲಿ ಟೈಪ್ ಮಾಡಲು ಹೆಚ್ಚು ಸಮಯ ಬೇಕು ಅಂತ ಹೇಳ್ತೀರಿ. ಅತ್ಯಂತ ಪುಟ್ಟ ಪತ್ರಗಳಿಗೇ ಅದು ಅನಾನುಕೂಲವಾಗುವುದಾದರೆ ದೀರ್ಘ ಪತ್ರಗಳ ಕಥೆ ಏನು? ಸಣ್ಣದಿರಲಿ, ದೊಡ್ಡದಿರಲಿ ಅಂಥಾ ಅವಕಾಶಗಳನ್ನು ಬಳಸುತ್ತಾ ಇದ್ದರಲ್ಲವೇ ಅದು ನಮಗೆ ಸ್ವಾಭಾವಿಕವಾಗಿ ಮನಸ್ಸಿಗೆ ತಟ್ಟುವುದು? ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತಾ ಇದ್ದರೆ ಮುಂದೆ ದೀರ್ಘ ಪತ್ರಗಳನ್ನು ಬರೆಯುವುದು ಕೂಡ ಸುಲಭವಾಗುತ್ತದೆ, ಬಹುಷಃ ಇದಕ್ಕೆ ನಾನೇ ಒಂದು ಉತ್ತಮ ಉದಾಹರಣೆ!

ದೈನಂದಿನ ಕಾರ್ಯಗಳಲ್ಲಿ ಕನ್ನಡವನ್ನು ಆದಷ್ಟೂ ಬಳಸಬೇಕೆಂದು ಹೇಳುತ್ತೇವೆ, ಆದರೆ ಕಾರ್ಯರೂಪಕ್ಕೆ ತರಲು ಹಿಂಜರಿಯುತ್ತೇವೆ, ಇದನ್ನು ಬದಲಾಯಿಸುವ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರ ಮುಖ್ಯ.

ಇತಿ,
ಕೃಷ್ಣ ಶಾಸ್ತ್ರಿ

Email 18
ನಮ್ಮವರೇ ನಮಗೆ ಏನಾದ್ರೂ ಹೇಳಿದ್ರೆ ಅದನ್ನು ತಪ್ಪಾಗಿ ತಿಳಿದು ವಾದ ಮಾಡುವದರಲ್ಲಿ ಅರ್ಥವಿಲ್ಲ. ಆನಂದ್ ಅವರು ಕನ್ನಡ ಪರ ಕೆಲಸ ಮಾಡುತ್ತಿಲ್ಲ ಅಂತ ಯಾರು ಇಲ್ಲಿ ಎಂದು ಹೇಳಿಲ್ಲ. ಮೈಲ್ ಬರೆಯುವಾಗ ಕನ್ನಡದಲ್ಲಿ ಬರಿಯಿರಿ ಅಂತ ಹೇಳುವುದು ತಪ್ಪೇ?  ಅಥವಾ  ಬರೆಯಲು ಆಗದಿದ್ದ ಪಕ್ಷದಲ್ಲಿ ಪೂರ್ಣ ಆಂಗ್ಲ ಭಾಷೆಯಲ್ಲಿ ಬರೆಯಿರಿ, ತಪ್ಪೇನೂ?
ಕಂಗ್ಲೀಷ್ ಉಪಯೋಗ ತಪ್ಪು ಅನ್ನುವುದು ನನ್ನ್ ಭಾವನೆ ಕೂಡ. ಆದರೆ ಅದನ್ನು ಯಾರ ಮೇಲೂ ಹೇರುವುದೂ ತಪ್ಪು. ನಾವು ನಮ್ಮ ಭಾಷೆಯನ್ನು ಬರೆಯದಿದ್ದರೆ ಉಪಯೋಗಿಸದಿದ್ದರೆ ಬೇರೆ ಯಾರು ಮಾಡುತ್ತಾರೆ?
ಎಲ್ಲರೂ ಚಿಂತನಶೀಲರು ಹಾಗೂ ಕನ್ನಡ ಪರ ಯೋಚಿಸೋ ಮಿತ್ರರೇ ಇದ್ದಾಗ ನಮ್ಮ ನಮ್ಮಲ್ಲಿ ವಿಚಾರ ವಿನಿಮಯ ಮಾಡಿಕೊಂಡು ತಿದ್ದಿ ಬೆಳೆಯೋಣ.

ಧನ್ಯವಾದಗಳು.
ಆನಂದ್

Email 19
Hi Anand and Krishna Shastry
    I appritiate Anand for all the work he does to help Kannadiga and Anand makes sure he forwards the mail specially for Job related which is really really good thing about him and i salute him for this spirit.
Here are my views
1) People how speak and Know Kannada are kannadiga's
2) Kannadigas are people with life and they need support and help overcome the suppression and discomfort Kannadogas  face in every day to day life by other Language people
3) Kannada is a Language.
4) All languages are Lifeless and its medium of communications
5) I appritiate Ananda Because he helps kannadigas
6) And proof of being a kannadiga in This Forum is by able to
     i. understand kannada letters
    ii. Able to Understand kanglish letters
   iii. Able to read write and understand any thing Similiar to kannada Litrature.

Anand and krishna shastry i appritiate you views on my mail.

Regards
S.Kiran Kumar

Email 20
ನನ್ನ ಪ್ರಶ್ನೆಯನ್ನು ಮತ್ತೊಮ್ಮೆ ಸರಳವಾಗಿ ನಿಮ್ಮ ಮುಂದಿಡುತ್ತೇನೆ. ಕನ್ನಡದಲ್ಲಿ ಪತ್ರ ಬರೆಯಲು ನಿಮಗೆ ಇರುವ ಪ್ರಮುಖವಾದ ಅಡಚಣೆಗಳೇನು?

’ಸಮಯದ ಅಭಾವ’ ಎಂಬುದನ್ನು ಬಲವಾದ ಕಾರಣ ಎಂದು ಪರಿಗಣಿಸಲು ಸಾಧ್ಯವಿಲ್ಲ - ಇದು ನಾವು ಇದುವರೆಗಿನ ಚರ್ಚೆಯಲ್ಲಿ ಎತ್ತಿ ಹಿಡಿದ ಅಂಶ.

ಇನ್ನಿತರ ಅಡಚಣೆಗಳಿದ್ದರೆ ದಯವಿಟ್ಟು ಹಂಚಿಕೊಳ್ಳಿ, ಅದರ ಬಗ್ಗೆ ಮುಕ್ತ ಚರ್ಚೆ ನಡೆಯಲಿ, ಕನ್ನಡ ಬಳಕೆಯನ್ನು ಹೇಗೆ ಹೆಚ್ಚಿಸುವುದು ಎಂಬುದನ್ನು ತಿಳಿದುಕೊಂಡು ಮುನ್ನಡೆಯೋಣ.

ಇತಿ,
ಕೃಷ್ಣ ಶಾಸ್ತ್ರಿ.

Email 21
Nanage kannada dalli Barialo Thumba Kasta Aaguth, Yake Andre,
1) Kannada da akshara Galana Nanu Type maadodu hege antha nanage Gothila haagu Thiludu Kolluva Aaskthiyou nanage illa.
2) Nanage kannada Baruthe antha Helodake Naanu Kanglish Nalli Baruthene.
3) Kanglish nalli Bariodu Nanage Thumbe easy haagu adu nanage ista Kooda.
4) Kanglish Nalli Bariondrinda, Kevala Kannada Baruvavarige maathra email artha Aguthe haagu Naanu kannadiga antha yellarigu thilisdanthe aaguthe.
5) Krishna Shatry Avare neevu eevichara da jothige swalpa kannada davirige yeenadru Sahaya maadi athava nimage thilidavariga yenadru Kelasa Beku antha indra please forward maadi athava nimage thilidalli yalladru Kelasa Khalli idre Kahale Group ge forward maadi,
6) Nimmida Ee kahale Group ge Thumba Upkara aaguthe.

Email 22
Kiran ravare/snehithare,

Dhanyavaadagalu...

Anand MB
Bengaluru

Email 23
ಚರ್ಚೆ ಚೆನ್ನಾಗಿದೆ ...ನಾನು ಓದುಗ ಅಷ್ಟೆ... ;-)
[Pressed F11 - am using google chrome and baraha direct]
enu beekaadaru Type maadbahudu
[pressed F11]
ನಾನು ಕನ್ನಡ ಬರೆಯೋದು ಕಷ್ಟ ಆಗಲ್ಲ, ಸಮಯ ಬೇಕಿಲ್ಲ ಅಂತ ತೋರಿಸ್ತಿಲ್ಲ... ಆಸಕ್ತಿ ಇದ್ರೆ ೧೦ (pressed F11) 10% time extra reqd ಅಷ್ಟೆ.
see my reply to ur first point - enable unicode n baraha direct and type the alphabets what i have typed... check out the difference in ur words n mine.... tumba difference illa anta nanna bhaavane (tuMba Dipharens illa aMta nanna Baavane)
Nanage kannada dalli Barialo Thumba Kasta Aaguth, Yake Andre,
1) Kannada da akshara Galana Nanu Type maadodu hege antha nanage Gothila haagu Thiludu Kolluva Aaskthiyou nanage illa.
--(Baraha style) kannaDa da akShara gaLanna naanu Taip maaDodu hEge aMta nanage gottilla haagu tiLidu koLLuva aasaktiyu nanage illa 

BTW, I would prefer proper kannada fonts or proper english for long mails - but you can write nimma gamanakke in kanglish and forward the mails (i support that too....who is new to baraha direct or any other kannada fonts like nudi....etc)
for chatting i use kanglish becos they are one liners........

Email 24
Kiran ravare/snehithare,

Dhanyavaadagalu...

Anand MB
Bengaluru

Email 25
ಕಿರಣ್ ಅವರೆ,

ಕನ್ನಡದಲ್ಲಿ ಹೇಗೆ ಟೈಪ್ ಮಾಡುವುದು ಎಂದು ಗೊತ್ತಿಲ್ಲ ಎಂದರೆ ಸರಿ, ಆದರೆ ತಿಳಿದುಕೊಳ್ಳುವ ಆಸಕ್ತಿ ಇಲ್ಲ ಎಂಬುದು ಬಹಳ ಆಕ್ಷೇಪಣಾರ್ಹ ಮಾತು. ನಿಮ್ಮೀ ದೃಷ್ಟಿಕೋನ ಆಘಾತಕಾರಿಯಾದುದು, ಕನ್ನಡ ಗುಂಪಿನಲ್ಲಿದ್ದುಕೊಂಡು ಹೀಗೆ ಹೇಳುವುದು ತರವಲ್ಲ.

ಜಗದೀಶ್ ಅವರೆ,

ಕನ್ನಡದಲ್ಲಿ ಟೈಪ್ ಮಾಡುವುದಕ್ಕೆ ಹೆಚ್ಚು ಸಮಯ ಬೇಕಿಲ್ಲ ಎಂಬುದನ್ನು ಪುನಃ ಒತ್ತಿ ಹೇಳಿದ ನಿಮಗೆ ಧನ್ಯವಾದಗಳು. ಆದರೆ ಒಂದು ಮಾತು - ಇಲ್ಲಿ ನಾನು ಬರಹ ಡೈರೆಕ್ಟ್ ಅನ್ನು ಉಪಯೋಗಿಸಿ ಅಂತ ಹೇಳುತ್ತಾ ಇಲ್ಲ, ಎಲ್ಲರಿಗೂ (ಮುಖ್ಯವಾಗಿ ಕಛೇರಿಗಳಲ್ಲಿರುವವರಿಗೆ) ಇಂತಹ ತಂತ್ರಾಂಶಗಳನ್ನು ತಮ್ಮ ಕಂಪ್ಯೂಟರ್‌ಗಳಲ್ಲಿ ಅಳವಡಿಸಿಕೊಳ್ಳುವ ಅನುಮತಿ ಇರುವುದಿಲ್ಲ. ಅದಕ್ಕಾಗಿ ನಾನು ಅಂತರ್ಜಾಲದಲ್ಲಿ ನೇರವಾಗಿ ಟೈಪ್ ಮಾಡುವ ಅವಕಾಶವಿದೆ ಎಂಬುದನ್ನು ಒತ್ತಿ ಹೇಳುತ್ತಿದ್ದೇನೆ.

ಇತಿ,
ಕೃಷ್ಣ ಶಾಸ್ತ್ರಿ

Email 26
Most of IT companies are blocking e-mails (yahoo.gmail etc ) offlate. So we can not expect
kannada fonts while sending the emails from official ID.

Regards
Ganesh

Email 27
ಗಣೇಶ್ ಅವರೆ,

ನಿಮ್ಮದು ನ್ಯಾಯಸಮ್ಮತವಾದ ಮಾತು, ಒಪ್ಪುತ್ತೇನೆ. ಆದರೆ ಅಂತಹ ಯಾಹೂವಿನಿಂದಲೇ ಕಂಗ್ಲಿಷ್ ಪತ್ರಗಳನ್ನು ಕಳುಹಿಸಿದನ್ನು ನಾನು ಕಾಣುತ್ತೇನೆ, ನೀವು ಹೇಳುವ ಮಾತು ಅಂತಹ ಸಂದರ್ಭದಲ್ಲಿ ಅನ್ವಯವಾಗುವುದಿಲ್ಲ.

ಮಾತ್ರವಲ್ಲ, ಉದ್ಯೋಗಾವಕಾಶ ಇತ್ಯಾದಿಗಳಿಗೆ ಸಂಬಂಧಪಟ್ಟ ಈ-ಮೈಲ್‍ಗಳನ್ನು official IDಯಲ್ಲಿ ಯಾರೂ ವ್ಯವಹರಿಸುವುದಿಲ್ಲ, ಇಂತಹ ಗುಂಪುಗಳಲ್ಲಿ ಅಂತಹ ID ಯ ಮೂಲಕ ಸೇರುವವರೂ ಅತ್ಯಂತ ವಿರಳ (ಅಂತಹ ವೈಯಕ್ತಿಕ ಉಪಯೋಗ ಕೂಡ ಕಂಪನಿಗಳ ನಿಯಮ ವಿರುದ್ಧವಾಗಿರುತ್ತದೆ)

ಇತಿ,
ಕೃಷ್ಣ ಶಾಸ್ತ್ರಿ

Email 28
ಕಛೇರೆ ಇಂದ ಮೈಲ್ ಕನ್ನಡದಲ್ಲಿ ಬರೆಯಲು ಇದನ್ನೂ ಉಪಯೋಗಿಸಬಹುದು
<http://www.google.com/transliterate/>

ಇತಿ
ಶ್ರೀ ರಂಜನ್
Email 29
Hello krishan Shastry Avare
    Nanage yavudara mele Aaskthi de athava illa anuvudu Nanna Viyakthika Vichara aagiruthade, haage Antha naanu Innobha Kannadiganige Sahaya Maada barudu athava Athava Kannada Gumpe nalli iddu naanu satya Helabardu antha kooda illa.
Nanna Satya nimage Kahi aadre aduke Naanu yeno Moduvudake Oogadilla.
Neenu Nanna Modalane Point ge Maatra uttara Kothidire, Mikka Points na Bagge Swalpa kooda Maatha Nadilla, Yaake, Most important yavudu andre Nimma ge thilidarege Yenadru Sahaya bekidalli Kahale Group nalli kele Sahaya keludu atha nimage thiladalli Kelasa idre kahale Group ge Thilisuvudu.
Yake Nimma ge Yaaru kannada davaru Parichaya illave athava Yaregu Nimma Sahaya Bekillave.
Athave Nimage Yaarigu Sahaya maaduva Manisallave.

Mathe Nimage Nanna Abhipraya na Thilisi heluthane
1) Kannada anuvudu andu Bashe,
2) Kannadigaru ee bashe yannu aaduthare
3) Ayava Bashe go jeeva iruvudilla
4) Adduva Janarege jeeva iruthe
5) Kannada maadtha naaduva Janarege Naanu Sahaya bekeide
6) Kahale yalli Kannadigarige yenadru Bare bashe avarinda ananukula aagidre adake kahale Group ninda Sahaya Madutheve.
7) Kannada bariyudu, Mathe aadu kanglishu athava naanu barada kannada Nimagintha Chenagi ide atha nanna Kannada Nima gintha uttama anoo vichara dalli yarigu yenoo sahaya aggodilla.

Email 30
ನಿಮ್ಮ ಕಂಗ್ಲಿಷ್ ಓದಲು ನನಗೆ ತಾಳ್ಮೆ ಇಲ್ಲ, ಇಷ್ಟವೂ ಇಲ್ಲ. ಕ್ಷಮಿಸಿ. 
ಇತಿ,
ಕೃಷ್ಣ ಶಾಸ್ತ್ರಿ

Email 31
ಕನ್ನಡದಲ್ಲಿ ಯಾಕೆ ಬರೆಯಬೇಕು ಅನ್ನುವದಕ್ಕೆ ಮತ್ತೊಂದು ನಿದರ್ಶನ.
ದಯಮಾಡಿ ಯಾರು ಯಾರನ್ನು ಇಲ್ಲಿ ಪ್ರಶ್ನಿಸುತ್ತಿಲ್ಲ
ಪ್ರಯತ್ನ ಮಾಡಿ ನಮ್ಮ ಭಾಷೆಯನ್ನು ಉಳಿಸಿ ಬೆಳೆಸೋಣ ಅನ್ನುವ ಕಳಕಳಿಯೇ ಹೊರತು
ನೀವು ಹೀಗೆ ಮಾಡಿ ಅಂತ ಹೇಳ್ತಾ ಇಲ್ಲ. ಸ್ವಲ್ಪ ನಿಧಾನವಾಗಿ ಯೋಚಿಸಿ ನೋಡಿ.

ಆನಂದ್ ಹೊನ್ನತ್ತಿ

*********************************************************************************************************
ಗೆಳೆಯರೇ,

ಇಂಟರ್ನೆಟ್-ನಲ್ಲಿ ನಮ್ಮ ನುಡಿ (ಕನ್ನಡ) ಬಳಸುವುದು ಎಷ್ಟು ಮುಖ್ಯವಾಗಿದ ಎಂಬುದಕ್ಕೆ ಇಲ್ಲೊಂದು ನಿದರ್ಶನ ಇದೆ ನೋಡಿ.
http://www.google.co.in/intl/en/landing/meribaat/index-english.html

ಗೂಗಲ್-ನವರು ಈ ಸ್ಪರ್ಧೆ ನಡೆಸುತ್ತಿದ್ದಾರೆ.
ಹಿಂದಿಯಲ್ಲಿ ಲೇಖನಗಳನ್ನು ಬರೆಯುವವರು ಈ ಸ್ಪರ್ಧೆಯಲ್ಲಿ ಭಾಗವಹುಸಬಹುದಂತೆ. ಗೆದ್ದವರಿಗೆ ವಿಧ ವಿಧದ ಬಹುಮಾನ ನೀಡಲಾಗುತ್ತದಂತೆ.
ಈ ರೀತಿಯ ಸ್ಪರ್ಧೆಗಳನ್ನು ಗೂಗಲ್-ನಂತಹ ಕಂಪನಿಗಳು ನಡೆಸುವುದರಿಂದ, ಆ ಭಾಷೆಯ cool factor ಹೆಚ್ಚಾಗುತ್ತದೆ.

ಗೂಗಲ್-ನವರು ಈ ಸ್ಪರ್ಧೆಯನ್ನು ನಡೆಸಲು ಕಾರಣವೇನೆಂದು ಹುಡುಕಿದರೆ, ಇಂಟರ್ನೆಟ್-ನಲ್ಲಿ ಹಿಂದಿ ಬಳಕೆ ಹೆಚ್ಚಿರುವುದು.

ನಮ್ಮ ನುಡಿಯನ್ನು ಇಂಟರ್ನೆಟ್-ನಲ್ಲಿ ನಾವು ಹೆಚ್ಚು ಹೆಚ್ಚು ಬಳಸಿದರೆ, ಗೂಗಲ್-ನವರು ಕನ್ನಡದಲ್ಲೂ ಈ ರೀತಿಯ ಸ್ಪರ್ಧೆ ನಡೆಸುತ್ತಾರೆ.
ಇದರಿಂದ ನಮ್ಮ ನುಡಿಯ cool factor ಹೆಚ್ಚುತ್ತದೆ.

ಸಾಧ್ಯವಾದಷ್ಟು ಇಂಟರ್ನೆಟ್-ನಲ್ಲಿ ನಮ್ಮ ನುಡಿಯನ್ನೇ ಬಳಸೋಣ.

--
ಪ್ರಿಯಾಂಕ್
--
Email 32
ಹಲೋ  ಕೃಷ್ಣ ಶಾಸ್ತ್ರಿ ಅವರೇ ನಿಮ ಗಾಗಿ

    ನನಗೆ ಯಾವುದರ ಮೇಲೆ ಆಸಕ್ತಿ  ದೇ  ಅಥವಾ  ಇಲ್ಲ  ಅನುವುದು  ನನ್ನ ವಿಯಕ್ಥಿಕ  ವಿಚಾರ  ಆಗಿರುತದೆ, ಹಾಗೆ ಅಂತ ನಾನು ಇನ್ನೋಭ
 ಕನ್ನಡಿಗನಿಗೆ ಸಹಾಯ ಮಾಡ ಬರುದು ಅಥವಾ ಅಥವಾ ಕನ್ನಡ ಗುಂಪೇ ನಲ್ಲಿ ಇದ್ದು ನಾನು ಸತ್ಯ ಹೇಳಬಾರದು ಅಂತ ಕೂಡ ಇಲ್ಲ.
ನನ್ನ  ಸತ್ಯ ನಿಮಗೆ ಕಹಿ ಆದ್ರೆ ಅದುಕೆ ನಾನು ಏನೋ ಮೊದುವುದಕೆ ಆಗೋದಿಲ್ಲ.

.
ನೀನು ನನ್ನ ಮೊದಲನೇ ಪಾಯಿಂಟ್ ಗೆ ಮಾತ್ರ ಉತ್ತರ ಕೊಥಿದಿರೆ, ಮಿಕ್ಕ ಪಾಯಿಂಟ್ಸ್ ನ ಬಗ್ಗೆ ಸ್ವಲ್ಪ ಕೂಡ ಮಾತ ನದಿಲ್ಲ, ಯಾಕೆ, ಮೋಸ್ಟ್ ಇಮ್ಪೋರ್ತಂತ್ ಯಾವುದು ಅಂದ್ರೆ ನಿಮ್ಮ ಗೆ ತಿಲಿದರೆಗೆ ಏನಾದ್ರು ಸಹಾಯ ಬೇಕಿದಲ್ಲಿ ಕಹಳೆ ಗ್ರೂಪ್ ನಲ್ಲಿ ಕೇಳೆ ಸಹಾಯ ಕೆಳುದು ಅಥ ನಿಮಗೆ ತಿಲದಲ್ಲಿ ಕೆಲಸ ಇದ್ರೆ ಕಹಳೆ ಗ್ರೂಪ್ ಗೆ ತಿಳಿಸುವುದು.
ಯಾಕೆ ನಿಮಗೆ  ಯಾರು ಕನ್ನಡ ದವರು  ಪರಿಚಯ ಇಲ್ಲವೇ ಅಥವಾ ಯರೆಗೂ ನಿಮ್ಮ ಸಹಾಯ ಬೇಕಿಲ್ಲವೇ.ಅಥವಾ ನಿಮಗೆ ಯಾರಿಗೂ ಸಹಾಯ
ಮಾಡುವ ಮನಿಸಲ್ಲವೇ.

ಮತ್ತೆ  ನಿಮಗೆ ನನ್ನ ಅಭಿಪ್ರಾಯ ನ ತಿಳಿಸಿ ಹೇಳುಥನೆ

1) ಕನ್ನಡ ಅನುವುದು ಅಂದು ಭಾಷೆ,
2) ಕನ್ನಡಿಗರು ಈ ಭಾಷೆ ಯನ್ನು ಆದುತಾರೆ
3) ಯಾವ  ಭಾಷೆ ಗೋ ಜೀವ ಇರುವುದಿಲ್ಲ
4) ಆಡುವ ಜನರಿಗೆ ಜೀವ ಇರುತೆ
5) ಕನ್ನಡ ಮಾತನಾಡುವ ಜನರಿಗೆ ಸಹಾಯ ಬೇಕಿದೆ
6) ಕಹಳೆ ಯಲ್ಲಿ  ಕನ್ನಡಿಗರಿಗೆ ಏನಾದ್ರು ಬಾರೆ ಭಾಷೆ ಅವರಿಂದ ಅನನುಕುಲ ಆಗಿದ್ರೆ ಅದಕೆ ಕಹಳೆ ಗ್ರೂಪ್ ನಿಂದ ಸಹಾಯ ಮಧುತ್ಹೇವೆ.
7) ಕನ್ನಡ ಬರಿಯುದು, ಮತ್ತೆ ಆಡು ಕಂಗ್ಲಿಶು ಅಥವಾ ನಾನು ಬರದ ಕನ್ನಡ ನಿಮಗಿಂತ ಚೆನ್ನಾಗಿ ಇದೆ ಅಥವಾ ನನ್ನ ಕನ್ನಡ ನಿಮ ಗಿಂತ ಉತ್ತಮ ಅನೂ
 ವಿಚಾರ ಡಲ್ಲಿ ಯಾರಿಗೂ ಏನೂ ಸಹಾಯ ಅಗ್ಗೋದಿಲ್ಲ.
8) ಯಾರಿಗೆ ಹೇಗೆ ಕನ್ನಡ ಬರಿಯೋಕೆ ಆಗುತ್ಹೋ ಅವರು ಹಾಗೆ ಬರಿಯಲಿ, ಅವರ ವಿಚಾರ ಕಹಳೆ ಗೆ ತಿಳೆಧರೆ ಸಾಕು.

Email 33
ನಿಮ್ಮ ಮಾತುಗಳಲ್ಲಿ ನಿಜವಾಗಿಯೂ ಸತ್ಯ ಇದೆ ಅಂತ ಅನ್ನಿಸುತ್ತಿದೆ ನಾವು ಕನ್ನಡ ಉಪಯೋಗಿಸುವುದನ್ನು ಕಲಿಯಬೇಕು. ಆದರೆ ಬೇರೆಯಾರಾದರೂ ಉಪಯೋಗಿಸಲಿಲ್ಲವೆಂದರೆ ಅವರನ್ನು ಪ್ರಶ್ನಿಸುವುದು ಏಕೆ nobody can force it. It has come from 'within'.As long as one is working for kannada we should be accomodating.
 
Regards
Ganesh

Email 34
ಗಣೇಶ್ ಅವರೆ,

ನನ್ನ ಮೊಟ್ಟಮೊದಲನೆಯ ಪತ್ರ ನೋಡಿರಿ ಎಂದು ವಿನಂತಿಸುತ್ತಿದ್ದೇನೆ. ಕಂಗ್ಲಿಷ್ ಬಿಟ್ಟು ಕನ್ನಡದಲ್ಲಿ ಬರೆಯಿರಿ ಅಂತ ನಾನು ಏತಕ್ಕೆ ಇತರರನ್ನು ಒತ್ತಾಯಿಸುತ್ತಿದ್ದೇನೆ ಎಂಬುದು ನಿಮಗೆ ಅರ್ಥವಾಗುತ್ತದೆ. ಕಹಳೆ ನನಗೆ ಪ್ರಿಯವಾದ ಗುಂಪಾಗಿದ್ದರೂ ಕೂಡ ಕಂಗ್ಲಿಷ್ ಹಾವಳಿಯಿಂದಾಗಿ ನಾನು ಇದರಲ್ಲಿನ ಪತ್ರಗಳನ್ನು ಓದುವುದೇ ನಿಲ್ಲಿಸುವಂತಾಗಿತ್ತು.

ದಿನಾ ಕಛೇರಿಯಲ್ಲಿ ಹೇಗಿದ್ದರೂ ಇಂಗ್ಲಿಷ್ ಆಯ್ತಲ್ಲಾ, ಒಂದಷ್ಟು ಒಳ್ಳೆಯ ಚರ್ಚೆಗಳನ್ನು, ಮತ್ತಿತರ ಪತ್ರಗಳನ್ನು ಸವಿ ಕನ್ನಡದಲ್ಲಿ ಓದುವಾ ಅಂತ ನೋಡಿದರೆ ಕಹಳೆ ತುಂಬಾ ಕಂಗ್ಲಿಷ್ ಪತ್ರಗಳು, ಸಾಕಾಗಿ ಹೋಯ್ತು. ಸುಮಾರು ಸಲ ’ಹೇಳುವುದು ಆಚಾರ, ತಿನ್ನುವುದು ಬದನೆಕಾಯಿ’ ಅಂತಾರಲ್ಲಾ, ಹಾಗೆ ಕಾಣುತ್ತದೆ ನಮ್ಮೀ ಗುಂಪಿನ ಸ್ಥಿತಿ. ಹೊರಗಿನವರೆಲ್ಲಾ ಕನ್ನಡ ಕಲಿಯಬೇಕು, ಅಂಗಡಿಗಳೆಲ್ಲಾ ಕನ್ನಡದಲ್ಲಿ ಬೋರ್ಡ್ ಹಾಕಬೇಕು, ಆದರೆ ನಾವು ಮಾತ್ರ ಸರಿಯಾದ ಕಾರಣಗಳಿಲ್ಲದಿದ್ದರೂ ಕೂಡ ಕಂಗ್ಲಿಷ್‍ನಲ್ಲೇ ಬರೆಯಬಹುದು, ಹಾಗೂ ಈ ಪ್ರವೃತ್ತಿಯನ್ನು ಪ್ರಶ್ನಿಸಿದವರನ್ನು ಅವಗಣಿಸಲು ಎಲ್ಲಾ ಪ್ರಯತ್ನಗಳನ್ನೂ ಮಾಡಬಹುದು, ಅಲ್ಲವೇ?

ಇತಿ,
ಕೃಷ್ಣ ಶಾಸ್ತ್ರಿ.

Email 35
ಕಿರಣ್ ಅವರೆ,

ನಿಮ್ಮ ವೈಯಕ್ತಿಕ ವಿಚಾರವನ್ನು ನೀವು ನಿಮ್ಮ ಬಳಿಯೇ ಇಟ್ಟುಕೊಳ್ಳಿ, ಕನ್ನಡ ಗುಂಪಿನಲ್ಲಿ ಪತ್ರ ಬರೆದು ನನಗೆ ಕನ್ನಡದಲ್ಲಿ ಬರೆಯುವ ಬಗ್ಗೆ ಯಾವುದೇ ಆಸಕ್ತಿಯಿಲ್ಲ ಎಂದು ಹೇಳುವುದು ದುರದೃಷ್ಟಕರ, ಮೆಚ್ಚತಕ್ಕ ಮಾತಂತೂ ಖಂಡಿತಾ ಅಲ್ಲ.

ನಿಮಗೆ ಕನ್ನಡ ಭಾಷೆಯ ಬಗ್ಗೆ ಇಷ್ಟು ಕೇವಲವಾದ ಭಾವನೆ ಇರುವುದು ಕೂಡ ಖೇದಕರ. ಮನುಷ್ಯರಿಗೆ ಮಾತ್ರ ಅಲ್ಲ, ಭಾಷೆ, ನೆಲ ಎಲ್ಲಕ್ಕೂ ನಮ್ಮ ಸಂಸ್ಕೃತಿಯಲ್ಲಿ ಜೀವ ಇದೆ, ಅಮ್ಮನ ಸ್ಥಾನ ಇದೆ. ಇರಲಿ ಬಿಡಿ, ಈ ಭಾವನಾತ್ಮಕ ವಿಷಯಗಳನ್ನು ಬದಿಗಿರಿಸೋಣ, ಪ್ರಾಯೋಗಿಕವಾದ ವಿಷಯಕ್ಕೇ ಬರೋಣ. ಕನ್ನಡಿಗರಿಗೆ ಸಹಾಯ ಮಾಡುವುದರ ಬಗ್ಗೆ ಬರೆದಿದ್ದೀರಿ - ಆದರೆ ಕನ್ನಡ ಭಾಷೆಯೇ ಸತ್ತು ಹೋದರೆ, ಮುಂದೆ ಕನ್ನಡಿಗರು ಎಂದು ಕರೆಸಿಕೊಳ್ಳುವವರು ಯಾರಿರುತ್ತಾರೆ, ಸ್ವಲ್ಪ ಹೇಳುತ್ತೀರಾ?

ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಗುಂಪಿನಲ್ಲಿ ಅದೆಷ್ಟೋ ಜನ ವಿವಿಧ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ಕನ್ನಡಿಗರಿಗೆ ಕೂಡ ಸುಮಾರು ಜನ ಸಹಾಯ ಮಾಡುತ್ತಾರೆ, ಈ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಯಾರ್ಯಾರಿಗೆ ಏನೇನು ಸಾಧ್ಯವಾಗುತ್ತದೋ ಅದನ್ನು ಮಾಡುತ್ತಾರೆ. ಇಷ್ಟಕ್ಕೂ ನಾನು ಕನ್ನಡಿಗರಾಗಿ ಏನು ಮಾಡುತ್ತೇನೆ ಎಂದು ನಿಮಗೆ ಮಾಹಿತಿ ಬೇಕಿದ್ದಲ್ಲಿ ಕೇಳಿ - ನಾನು ಕಲಿತದ್ದು ಗಡಿನಾಡ ಕನ್ನಡ ಮಾಧ್ಯಮ ಶಾಲೆಯಲ್ಲಿ, ಕಾಸರಗೋಡಿನಲ್ಲಿ. ಅಲ್ಲಿ ಕಲಿಯುವ ಸುಮಾರು ೪೫ ಬಡ ವಿದ್ಯಾರ್ಥಿಗಳಿಗೆ ನಾನು ಹಣ ನೀಡಿ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದೇನೆ. ಕೆಲವು ಬಡ ಕನ್ನಡಿಗರಿಗೆ ತೀವ್ರ ಅನಾರೋಗ್ಯವನ್ನೆದುರಿಸಲೂ ಹಣ ನೀಡಿ ಸಹಕರಿಸಿದ್ದೇನೆ. ಇನ್ನು ಮುಂದೆಯೂ ಇದೇ ರೀತಿಯಲ್ಲಿ ಸಹಾಯ ಮಾಡುವ ಯೋಜನೆಗಳನ್ನು ರೂಪಿಸುತ್ತಿದ್ದೇನೆ. ಇವೆಲ್ಲಾ ನನ್ನ ವೈಯಕ್ತಿಕ ವಿಚಾರ, ನಿಮ್ಮನ್ನು ಕನ್ನಡ ಬಳಸುವಂತೆ ಕೇಳಿಕೊಳ್ಳುವಾಗ ನಾನು ಇದನ್ನೆಲ್ಲಾ ಹೇಳಿಕೊಳ್ಳಬೇಕಾಗಿಲ್ಲ. ಆದರೂ ಮೇಲ್ಮಟ್ಟಕ್ಕೆ ಒಮ್ಮೆ ಹಾಗೂ ಕೊನೆಯ ಬಾರಿಗೆ ಹೇಳುತ್ತಿದ್ದೇನೆ, ಇಲ್ಲದಿದ್ದರೆ ಸುಮಾರು ಜನರಿಗೆ ಸಮಾಧಾನವಾಗುವುದಿಲ್ಲ ಎಂದು ತೋರಿಬರುತ್ತದೆ.

ಒಬ್ಬರು ನಿಮ್ಮನ್ನು ಕನ್ನಡವನ್ನು ಬಳಕೆ ಮಾಡಲು ಒತ್ತಾಯಿಸುವಾಗ ಅದನ್ನು ವಿರೋಧಿಸಿ ’ನೀವು ಕನ್ನಡಕ್ಕೆ ಏನು ಮಾಡಿದ್ದೀರಿ’ ಎಂದು ಮುಂತಾಗಿ ಪ್ರಶ್ನಿಸುವುದನ್ನು ಬಿಟ್ಟು ವಿನಯಪೂರ್ವಕವಾಗಿ ನಿಮ್ಮ ಅವಜ್ಞೆಯನ್ನು ಒಪ್ಪಿಕೊಂಡು ಕನ್ನಡದಲ್ಲಿ ಬರೆಯುವುದರ ಬಗ್ಗೆ ಗಮನಹರಿಸುವುದು ಒಳ್ಳೆಯದು.

ಇತಿ,
ಕೃಷ್ಣ ಶಾಸ್ತ್ರಿ.

3 comments:

Anonymous said...

Dear all,
i feel language is the medium of communication of people. I dont know why so much fuss/emotional attachment for the same.The language of 'sussessfull people' of a time will flourish. Like sankrit/greek of bygone era.Later Urdu for some time. At that time those were the languages of people who had power/sussess. Recently it is english since last 2 centuries. I dont know how long this time will last. The products of sussessfull pleople will flourish.Let it be language/dress code/etiqqute/food habits etc. My view is the language etc are of the people and for the people and not people are for language. Even if we dont like it,it is the reality. Changes are common in line with time. Just like the old kannada payed the way for madhya kannada/ (or it happeded by itself!), the madhaya kannada changes to new/nava kannada. Probably or unfortunatly the nava kannada may become kanglish due to the effect of powerfull english/technology/the way people earn livehood(from agri based to sevice sector)etc. No support/regret ,but we need to understand why it happens so that we can have more wisdom to accept the cahnge/become change agent!.

ಕೃಷ್ಣ ಶಾಸ್ತ್ರಿ - Krishna Shastry said...

ಪ್ರತಿಕ್ರಿಯೆಗೆ ಧನ್ಯವಾದಗಳು.

ಈ ವಿಷಯದಲ್ಲಿ ನಾನು ಒಬ್ಬಂಟಿಗ ಅಲ್ಲ, ನಾನು ಕೆಲವಾರು ಕಡೆ ಕನ್ನಡಿಗರ ಅಭಿಮತವನ್ನು ಕೇಳಿ ತಿಳಿದಿದ್ದೇನೆ - ಓದುವ ಮಟ್ಟಿಗೆ ಬಂದಾಗ ಜನರಿಗೆ ಕನ್ನಡವೇ ಹೆಚ್ಚು ಹಿತವಾಗುತ್ತದೆ, ಆದರೆ ಬರೆಯುವ ಮಟ್ಟಿಗೆ ಬಂದಾಗ ಮಾತ್ರ ತಂತ್ರಾಂಶಗಳನ್ನು ಕಲಿಯಲು ಉದಾಸೀನ ಮಾಡಿ ಅನೇಕರು ಕಂಗ್ಲಿಷ್ ಬಳಸುತ್ತಾರೆ. ನಮಗೆ ಹಿತವಾದದ್ದನ್ನು ಉಳಿಸಿಕೊಳ್ಳುವ ಪ್ರಯತ್ನ ಅವಹೇಳನಕಾರಿ ಹೇಗಾಗುತ್ತದೆ? ಇದು ಅತ್ಯಂತ ಸಹಜವಾದ ಪ್ರಕ್ರಿಯೆ. ಭಾವನಾತ್ಮಕ ಸಂಬಂಧ ಇದ್ದರೆ ತಪ್ಪೇನು? ಇದು ಸಹಜವಲ್ಲವೇ?

ಕಾಲ ಉರುಳಿದಂತೆ ಭಾಷೆ ಹೊಸ ರೂಪ ಪಡೆಯುವುದು ಸಹಜ ಪ್ರಕ್ರಿಯೆಯೇ ಹೌದು, ಇಲ್ಲವೆನ್ನುವುದಿಲ್ಲ. ಆದರೆ, ಕೆಲವು ರೀತಿಯ ಬದಲಾವಣೆಗಳು ಹಿತಕರವಲ್ಲ ಅಥವಾ ಆರೋಗ್ಯಕರವಲ್ಲ ಎಂದು ಭಾಸವಾದರೆ ಅಂತಹ ಬದಲಾವಣೆಯ ವಿರುದ್ಧ ಹೋರಾಡುವುದೂ ಕೂಡ ಬದಲಾವಣೆಯಷ್ಟೇ ಸ್ವಾಭಾವಿಕವಾದ ಪ್ರಕ್ರಿಯೆ. (ಸಂಪ್ರದಾಯಸ್ಥರು ಬದಲಾವಣೆಯ ವಿರುದ್ಧ ಇನ್ನಿತರ ಕಾರಣಗಳಿಗಾಗಿಯೂ ಹೊರಾಡುತ್ತಾರೆ, ಅದು ಬೇರೆ ವಿಷಯ.)

ಮಾತ್ರವಲ್ಲ, ಇಂಥವರು ತಮ್ಮನ್ನು ಕನ್ನಡಪರ ಹೋರಾಡುವವರು ಎಂದು ಹೇಳಿಕೊಂಡು ಭಾಷೆಯ ಒಂದು ಅತ್ಯಂತ ಸುಂದರವಾದ ಹಾಗೂ ನಮಗೆಲ್ಲಾ ಪ್ರಿಯವಾದ ಅಂಶವಾದ ಲಿಪಿಯನ್ನು ಅವಗಣನೆ ಮಾಡುವುದು ಭಾಷಾಪ್ರಿಯರಿಗೆ ಕಿರಿಕಿರಿ ಉಂಟುಮಾಡುವ ವಿಷಯ. ಕನ್ನಡ ಉಳಿಸುವ ನಿಟ್ಟಿನಿನಲ್ಲಿ ಹೊರರಾಜ್ಯದವರ ಮೇಲೆ ಹರಿಹಾಯುವುದರಲ್ಲಿ ಎತ್ತಿದ ಕೈ ಇವರದ್ದು! ಹೌದು, ಇವರು ಬರೀ ಭಾಷೆಗೋಸ್ಕರ ಹೋರಾಡುವವರಲ್ಲ, ಜನರಿಗೋಸ್ಕರ ಕೂಡ. ಆದ್ದರಿಂದ ಇನ್ನೂ ಕೂಡ ನನ್ನ ಗೌರವವನ್ನು ಉಳಿಸಿಕೊಂಡಿದ್ದಾರೆ. ಆದರೆ ನನ್ನ ಟೀಕೆ ನಿಲ್ಲಲಾರದು.

ಸಮಸ್ಯೆಯ ಮೂಲ: ಈ ಒಟ್ಟಾರೆ ಸಮಸ್ಯೆಗೆ ಮೂಲ ಹಲವಾರು ಇದೆ. ಸಾಕಷ್ಟು ಕೋಳಿ-ಮೊಟ್ಟೆ ಸಿದ್ಧಾಂತಗಳನ್ನೂ ಚರ್ಚಿಸಲಾಗಿದೆ. ಉಳಿಸಬೇಕೆಂದು ಪ್ರಯತ್ನ ಮಾಡುವವರೆಲ್ಲರೂ ಬರೀ ಮೂಲವನ್ನಷ್ಟೇ ಕೆದಕುತ್ತಾ ಕೂತರೆ ಸಾಲದು, ಸದ್ಯಕ್ಕೆ ಮುಂದಿರುವ ಬೆಂಕಿಯನ್ನು ಕೂಡ ನಂದಿಸಲು ಪ್ರಯತ್ನಿಸಬೇಕು, ಇಲ್ಲದಿದ್ದರೆ ಕೊನೆಗೆ ಮೂಲವನ್ನು ಕೆದಕುವುದು ಬರೀ ಒಂದು ಚರಿತ್ರೆಯನ್ನು ಅಧ್ಯಯನ ಮಾಡುವ ನೀರಸ ಕಾರ್ಯವಾಗುತ್ತದೆ, ಅಷ್ಟೆ.

ಕಂಗ್ಲಿಷ್ ಬಳಕೆ ತಡೆಯಾಲರದ ಪ್ರವಾಹ ಎಂದೂ, ಶುದ್ಧ ಕನ್ನಡ ಲಿಪಿಯ ಬಳಕೆಯನ್ನು ಎತ್ತಿ ಹಿಡಿಯುವುದು ನಿರರ್ಥಕ ಎಂದೂ ನಿಮಗೆ ಕಂಡರೆ ಅದು ನಿಮ್ಮ ಅಭಿಪ್ರಾಯ, ನಾನು ಇಷ್ಟಪಟ್ಟದ್ದನ್ನು ಉಳಿಸಿಕೊಳ್ಳುವಲ್ಲಿ ನಾನು ಮಾಡುತ್ತಿರುವ ಸಣ್ಣ ಪ್ರಯತ್ನದ ಬಗ್ಗೆ ನನಗೆ ಆತ್ಮತೃಪ್ತಿ ಇದೆ ಎಂದಷ್ಟೇ ಹೇಳಬಲ್ಲೆ. ಎಲ್ಲಾ ಹೋರಾಟಗಳಲ್ಲಿರುವ ಒಂದು ಕಟು ಸತ್ಯ ಎಂದರೆ: ಯಾರೋ ಹೋರಾಡುತ್ತಾರೆ - ಇನ್ಯಾರೋ ಅಂತಹ ಹೋರಾಟಗಳ ಫಲವನ್ನು ನಿಶ್ಶುಲ್ಕವಾಗಿ ಭೋಗಿಸುತ್ತಾರೆ, ಇದೂ ಕೂಡ ಸಹಜ ಪ್ರಕ್ರಿಯೆಯೇ :-) ಈಗ ನೋಡಿ - ಕಂಗ್ಲಿಷ್ ಸಾಲದು, ಕನ್ನಡದಲ್ಲಿಯೇ ಬರೆಯಲು ಸಾಧ್ಯವಾಗಬೇಕು ಎಂದು ಅನೇಕರು ಬಯಸಿದ್ದರಿಂದಲೇ ಅಲ್ಲವೇ ಅನೇಕ ತಂತ್ರಾಂಶಗಳು ಬಂದಿರುವುದು? ಎಲ್ಲರೂ ಕಂಗ್ಲಿಷ್ ಬಿಟ್ಟರೆ ಬೇರೆ ಗತಿ ಇಲ್ಲ, ಈ ಬದಲಾವಣೆಗೆ ಒಗ್ಗಿ ಬಿಡೋಣ ಎಂದಿದ್ದರೆ ಇವೆಲ್ಲಾ ಅಗುತ್ತಲೇ ಇರಲಿಲ್ಲ. (ನಾನು ಕೂಡ ಅನೇಕಾನೇಕ ವಿಷಯಗಳಲ್ಲಿ ಫಲವನ್ನು ಭೋಗಿಸುವವರ ಸಾಲಿಗೆ ಸೇರಿದವನು ಎಂದರೆ ಅತಿಶಯೋಕ್ತಿ ಇಲ್ಲ!)

Nanda Kishor B said...

ಕೃಷ್ಣ ಶಾಶಿಯವರ ಮಾತಿಗೆ ನನ್ನ ಸಹಮತಿಯಿದೆ...
English - ಕನ್ನಡ ಎರಡೂ ಬೇಕು.. ಆದರೆ ಒಮ್ಮೆಗೆ ಒಂದೊಂದೇ...
ನನ್ನದಕ್ಕೂ ಬನ್ನಿ..
manglurmani.blogspot.com

Post a Comment