About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Tuesday, May 18, 2010

ತಣ್ಣೀರೋ? ಬಿಸಿ ನೀರೊ? ಒಟ್ಟಿನಲ್ಲಿ ಅಮೃತ ವಿಷವಾಗದಿರಲಿ - Drinking Water in ceremonies, provide it clean

ನಮಸ್ತೆ,

ಕೆಲವೊಮ್ಮೆ ಸಣ್ಣ ವಿಷಯಗಳಲ್ಲಿ ಜಾಗರೂಕತೆ ವಹಿಸಿದರೆ ದೊಡ್ಡ ಅನಾಹುತಗಳನ್ನು ತಪ್ಪಿಸಬಹುದು, ಅಲ್ಲವೇ? A stitch in time saves nine ಅಂತಾರಲ್ಲಾ, ಹಾಗೆ. ಮಾತ್ರವಲ್ಲ, ವಿದ್ಯಾವಂತರೆನಿಸಿಕೊಂಡ ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿಯೂ ಇದೆ. ನಮ್ಮ ದೈನಂದಿನ ಜೀವನದಲ್ಲಿರುವ ಅನೇಕ ಕುಂದುಕೊರತೆಗಳನ್ನು ಗಮನಿಸಿ, ಅವುಗಳನ್ನು ಮುಚ್ಚಿಹಾಕುವಲ್ಲಿ ಸಣ್ಣ ಸಣ್ಣ ಕ್ರಾಂತಿಗಳನ್ನು ಹುಟ್ಟುಹಾಕುತ್ತಾ ಮುನ್ನಡೆದರೆ ಎಷ್ಟು ಚೆನ್ನ, ಅಲ್ಲವೇ? ಕ್ರಾಂತಿಯಲ್ಲಿ ಎರಡು ವಿಧ - ಕೆಲವೊಮ್ಮೆ ಕಠಿಣ ವಿರೋಧಿಗಳ ಮಧ್ಯೆ ಸೆಣೆಸಾಡಿಕೊಂಡು ಸಾಹಸಮಯವಾಗಿ ಮುಂದುವರಿಯಬೇಕಾಗುತ್ತದೆ, ಇನ್ನು ಕೆಲವೊಮ್ಮೆ ಬೇಕಾದ ಒಂದೇ ಆಯುಧ ಎಂದರೆ ಸಾಧಿಸುವ ಛಲ, ಇತರರಿಗೆ ತಾಳ್ಮೆಯಿಂದ ತಿಳಿಹೇಳಿ ನಮ್ಮೊಡನೆ ಕೈಗೂಡಿಸುವಂತೆ ಪ್ರೇರೇಪಿಸುವ ಮನಸ್ಸು. ಇಲ್ಲಿ ನಾನು ಬರೆಯುತ್ತಿರುವುದು ಎರಡನೇ ವಿಭಾಗಕ್ಕೆ ಸೇರಿದ ಒಂದು ಸಣ್ಣ ಕ್ರಾಂತಿಯ ಬಗ್ಗೆ, ನೀವು ನನ್ನೊಂದಿಗೆ ಕೈ ಜೋಡಿಸುವಿರಿ ಎಂಬ ನಂಬಿಕೆಯೊಂದಿಗೆ.

ಎಲ್ಲ ಕಡೆ ನಡೆಸುವಂತೆ ನಮ್ಮ ಕಡೆ ಕೂಡ ಅನೇಕ ಶುಭ ಕಾರ್ಯಗಳನ್ನು ಸಾಕಷ್ಟು ವಿಜೃಂಭಣೆಯಿಂದ ನಡೆಸುತ್ತಾರೆ, ಅನೇಕರಿಗೆ ಆಮಂತ್ರಣವೂ ಹೋಗುತ್ತದೆ, ಹತ್ತಾರು/ನೂರಾರು/ಸಾವಿರಾರು ಮಂದಿ ಬಂದು ಊಟ ಮಾಡಿ ಹೋಗುತ್ತಾರೆ. ಈ ಊಟದ ವ್ಯವಸ್ಥೆಯಲ್ಲಿ ನನಗೆ ಇತ್ತೀಚೆಗೆ ಕಂಡುಬಂದಂತಹ ವಿಷಯವೊಂದನ್ನು ಇಲ್ಲಿ ನಿಮ್ಮ ಮುಂದಿಡಬಯಸಿದ್ದೇನೆ. ನಮ್ಮ ಕಡೆ ತಣ್ಣೀರು, ಬಿಸಿ ನೀರು ಎರಡನ್ನೂ ಕೇಳಿಕೊಂಡು ಬರುವುದು ವಾಡಿಕೆ. ಮೊದಲಿಗೆ ಬಾಳೆ ಎಲೆಯನ್ನು ತೊಳೆಯಲು ತಣ್ಣೀರನ್ನೇ ಲೋಟದಲ್ಲಿ ತುಂಬಿಸಿ ಹೋಗುತ್ತಾರೆ. ಆಮೇಲೆ ಊಟ ಶುರುವಾದ ಮೇಲೆ ಮಧ್ಯದಲ್ಲಿ ಪುನಃ ನೀರು ಬೇಕೇ ಎಂದು ವಿಚಾರಿಸುವಾಗ ಎರಡೂ ಆಯ್ಕೆಗಳಿರುತ್ತವೆ. ಇಲ್ಲಿ ನಾವು ತಣ್ಣೀರಿನ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡಬೇಕು ಎಂಬುದು ನನ್ನ ಖಚಿತವಾದ ಅಭಿಪ್ರಾಯ. ಇದರ ಬಗ್ಗೆ ಇನ್ನೂ ಒಂದಷ್ಟು ಆಲೋಚಿಸೋಣವಂತೆ.

ಕೆಲವರು ಯಾಕೆ ತಣ್ಣೀರನ್ನೇ ಬಯಸುತ್ತಾರೆ?
"ತಣ್ಣೀರೇ ರುಚಿ" - ಇದು ನಾನು ಅನೇಕರಿಂದ ಕೇಳಿ ತಿಳಿದ ಆಲೋಚನಾ ಧಾಟಿ. ಅವರಿಗೆ ಸಾಂಪ್ರದಾಯಿಕವಾಗಿ ಮನೆಯಲ್ಲಿ ನೀರನ್ನು ಕುದಿಸಿ ಕುಡಿಯುವ ಅಭ್ಯಾಸ ಇಲ್ಲ, ಕೆಲವರು ಹಳ್ಳಿಯಲ್ಲಿ ಶುದ್ಧ ನೀರಿರುವೆಡೆ ಸ್ಥಿರವಾಸ ಮಾಡುವುದರಿಂದ ಈ ಅಭ್ಯಾಸದಿಂದ ಏನೂ ತೊಂದರೆ ಬರುವುದಿಲ್ಲ, ಇನ್ನು ಕೆಲವರು ಮೊಂಡುವಾದಿಗಳು, ಶುಚಿತ್ವದ ಬಗ್ಗೆ ಕಾಳಜಿ ಇಲ್ಲದವರು, ಹಿರಿಯರ ಕಾಲದಿಂದ ಬಂದ ಸಂಪ್ರದಾಯವನ್ನು ತರ್ಕವಿಲ್ಲದೆ ಮುಂದುವರಿಸುವವರು.

ಈ ಮೇಲೆ ಹೇಳಿದ ವರ್ಗದ ಜನಕ್ಕೆ ಕುದಿಸಿದ ನೀರು ಸುತರಾಂ ರುಚಿಸದು, ತಣಿಸಿದರೂ ಕೂಡ. ಆದರೆ ಈಗಿನ ಕಾಲದಲ್ಲಿ ಇದಕ್ಕೆ ಒಂದು ಪರಿಹಾರ ಇದೆ, ಹೊಸ ರೀತಿಯ ನೀರಿನ ಶುದ್ಧೀಕರಣ ಯಂತ್ರಗಳಿವೆಯಲ್ಲಾ, ಅದನ್ನಾದರೂ ಉಪಯೋಗಿಸಬಹುದಲ್ಲಾ ಎಂದು ನನ್ನ ಪ್ರಶ್ನೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಅದ್ದೂರಿಯ ಛತ್ರಗಳಲ್ಲಿ ‘ಮಿನರಲ್ ವಾಟರ್’ ಅಂತ ನೀಟಾಗಿ ಇಡುತ್ತಾರೆ, ಅಷ್ಟೆಲ್ಲಾ ಮಾಡಲು ಸಾಧ್ಯವಾಗದಿದ್ದರೆ ಏನಂತೆ, ಕಾರ್ಯಕ್ರಮದ ಹಿಂದಿನ ದಿನ ಶುಚಿಯಾದ ದೊಡ್ಡ ಪಾತ್ರೆಗಳಲ್ಲಿ ಆಕ್ವಾಗಾರ್ಡ್ ಅಥವಾ ಅಂತಹ ಯಂತ್ರಗಳನ್ನುಪಯೋಗಿಸಿ ನೀರನ್ನು ಸೋಸಿ ಹಿಡಿದಿಟ್ಟುಕೊಂಡರೆ ಸಾಕು, ಕಾರ್ಯಕ್ರಮದಲ್ಲಿ ಶುಚಿಯಾದ ನೀರನ್ನೇ ಬಳಸಬಹುದಲ್ಲವೇ? ರುಚಿಯೂ ಹಾಳಾಗುವುದಿಲ್ಲ.

ಸಮಾರಂಭದಲ್ಲಿ ನೀಡುವ ಬಿಸಿ ನೀರಿನಲ್ಲಿರುವ ಗುಣಾವಗುಣಗಳೇನು?
ಕೆಲವು ಕಡೆ ಅದನ್ನು ಸರಿಯಾಗಿ ತಣಿಸದೆಯೇ ಕೊಡುತ್ತಾರೆ, ಇದರಿಂದ ಕುಡಿಯುವುದು ಕಷ್ಟಕರವಾಗುತ್ತದೆ. ಇನ್ನು ಕೆಲವೆಡೆ ಗಡಿಬಿಡಿಯಲ್ಲಿಯೋ ಅಥವಾ ಇಂಧನ ಉಳಿಸಲೋ ಬರೀ ಬಿಸಿ ಮಾಡುತ್ತಾರೆ, ಕುದಿಸುವುದಿಲ್ಲ ಎಂದು ಸುಮಾರು ಜನ ಗುಮಾನಿ ಪಡುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಇನ್ನೂ ಕೆಲವೆಡೆ ನೀರನ್ನೇನೋ ಕುದಿಸುತ್ತಾರೆ, ಆದರೆ ಕೊನೆಯ ಘಳಿಗೆಯಲ್ಲಿ ನೀರು ಕುಡಿಯಲಾಗದಷ್ಟು ಬಿಸಿ ಇದೆ ಎಂದು ತಣ್ಣೀರನ್ನು ಮಿಶ್ರ ಮಾಡಿ ಮೂಲ ಉದ್ದೇಶವನ್ನೇ ಹಾಸ್ಯಾಸ್ಪದವಾಗಿ ಮೂಲೆಗುಂಪು ಮಾಡಲಾಗುತ್ತದೆ. ಆದರೆ ಇದನ್ನು ಸರಿಯಾಗಿ ಮಾಡಿ ವಿತರಿಸಿದರೆ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು, ಎರಡು ಮಾತಿಲ್ಲ.

ನೀರು ಮತ್ತು ಆರೋಗ್ಯ
ಕಾಲೆರಾ, ಭೇದಿ, ಶೀತ-ಜ್ವರ, ಟೈಫ಼ೋಯ್ಡ್ ಇನ್ನಿತರ ಹಲವು ವ್ಯಾಧಿಗಳು ಹರಡುವ ಮಾಧ್ಯಮ ನೀರು. ಇತರ ಋತುಗಳಿಗೆ ಹೋಲಿಸಿದರೆ ಬೇಸಿಗೆಯಲ್ಲಿ ಇವು ಹೆಚ್ಚಾಗಿ ಹರಡುತ್ತವೆ (ಇದಕ್ಕೆ ನೀರಿನ ಅಭಾವವೂ ಕಾರಣವಾಗಿರುತ್ತದೆ). ಅಂತೆಯೇ ಬೇಸಿಗೆಯಲ್ಲಿ ಶುಭ ಸಮಾರಂಭಗಳ ಸಂಖ್ಯೆಯೂ ಹೆಚ್ಚಾಗಿರುತ್ತದೆ ಎಂಬುದನ್ನು ಗಮನಿಸಿರಿ. ಇದರಿಂದಾಗಿ ಇಂತಹ ಸಮಾರಂಭಗಳನ್ನು ಅಚ್ಚುಕಟ್ಟಾಗಿ ಶುಚಿಯಾಗಿ ನಡೆಸುವುದು ಬಹಳ ಮುಖ್ಯ.

ಸಂಕ್ಷಿಪ್ತವಾಗಿ ಹೇಳುವುದಾದರೆ ಕುಡಿಯುವ ನೀರಿನ ವಿಷಯದಲ್ಲಿ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಮಾರಂಭಗಳನ್ನು ನಡೆಸಿ ಆರೋಗ್ಯಕರ ಸಮಾಜದ ದಿಕ್ಕಿನಲ್ಲಿ ಒಂದು ಬಲವಾದ ಹೆಜ್ಜೆ ಇಡಿ ಎಂದು ನಿಮ್ಮಲ್ಲಿ ನನ್ನ ಅರಿಕೆ:
೧. ತಣ್ಣೀರನ್ನು ಕುಡಿಯಲೆಂದು ಸುತರಾಂ ಕೊಡಬೇಡಿ, ಬಾಳೆ ಎಲೆ ತೊಳೆಯಲು ಕೂಡ
೨. ತಣ್ಣೀರನ್ನು ಕೊಡಬೇಕು ಎಂದಿದ್ದ ಪಕ್ಷದಲ್ಲಿ ಆಕ್ವಾಗಾರ್ಡ್ ಅಥವಾ ಇನ್ಯಾವುದಾದರೂ ಆಧುನಿಕ ಯಂತ್ರದಲ್ಲಿ ಸೋಸಿಯೇ ಕೊಡಿ
೩. ಬಿಸಿ ನೀರನ್ನು ಕೊಡುವುದಾದರೆ ಅದನ್ನು ಸರಿಯಾಗಿ ಕುದಿಸಿದೆಯೇ ಎಂಬುದನ್ನು ಪರಿಶೀಲಿಸಿ
೪. ಬಿಸಿ ನೀರನ್ನು ಕೊಡುವುದಿದ್ದ ಪಕ್ಷದಲ್ಲಿ ಮುಂಚಿತವಾಗಿಯೇ ಕುದಿಸಿ ತಣಿಸಿ ಇಡಿ
೫. ಊಟದ ವ್ಯವಸ್ಥೆಯನ್ನು ಗುತ್ತಿಗೆ ನೀಡುವುದಾದರೆ ಮೇಲಿನ ಅಂಶಗಳನ್ನು ಅವರು ಕೂಡ ಗಮನದಲ್ಲಿಟ್ಟುಕೊಂಡು ಎಲ್ಲರಿಗೂ ಶುಚಿಯಾದ ನೀರು ಸಿಗುವಂತೆ ನೋಡಿಕೊಳ್ಳಿ

ಸಮಾರಂಭದ ಊಟದ ವಿಷಯದಲ್ಲಿ ಇನ್ನೂ ಇತರ ಸುಧಾರಣೆಯ ಅಂಶಗಳಿರಬಹುದು, ಇಲ್ಲಿ ನಾನು ಕುಡಿಯುವ ನೀರಿನ ಬಗ್ಗೆ ಮಾತ್ರ ಗಮನವಿಟ್ಟು ಬರೆದಿದ್ದೇನೆ. ಈ ಸಣ್ಣ ಕ್ರಾಂತಿಯ ಮೂಲ ತತ್ವದಲ್ಲಿ ನಿಮ್ಮ ಸಹಮತವಿದೆ ಹಾಗೂ ನೀವು ಕೂಡ ಸಾಧ್ಯವಾದಲ್ಲಿ ಇತರರನ್ನು ಜಾಗೃತಗೊಳಿಸುತ್ತೀರಿ ಎಂದು ನಂಬಿದ್ದೇನೆ.

ಇತಿ,
ಕೃಷ್ಣ ಶಾಸ್ತ್ರಿ

Hi,

We all know the proverb, a stitch in time saves nine. However, sometimes we forget it on several occasions. As educated people, we have greater responsibility on our shoulders. It would be nice if we keep observing loopholes in everyday activities and help in overcoming them. I would say we can consider it as small revolutions. There are two kinds of revolutions - one where we need to fight against several odds bravely and the other where all we need is the will to make a difference and motivate others to join hands and spread awareness. Here I am talking about smaller kind of revolution, hoping you would join hands with me.

Like many communities in India, our community too has lots of "functions" or in other words religious and non religious ceremonies, get togethers. Lot of people are invited and tens, hundreds, sometimes thousands of people come to whom food is served. I would like to bring up a specific point here. It is common that both 'tanneeru' i.e. 'raw/cool water' is served as well as 'bisi neeru' i.e. 'boiled/hot water'. I believe we should completely stop serving the raw water for drinking purpose. Let me explain this further.

Why some people like 'taneeru'?
"It tastes better" - this is what I hear most of the times. Some of these people come from rural areas where they have clean water and no issues drinking water in raw format, some others are blind followers of old tradition without rational thoughts, disregarding healthy practices.

The above said people hate drinking boiled water, even if its cooled off. But there is a simple solution. These days we have newer water purifying products like 'Aqua Guard' and many more. In mega cities like Bengaluru I have seen usage of 'mineral water' for drinking purposes in expensive places. We need not go to that extent, we can simply use these water purifiers and store good amount of water well in advance. This way the 'taste' of water is also not lost.

Pros/Cons in 'bisi neeru' that is served
To start with least of the problems, boiled water is sometimes served without properly letting it to cool to room temperature. These days people increasingly doubt that water is not actually boiled, but just warmed. In some other weird cases, water is properly boiled but seeing there is no time left for it to cool, they mix raw water, thus defeating the purpose. In any case, if properly done boiled water is proven to be good, no doubt.

Water and health
There are several waterborne diseases namely Cholera, diarrhea, common cold, fever, typhoid and many more. Please note that these spread more during summer and also please note that in summer we observe most of the 'functions' due to auspicious times available. Hence, it is extremely important that we pay attention to conduct these in a healthy fashion.

To summarize, please take care of following while conducting functions and go towards a healthier society:
1. Don't serve raw water, even to wash banana leaves (because then people start drinking it until cleaner water is served)
2. If you want to serve non-boiled water, make sure that you serve properly purified water
3. In case you are serving boiled water, please ensure that it is properly boiled
4. Also, make sure that boiled water is properly cooled off too, before serving
5. Lastly, if you are giving entire food catering to some service provider on a contract basis, please make it a point to talk to them about these aspects and ensure that you provide clean water to everyone present

There might be few other points with respect to food served, where we might see room for improvement. However, I am just concentrating on the drinking water here. I hope you too agree with the thoughts behind this small revolution and would spread the awareness wherever possible.

Regards,
Krishna.

4 comments:

Narayana Rao Sharma said...

Krisna Shastrigale, Nimma blog odide. Thumba informative aagitthu. Vandanegalu. Innoo heege bareyutthale iri. Kshamisi, Nanage Kannada typing borodilla.Haagagi Englishnalli type madiddene.

Anonymous said...

ಮಾಡರ್ನ್ ಆಗುವ ಅರ್ಜನ್ಸಿಯಲ್ಲಿ ಪ್ಯೂರ್ ಕನ್ನಡ ಸಿಕ್ಕುವುದು ಕಷ್ಟವಾಗಿದೆ! ಒಂದು ರೀತಿಯಲ್ಲಿ ನಮ್ಮ ಭಾಷೆಯೂ ನಮ್ಮ ಕುಡಿನೀರಿನ ಹಾಗೇ ಆಗಿದೆ. ಶುದ್ಧ ಹಸಿನೀರು ಅಥವಾ ಕನ್ನಡ ಉತ್ತಮವಾದರೂ ಎಲ್ಲೂ ಕುದಿಸದೇ ಕುಡಿಯದಿರುವ, ವೈಚಾರಿಕವಾಗಿ ಎಚ್ಚರವಹಿಸಿ ನುಡಿಯದಿರುವ ಸ್ಥಿತಿ ಬಂದಿದೆ. ನನ್ನ ಮೈಸೂರು ತಮ್ಮ (ಅನಂತವರ್ಧನ) ತಮಾಷೆಗೆಂದೇ ಆದರೂ ಮನೆಯಲ್ಲಿ ಹೆಂಡತಿ ಮಗಳೊಡನೆ ‘ತಾಳಮದ್ದಳೆ’ ಕನ್ನಡ ಮಾತಾಡುವುದು ಕೇಳಿದ್ದೇನೆ. ಇನ್ನೊಬ್ಬ ಅಮೆರಿಕಾ ಪ್ರಜೆಯಾದ ತಮ್ಮನಂತೂ (ಆನಂದವರ್ಧನ)ನಮಗೆ ಮನೆಮಾತು ಶುದ್ಧ ಕನ್ನಡವೇ ಆದದ್ದಕ್ಕೆ ಮಗಳಂದಿರಿಬ್ಬರಿಗೂ ಮನೆಯಲ್ಲಿ, ಸಂಬಂಧಿಕರಲ್ಲಿ ಅಮೆರಿಕನ್ ಗಂಧಗಾಳಿ ಸುಳಿಯದ ಕನ್ನಡ ಅಥವಾ (ಹೆಂಡತಿ ಜಯಶ್ರೀಯ ಮನೆಮಾತು) ಹವ್ಯಕದಲ್ಲಿ ಮಾತಾಡುವುದನ್ನು ರೂಢಿಸಿದ್ದಾನೆ. ನಾವು ಶುದ್ಧ ಪರಿಸರದ ಕಾಡು, ಬೆಟ್ಟಕ್ಕೆ ಹೋದಲ್ಲಿ ಮನೆಯಿಂದ ಒಯ್ದ ಬಾಟಲಿ ನೀರು ಬಿಟ್ಟು ತೊರೆಗೇ ಬಾಯಿ ಹಚ್ಚಿ ನೀರು ಕುಡಿಯುವುದಲ್ಲ, ಒಳಹರಿಸುವ ಸಂತೋಷವನ್ನು ಎಂದೂ ನಿರಾಕರಿಸಿದ್ದಿಲ್ಲ!
ಅಶೋಕವರ್ಧನ

Anonymous said...

Great article, I agree!

Vivek Muliya said...

ಚೆನ್ನಾಗಿದೆ ತಮ್ಮ ಬ್ಲಾಗ್. ಅದೇ ರೀತಿ ನಿಮ್ಮ ಬರಹಗಳು. ಜನ ಆಲೋಚನೆ ಮಾಡಬೇಕಾದಂಥ ಬರಹಗಳು.

Post a Comment