About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Sunday, May 16, 2010

ಭಾಷಾ ಪ್ರೇಮ ಹಾಗೂ ವಾಹನಗಳ ನಂಬರ್ ಪ್ಲೇಟ್ - ಒಂದು ಚಿಂತನೆ | Love for language and Vehicle Number Plates - some thoughts

ನಮಸ್ಕಾರ,

ಭಾಷೆಯನ್ನು ಉಳಿಸಿಕೊಳ್ಳುವುದು ಅತ್ಯಂತ ಮುಖ್ಯವಾದ ವಿಷಯಗಳಲ್ಲಿ ಒಂದು ಎಂಬುದರಲ್ಲಿ ಎರಡು ಮಾತಿಲ್ಲ. ನಾನೂ ಕನ್ನಡ ಭಾಷಾ ಪ್ರೇಮಿ - ಕನ್ನಡ ಭಾಷೆಯ ಶೋಚನೀಯ ಸ್ಥಿತಿ, ಕೆಲವು ಸಂದರ್ಭಗಳಲ್ಲಿ ಕನ್ನಡಿಗರಿಗಾಗುವ ಅನ್ಯಾಯಗಳು ಇತ್ಯಾದಿ ನನ್ನ ಮನವನ್ನು ನೋಯಿಸುತ್ತವೆ, ಹಾಗೂ ಇದರ ವಿರುದ್ದ ಹೋರಾಡಲು ಪ್ರೇರೇಪಿಸುತ್ತವೆ. ಆದರೆ ಈ ನಿಟ್ಟಿನಲ್ಲಿ ನಮ್ಮ ಕೆಲವು ಪ್ರಯತ್ನಗಳು ಅದೆಷ್ಟು ಬಾಲಿಶ ಹಾಗೂ ಕಳವಳಕಾರಿಯಾಗಿರುತ್ತವೆ ಎಂಬುದಕ್ಕೆ ನನಗೆ ಕಾಣುವ ಒಂದು ಉತ್ತಮ ನಿದರ್ಶನ ಪ್ರಾಂತೀಯ ಭಾಷೆಗಳಲ್ಲಿ ವಾಹನದ ನಂಬರ್ ಪ್ಲೇಟ್‍ಗಳನ್ನು ಬರೆಯುವುದು.

- ಅಂತರ್-ರಾಜ್ಯ ಪ್ರಯಾಣದ ವೇಳೆ ವಾಹನದ ಮಾಲಕರು ಏನು ಮಾಡಬೇಕು? ಉದಾ: ನಾವು ಕರ್ನಾಟಕದವರು ಕನ್ನಡದಲ್ಲಿ ಬರೆದ ಪ್ಲೇಟ್ ಹಾಕಿಸಿಕೊಂಡಿದ್ದೇವೆ ಎಂದಿಟ್ಟುಕೊಳ್ಳೋಣ, ಏನೋ ಕೆಲಸ ಬಂತು ಅಂತ ನೆರೆ ರಾಜ್ಯಕ್ಕೆ ಹೋಗಬೇಕಿದ್ದಲ್ಲಿ ಆಗ ತರಾತುರಿಯಲ್ಲಿ ಹೋಗಿ ಇಂಗ್ಲಿಷ್ ಪ್ಲೇಟ್ ಮಾಡಿಸಿಕೊಳ್ಳಬೇಕೇ? ಅಥವಾ ಮೊದಲೇ ಅದನ್ನು ಸಿದ್ಧಪಡಿಸಿ ಇಟ್ಟುಕೊಂಡು ಅಂತಹ ಸಂದರ್ಭದಲ್ಲಿ ಬದಲಿಸಿ ಹೋಗಬೇಕೇ? ಅಥವಾ ಪರರಾಜ್ಯದವರು ಅವರ ಭಾಷೆಯಲ್ಲಿ ಬರೆದ ನಂಬರ್ ಪ್ಲೇಟನ್ನು ಹಾಗೆಯೇ ಇರಿಸಿಕೊಂಡು ನಮ್ಮ ರಾಜ್ಯವನ್ನು ಪ್ರವೇಶಿಸಿದರೆ ಆಗ ಅವರನ್ನು ಹಿಡಿದು ದಂಡ ಹಾಕಬೇಕೇ? ಅವರಿಗೇನೋ ತುರ್ತು ಪರಿಸ್ಥಿತಿ ಇತ್ತು ಎಂದಿಟ್ಟುಕೊಳ್ಳಿ, ಆಗ ಅದನ್ನು ಪರಿಗಣಿಸದೆಯೇ ಅವರು ಮಾಡಿದ್ದು ತಪ್ಪು ಎಂದು ದಂಡ ಹಾಕಬೇಕೇ? ಇಲ್ಲಿ ವಿನಾಯಿತಿ ತೋರಿಸಿದರೆ ಅದರ ದುರುಪಯೋಗ ಪಡೆದು ಎಲ್ಲರೂ ‘ತುರ್ತು’ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಕೊಳ್ಳುತ್ತಾರೆ ಎಂಬುದನ್ನೂ ನೆನಪಿನಲ್ಲಿಟ್ಟುಕೊಳ್ಳಿ.

- ಮೇಲಿನ ಸಮಸ್ಯೆ ನಿಮಗೆ ಅಷ್ಟೇನೂ ಗುರುತರವಾಗಿ ಕಾಣದಿರಬಹುದು, ಇನ್ನೂ ಗಂಭೀರವಾದ ವಿಚಾರಕ್ಕೆ ಬರೋಣವಂತೆ. ಒಂದು ಅಪಘಾತವಾಯಿತೆಂದಿಟ್ಟುಕೊಳ್ಳಿ; ಎಲ್ಲರಿಗೂ ಆ ಪ್ರಾಂತೀಯ ಭಾಷೆಯಲ್ಲಿ ಬರೆದ ನಂಬರ್ ಪ್ಲೇಟನ್ನು ತರಾತುರಿಯಲ್ಲಿ ಓದಲು, ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವೇ? ಆಯಾ ಪ್ರಾಂತ್ಯದಲ್ಲಿ ಕಾಲಿಟ್ಟ ಕೂಡಲೇ ಎಲ್ಲರಿಗೂ ಅಲ್ಲಿಯ ಭಾಷೆ ತಿಳಿದಿರಲೇ ಬೇಕು ಎಂದೆನಿಲ್ಲ, ಹೊರ ರಾಜ್ಯ ಹಾಗೂ ಹೊರ ದೇಶಗಳಿಂದ ಬಂದ ಸಾಕಷ್ಟು ಜನ ಯಾತ್ರಿಗಳೂ ಇರುತ್ತಾರೆ ಎಂಬುದನ್ನು ಮರೆಯಬೇಡಿ, ತೀರಾ ಇತ್ತೀಚೆಗಷ್ಟೆ ಬಂದು ನೆಲೆಸಿದ ಅನ್ಯ ಭಾಷಿಗರೂ ಇರುತ್ತಾರೆ. ಅಥವಾ ಒಂದು ಪ್ರಾಂತ್ಯದವರು ಇನ್ನೊಂದೆಡೆ ಹೋಗಿ ಅಪಘಾತದಲ್ಲಿ ಸಿಕ್ಕಿಕೊಂಡಾಗ ಕೂಡ ಇಂತಹ ಪರಿಸ್ಥಿತಿ ಎದುರಾಗಬಹುದು. ಇಲ್ಲಿ ನಾವು ಮಾತನಾಡುತ್ತಿರುವುದು ಗಂಭೀರವಾದ ಪರಿಸ್ಠಿತಿಯಲ್ಲಿ ಮಾಹಿತಿ ಸಂಗ್ರಹಣೆ ಎಷ್ಟು ಸುಲಭ ಅಥವಾ ಕಷ್ಟಕರವಾಗಿರಬಹುದು ಎಂಬುದರ ಬಗ್ಗೆ.

ಅಂಗಡಿಗಳಲ್ಲಿ ಆಂಗ್ಲ ಭಾಷೆಯೊಂದಿಗೆ ಪ್ರಾಂತೀಯ ಭಾಷೆಯಲ್ಲಿ ಕೂಡ ಫಲಕಗಳಿರಬೇಕು ಎಂಬುದಕ್ಕೆ ನನ್ನದೂ ಸಂಪೂರ್ಣ ಸಮರ್ಥನೆಯಿದೆ, ಅಂತಹ ಫಲಕಗಳು ಕನ್ನಡದಲ್ಲಿರದೆ ಬರೀ ಇಂಗ್ಲಿಷ್‍ನಲ್ಲಿ ಬರೆದಿದ್ದರೆ ನನಗೂ ಬೇಸರವಾಗುತ್ತದೆ. ಆದರೆ ವಾಹನದ ನಂಬರ್ ಪ್ಲೇಟ್‍ಗಳ ವಿಷಯ ಬಂದಾಗ ನಮ್ಮ ಮುಂದೆ ಇತರ ಗಂಭೀರವಾದ ಸಮಸ್ಯೆಗಳಿವೆ, ಅವನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಯೋಚಿಸಬೇಕೇ ವಿನಃ ಪ್ರಾಂತೀಯ ಭಾಷೆಗಳಲ್ಲಿ ಬರೆದು ಅನೇಕಾನೇಕರನ್ನು ಕಷ್ಟಕ್ಕೀಡುಮಾಡುವುದು ತರವಲ್ಲ ಎಂಬುದು ನನ್ನ ಖಚಿತವಾದ ಅಭಿಪ್ರಾಯ.

ಕೊನೆಯದಾಗಿ ನಂಬರ್ ಪ್ಲೇಟ್ ವಿಚಾರದಲ್ಲಿ ನಮ್ಮೆದುರಿಗೆ ಇರುವ ಇತರ ‘ನೈಜ’ ಸಮಸ್ಯೆಗಳು ಹಾಗೂ ಅವುಗಳ ಪರಿಹಾರದ ಬಗ್ಗೆ ಎರಡು ಮಾತು:

- ಹೆಚ್ಚಿನವರು ಅವರವರಿಗೆ ಬೇಕಾದ ರೀತಿಯಲ್ಲಿ, ಗಾತ್ರದಲ್ಲಿ ನಂಬರ್ ಪ್ಲೇಟ್‍ಗಳನ್ನು ಮಾಡಿಸಿಕೊಳ್ಳುತ್ತಾರೆ. ಇದಕ್ಕೆಲ್ಲಾ ನಿಯಮಗಳಿದ್ದರೂ ಅವನ್ನೆಲ್ಲಾ ತಿಳಿದುಕೊಳ್ಳಲು ಯಾರಿಗೆ ತಾಳ್ಮೆ ಅಥವಾ ಆಸಕ್ತಿ ಇದೆ? ಇದ್ದರೂ ಅವನ್ನು ಗಾಳಿಗೆ ತೂರುವುದರಲ್ಲಿ ಭಾರತೀಯರು ನಿಸ್ಸೀಮರು. ಹೀಗಾಗಿ ಈ ವಿಷಯದಲ್ಲಿ ನಮಗೆ ಮೊಟ್ಟಮೊದಲನೆಯದಾಗಿ ಬೇಕಾದದ್ದು standardization. ಸ್ವತಃ ಸರಕಾರೀ ಸಂಸ್ಥೆ ಅಥವಾ ಗುರುತಿಸಲ್ಪಟ್ಟ ಸಂಸ್ಥೆಗಳು ಎಲ್ಲಾ ನಿಯಮಗಳಿಗೆ ಬದ್ಧವಾದ ರೀತಿಯಲ್ಲಿ ನಂಬರ್ ಪ್ಲೇಟ್‍ಗಳನ್ನು ನಮೂದಿಸಿ ಕೊಟ್ಟರೆ ಈ ಸಮಸ್ಯೆ ಬಹಳ ಸರಳವಾಗಿ ಸರಿ ಹೋಗುತ್ತದೆ. (ಇದು ನಾನು ಅಮೇರಿಕಾದಲ್ಲಿ ಈಗಾಗಲೇ ನೋಡಿರುವ ವಿಚಾರ).

- ಇನ್ನೂ ಒಂದು ಹೆಜ್ಜೆ ಮುಂದು ಹೋಗಿ ಅದರಲ್ಲಿ ಗುರುತಿನ ಇಲೆಕ್ಟ್ರಾನಿಕ್ ಚಿಪ್‍ಗಳನ್ನು ಇಡಬಹುದು. ಫಲಕದಲ್ಲಿ ಕಾಣುತ್ತಿರುವುದು ಸರಿಯಾದ ನಂಬರ್ ಹೌದೇ, ಅದೇ ವಾಹನಕ್ಕೆ ಸಂಬಂಧಿಸಿದ್ದೇ ಎಂಬಿತ್ಯಾದಿ ವಿಷಯಗಳನ್ನು ಪರಿಶೀಲಿಸಲು ಪೋಲೀಸರಿಗೆ ಇದು ಸಹಾಯ ಮಾಡಬಹುದು (ಇದನ್ನು ನಾನು ವಿದೇಶಗಳಲ್ಲೂ ನೋಡಲಿಲ್ಲ, ನನ್ನದೇ ಒಂದು ಐಡಿಯಾ, ಅಷ್ಟೆ - ಇದೇ ರೀತಿಯ ಬೇರೆ ವಿಷಯಗಳನ್ನು ಗಮನಿಸಿ ಸಂಬಂಧಪಟ್ಟ ತಂತ್ರಜ್ಞಾನ ಈಗಾಗಲೇ ಇದೆ ಎಂಬುದು ಮನವರಿಕೆ ಆಗಿರುವುದರಿಂದ ಇದನ್ನು ಹೇಳುತ್ತಿದ್ದೇನೆ).

ಇತಿ,
ಕೃಷ್ಣ ಶಾಸ್ತ್ರಿ

Hi,

"Saving language from being extinct" is an important subject, no doubt, for multiple different reasons. I too am one of the many fans of Kannada language, one of the oldest in India with very rich history and culture. Sorry state of Kannada, unfair treatment to Kannadigas in their own homeland in some situations etc. make me sad, and sometimes inspire me to fight against such things. However, some of our efforts in this direction look childish and also concerning, a good example being writing vehicle number plates in regional languages.

- What should vehicle owners do during inter-state travel? Ex: lets say someone in Karnataka has Kannada number plate. If he has to drive his vehicle to another state, should he get another English number plate in hurry? Or should he keep English one handy in any case? What if other state people too do same thing and enter our state with such number plate? Do we stop them and impose fine? What if it was an emergency for them? And remember that people will misuse the freedom if you start letting them go in case of emergencies.

- The above problem might not look a grave one, lets consider a more serious scenario. Lets say there was an accident, do you think everyone can read or remember such number plate? Not all people present at the spot necessarily know the local language's script. Lets think about visitor/travellers from other states, countries and also about people who have come and settled here but very recently.

If one says a shop naming board should display the name in local/regional language as well as English, I too agree with it completely. But in case of Vehicle number plates, there are other important issues to be addressed. We need to think how to resolve those instead of writing number plates in regional languages and making life difficult for lot of people.

Lastly, just few thoughts about 'real' problems around number plates:

- Many people get the number plates written in their own way, without caring about size, font. People are least interested in knowing the rules and regulations around the same, and even if they know they are experts in brushing them aside. What we need here is standardization. A government organization or a government recognized organization should prepare number plates strictly as per the rules, thus bringing in standardization. This is a simple solution to this problem, something which is a working model as I have seen in USA.

- Taking a step further, perhaps even electronic identification chips can be embedded so that police can easily verify if the displayed number is correct, and belongs to the apprpriate vehicle etc. (Though I have not seen this anywhere, I know that related technology exists and is already implemented in comparable scenarios, hence just suggesting)

Regards,
Krishna Shastry.

8 comments:

Anonymous said...

I completely agree with this.

Anand said...

Continue to post regularly and on subjects that matter and need discussion. Happy Blogging.

ಚೆ೦ಬಾರ್ಪು said...

As far as i know many rules already exist on the topics discussed (like format of number plate, English letters in vehicles traveling inter-state etc). But they are not enforced strictly as any other law in our country..

Ashwatha said...

ಶಾಸ್ತ್ರಿ,

ಕನ್ನಡದಲ್ಲಿ ಮಾತ್ರ ಬರೆದ ನ೦ಬರ್ ಪ್ಲೇಟ್ ಗಳಲ್ಲಿ ನೀನು ಹೇಳುವ ತೊಂದರೆ ಇರುವುದು ಹೌದು; ಆದರೆ ಇದಕ್ಕೂ ಸಹ "ರೈಲ್ವೆ ಸಿಸ್ಟಮ್" ಏಕೆ ಉಪಯೋಗಿಸಬಾರದು? ಅಂದರೆ ವಾಹನದ ಹಿಂದೆ ಮತ್ತು ಮುನೇ - ಎರಡು ಕಡೆ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಬರೆಯಬಹುದಲ್ಲವೇ? ಮೋಟೊರ್ ಬೈಕ್ ಗಳಲ್ಲಿ ಒಟ್ಟು ನಾಲ್ಕು ಪ್ಲೇಟ್ ಗಳನ್ನು ಹಾಕುವುದಕ್ಕೆ ಸ್ವಲ್ಪ ಜಾಗ ಕಡಿಮೆಯಾದರೂ ಸಹ ಸಾಧ್ಯವಾಗಬೇಕು ಅನ್ನಿಸುತ್ತೆ. ಈಗಾಗಲೇ ಸುಮಾರು ಜನ ಒಂದು ಕಡೆ ಇಂಗ್ಲಿಷ್ ಮತ್ತು ಒಂದು ಕಡೆ ಕನ್ನಡದಲ್ಲಿ ಪ್ಲೇಟ್ ಗಳನ್ನು ಹಾಕಿಕೊಂಡಿರುತ್ತಾರೆ. ಇದೆ ಐಡಿಯಾ ಅನ್ನು extend ಮಡಿದ ಹಾಗಾಗುತ್ತದೆ ಅಷ್ಟೇ.

--ಅಶ್ವತ್ಥ.

ಕೃಷ್ಣ ಶಾಸ್ತ್ರಿ - Krishna Shastry said...

@ಅಶ್ವತ್ಥ: ಎರಡೂ ಭಾಷೆಗಳಲ್ಲಿ ಬರೆದರೆ ಅಡ್ಡಿಯಿಲ್ಲ ಎಂದನಿಸುತ್ತದೆ, ಆದರೆ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳೋಣ. ಇತರ ವಾಹನಗಳ ನಂಬರ್ ಏನು ಎಂಬುದನ್ನು ಸಾಮಾನ್ಯವಾಗಿ ನಾವು ಓದುವ ಪ್ರಸಂಗ ಬರುತ್ತದೆಯೇ? ಇಲ್ಲ, ಯಾಕೆಂದರೆ ಇದು ಇತರ ಯಾವುದೇ ‘ಮಾಹಿತಿ’ಗಳಿಗಿಂತ ಭಿನ್ನ. ಬಹುತೇಕವಾಗಿ ಅಫಘಾತವಾದಾಗಲೋ, ಅಥವಾ ರಸ್ತೆ ಕಾನೂನು ಮೀರಿದ್ದಕ್ಕಾಗಿ ಇನ್ನೊಬ್ಬರ ಮೇಲೆ ದೂರು ಕೊಡಬೇಕಾದಗಲೋ, ಅಥವಾ ನಮ್ಮನ್ನು ಕರೆದೊಯ್ಯಲು ಬರುವ ವಾಹನವನ್ನು ಗುರುತಿಸಲೋ ನಾವು ಇನ್ನೊಬ್ಬರ ವಾಹನದ ನಂಬರ್ ಪ್ಲೇಟ್ ಓದುತ್ತೇವೆ. ಇಂತಹ ಹೆಚ್ಚಿನ ಸಂದರ್ಭಗಳಲ್ಲಿ ಅದನ್ನು ಓದಲು ಇರುವ ಸಮಯ ಅತ್ಯಲ್ಪ, ಕೆಲವೊಮ್ಮೆ ಅರೆಕ್ಷಣವೂ ಇರಲಾರದು, ಹೀಗಾಗಿ ಪ್ರಾಂತೀಯ ಭಾಷೆಯಲ್ಲಿ ಕೂಡ ಮಾಹಿತಿಯನ್ನು ಪ್ರದರ್ಶಿಸಿ ಓದುಗರ ಕೆಲಸವನ್ನು ತ್ರಾಸದಾಯಕಗೊಳಿಸುವುದು ತರವಲ್ಲ ಎಂದು ನನ್ನ ಅಭಿಪ್ರಾಯ. ಇರಲಿ, ದ್ವಿಭಾಷೆಯಲ್ಲಿ ಮಾಡಿದರೆ ಅದನ್ನು ನಾನು lesser of the evils ಎಂದು ಪರಿಗಣಿಸಿ ಸುಮ್ಮನಾಗಬಲ್ಲೆ :-)

Anonymous said...

I too agree with the opinion. It's really a serious matter. I think we have enough law, but it's only the lack of implementation. Corruption is one of the root causes.

P. Basu said...

Imagine no. plates in Punjab written in Gurmukhi, in Bengal in Bengali, in Orissa in Oriya, in Kerala in Malayali and so on and so forth! And Hindi no. plates will of course be there en masse. Probably the law enforcers will commit mass suicide!

Subrahmanya Hegde said...

Sometime even i thought of (just thought :-) ) electronic chips on number plates.. But, we Indians will duplicate it for sure..;-)

Post a Comment