Tuesday, May 7, 2002

ಅನುಭವದ ಮಾತು


೦೭-ಮೇ-೨೦೦೨,
ಬೆಂಗಳೂರು.
ಅನುಭವದ ಮಾತು
-------------------
ನನ್ನೊಳಗೇ ನೆಲೆಸಿದರೂ ಕೈಗೆ ಸಿಗದೆ,
ಹೃದಯವ ಕದ್ದು ಎಲ್ಲಿಗೆ ಹೋದೆ?
ಕೇಳುತ್ತಿರುವೆಯಾ ನನ್ನ ಮಾತುಗಳ ಹೆಣ್ಣೇ,
ನೋಡು ನೀನಿಲ್ಲದೆ ನಾ ಪಡುತ್ತಿರುವ ಬವಣೆ!

ನನ್ನ ಹೃದಯದಲ್ಲಿ ನಿನ್ನ ಸ್ಥಾನವು ಶಾಶ್ವತ,
ನಿನಗಾಗಿ ನನ್ನ ಮನವು ಸದಾ ಚಿಂತಾಕ್ರಾಂತ.
ತುಂಬಿದೆ ನೀ ಉಸಿರಿನಲ್ಲಿ ಹೊಸ ಉಲ್ಲಾಸ,
ನಿನ್ನ ಚಿಂತೆ ಬಿಟ್ಟರೆ ನನಗಿನ್ನೇನು ಕೆಲಸ?!

ಓ ನಲ್ಲೆ, ನಾ ನಿನ್ನ ಮನವ ಬಲ್ಲೆ!
ಪ್ರೇಮಿಸುವೆ ನೀನೂ ನನ್ನನ್ನು ಮನದಲ್ಲೇ.
ಕೃಷ್ಣ ಶಾಸ್ತ್ರಿ ಸಿ.

1 comment: