Sunday, May 26, 2002

ತಾತ್ಕಾಲಿಕ


೨೦೦೨ ಜೂನ್ ತಿಂಗಳ ಮಯೂರದ ‘ಕಲ್ಪನೆ’ ವಿಭಾಗಕ್ಕೆ ಬರೆದ ಕವಿತೆಯಿದು. ನಾನು ಬರೆದ ಕವಿತೆ ಪ್ರಕಟವಾಗಲಿಲ್ಲ, ಬಹುಮಾನಿತ ಕವಿತೆಗಳನ್ನೂ ಕೊನೆಯಲ್ಲಿ ಹಾಕಿದ್ದೇನೆ :-)

ಕಲ್ಪನೆಗೆ ಸೂಚಿಸಿದ ಚಿತ್ರ



೨೬-ಮೇ-೨೦೦೨,
ಕಾಸರಗೋಡು.
ತಾತ್ಕಾಲಿಕ
-------------------
ರುಂಡವಿಲ್ಲದ ಶಿಲಾಬಾಲಿಕೆಯ ನೋಡಿ
ಮಮ್ಮಲ ಮರುಗಿತು ಎಳೆಯ ಹೃದಯಗಳ ಜೋಡಿ.

ಕಲ್ಪನೆಯು ಗರಿಗೆದರಿತು
ಮುಗ್ಧತನ ಮೆರೆಯಿತು.
ಪುನಃ ಶಿಲ್ಪಕೆ ಜೀವ ತುಂಬಲು
ಗತವೈಭವವ ಬಿಂಬಿಸಲು
ಪಣತೊಟ್ಟಳು ಬಾಲೆ.

ಕೊಟ್ಟಳವಳು ಸ್ವಂತ ಶಿರವ
ಬೆಕ್ಕಸಬೆರಗಾಯಿತು ಮುಂದಿದ್ದ ಹುಡುಗನ ಜೀವ.

ಬೆಳಗಿತು ಕಲ್ಪನೆಯ ಹಣತೆ
ನೋಡಿ! ವಿಶಿಷ್ಟ ಪರಿಪೂರ್ಣತೆ.
ಕೃಷ್ಣ ಶಾಸ್ತ್ರಿ ಸಿ.


ಬಹುಮಾನಿತ ಕವಿತೆಗಳು 


No comments:

Post a Comment