About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Tuesday, March 5, 2002

ವಿಧಿ


೦೫-ಮಾರ್ಚ್-೨೦೦೨,
ಬೆಂಗಳೂರು.
ವಿಧಿ
------
ಕಣ್ಣಲ್ಲೇ ಮಾತನಾಡಿ
ಮಾತಿನಲ್ಲೇ ಮೋಡಿ ಮಾಡಿ
ಕೊನೆಗೆ ಕನಸಾಗಿಬಿಟ್ಟೆ ,
ಮೌನದ ಮೋಡದಲ್ಲಿ ಮರೆಯಾಗಿಬಿಟ್ಟೆ.

ಸವಿಯನ್ನು ತೋರಿಸಿಕೊಟ್ಟು
ಕರೆದಾಗಲೆಲ್ಲಾ ಓಗೊಟ್ಟು
ಕೊನೆಗೆ ಕಹಿಯಾದ ನೆನಪನು ಇತ್ತೆ ,
ಪುನಹ ಸಿಗಲಾರದಷ್ಟು ದೂರ ಹೋಗಿಬಿಟ್ಟೆ.

ಹೂವಿನ ಸುವಾಸನೆಯಾಗಿ, ಹಕ್ಕಿಯ ಚಿಲಿಪಿಲಿಯಾಗಿ
ನನ್ನ ಬರಡು ಬದುಕಿಗೆ ತಂದೆ ಹೊಸ ಜೀವ
ಈಗ ಹೂವೂ ಬಾಡಿತು, ಹಕ್ಕಿಯೂ ಸತ್ತಿತು ,
ನೀನಿಲ್ಲದೆ ಬಳಲಿ ಬೆಂಡಾಯಿತು ಜೀವ.

ಆನಂದ ಸಾಗರದಲ್ಲಿದ್ದೆವು ನಾವು
ಬೇರ್ಪಡಿಸಿತು ನಮ್ಮಿಬ್ಬರನ್ನು ಸಾವು.
ಕೃಷ್ಣ ಶಾಸ್ತ್ರಿ ಸಿ.

1 comments:

Anonymous said...

Though a sad tone, very nicely composed.Schooling from BEMHS I think has inspired many into litarary activity. I too have a collection of mine. Have posted few in Sulekha.com. as madysandy. May be you also can join the bloggers there... as well as read some good bloggers.Dr.Sandhya.I

Post a Comment