tag:blogger.com,1999:blog-1570601480010352989.post3908938995086432361..comments2023-10-18T02:02:09.554-07:00Comments on ತೆರೆದ ಪುಟಗಳು - Open Pages: ಮಂಗಳಾರತಿ ಮತ್ತು ತೀರ್ಥದ ಹಿಂದೆ ಇರುವ ವಿಜ್ಞಾನಕೃಷ್ಣ ಶಾಸ್ತ್ರಿ - Krishna Shastryhttp://www.blogger.com/profile/00602716408042486823noreply@blogger.comBlogger6125tag:blogger.com,1999:blog-1570601480010352989.post-46883852086579700512012-01-19T04:23:35.340-08:002012-01-19T04:23:35.340-08:00ಸುಬ್ರಹ್ಮಣ್ಯ ಅವರೇ, ನಿಮ್ಮ ಮುಕ್ತ ಪ್ರತಿಕ್ರಿಯೆಗೆ ಧನ್ಯವಾ...ಸುಬ್ರಹ್ಮಣ್ಯ ಅವರೇ, ನಿಮ್ಮ ಮುಕ್ತ ಪ್ರತಿಕ್ರಿಯೆಗೆ ಧನ್ಯವಾದಗಳು.

ನಾನು ಹೇಳುವುದೂ ಅಂತಿಮ ಎಂಬ ಹಠ ನನಗಿಲ್ಲ, ಆದರೆ ‘ವೈಜ್ಞಾನಿಕ’ ಎನ್ನಲು ಅನೇಕ ಮಾನದಂಡಗಳಿವೆ, ಅವನ್ನು ಪರಿಗಣಿಸದೆಯೇ ವೈಜ್ಞಾನಿಕ ಎಂದು ಹೇಳಿದರೆ ಅದು ಅನರ್ಥಕ್ಕೀಡುಮಾಡುತ್ತದೆ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ನಿಮ್ಮ ಉದ್ದೇಶ ಒಳ್ಳೆಯದಿರಬಹುದು, ಅದರ ಬಗ್ಗೆ ನನ್ನ ಆಕ್ಷೇಪವಿಲ್ಲ, ಬದಲಾಗಿ ಮೆಚ್ಚುಗೆ ಇದೆ.

ತಪ್ಪು ತಿಳಿದುಕೊಳ್ಳಬೇಡಿ, ನೀವು ನಿಮ್ಮ ಲೇಖನವನ್ನು ಅಮೂಲಾಗ್ರವಾಗಿ ಪುನರ್-ಪರಿಶೀಲಿಸಿ ತಿದ್ದುವುದು ಉತ್ತಮ ಎಂದು ನನ್ನ ಅಭಿಪ್ರಾಯ.ಕೃಷ್ಣ ಶಾಸ್ತ್ರಿ - Krishna Shastryhttps://www.blogger.com/profile/00602716408042486823noreply@blogger.comtag:blogger.com,1999:blog-1570601480010352989.post-89559535226520052822012-01-12T10:09:45.489-08:002012-01-12T10:09:45.489-08:00ಇವೆಲ್ಲವನ್ನೂ ಸಮಾಧಾನದಿಂದ ನೋಡಬೇಕಾಗಿದೆ ಅಷ್ಟೆ. ಗೊಂದಲಗಳು...ಇವೆಲ್ಲವನ್ನೂ ಸಮಾಧಾನದಿಂದ ನೋಡಬೇಕಾಗಿದೆ ಅಷ್ಟೆ. ಗೊಂದಲಗಳು ಯಾವುದರಲ್ಲಿ ಇಲ್ಲ ?. ತಿಂದರೆ ಆರೋಗ್ಯ, ಅತಿಯಾಗಿ ತಿಂದರೆ ಅನಾರೋಗ್ಯ. ಹಾಗಾಗಿ ತಿನ್ನುವುದನ್ನೇ ವಿರೋಧಿಸಲು ಆಗುವುದಿಲ್ಲ. ತಿಳಿದು ತಿನ್ನಬೇಕಾದಷ್ಟನ್ನು ತಿನ್ನೋಣ ಅಲ್ಲವೆ ?.

ಧನ್ಯವಾದಗಳುSubrahmanyahttps://www.blogger.com/profile/03752989563162877894noreply@blogger.comtag:blogger.com,1999:blog-1570601480010352989.post-84593259892545118702012-01-12T10:06:54.218-08:002012-01-12T10:06:54.218-08:00ಕೃಷ್ಣಶಾಸ್ತ್ರಿಗಳೆ,
ಆ ಲೇಖನವನ್ನು ನಾನು ಬರೆದದ್ದು ಮೊದಮೊ...ಕೃಷ್ಣಶಾಸ್ತ್ರಿಗಳೆ,

ಆ ಲೇಖನವನ್ನು ನಾನು ಬರೆದದ್ದು ಮೊದಮೊದಲು ನಾನು ಬ್ಲಾಗ್ ಬರೆಯಲು ಆರಂಭಿಸಿದಾಗ :), ಹಾಗಾಗಿ ತುಂಬ ಚಿಕ್ಕದಾಗಿ ವಿವರಿಸಿದ್ದೇನೆ. ಆಗಿನ್ನೂ ಎಷ್ಟು ಬರೆಯಬೇಕು/ಬಾರದು ಎನ್ನುವ ಅರಿವು ನನಗಿರಲಿಲ್ಲ. ಇರಲಿ, ಇನ್ನು ನಿಮ್ಮ ಪ್ರಶ್ನೆಗಳಿ ಉತ್ತರಿಸುವ ಸಾಹಸ ಮಾಡುತ್ತೇನೆ. ಇದೇನು ಅಂತಿಮವಲ್ಲ, ತಪ್ಪಿದ್ದರೆ ನೀವೂ ತಿದ್ದಿ.

೧) ಇಲ್ಲಿ ಶಕ್ತಿ ಎನ್ನುವುದು ನಂಬಿಕೆ. ಹರಿಯುವ ನೀರು ತನ್ನ ಜೊತೆ ಮಿನರಲ್ ಗಳನ್ನು ತರುವುದು ಪ್ರಮಾಣೀಕೃತವಾಗಿರುವ ಸಂಗತಿಯೇ ಅಲ್ಲವೆ. ಸಹ್ಯಾದ್ರಿಯ ಲೋಹದದಿರ ಕಣಿವೆಗಳಲ್ಲಿ ಹರಿದುಬರುವ ತುಂಗೆಯ ನೀರು ’ತುಂಗಾ ಪಾನ’ ವೆಂದೇ ಪ್ರಸಿದ್ದವಾದುದು. ಖನಿಜಾಂಶಗಳು ಇರುತ್ತದೆ. ಅದು ಪ್ರಕೃತಿ. ಎಷ್ಟು ಇರುತ್ತದೆ ಎಂದರೆ...ಮನುಷ್ಯ ಪ್ರಕೃತಿಯನ್ನು ಎಷ್ಟು ಹಾಳು ಮಾಡಿದ್ದಾನೆ/ ಮಾಡುತ್ತಿದ್ದಾನೆ ಎನ್ನುವುದನ್ನೂ ಗಣಿಸಬೇಕಾಗುತ್ತದೆ. ನಾವು ಮಾಡಿರುವ ಕರ್ಮಕಾಂಡಾಕ್ಕೆ ಪ್ರಕಿತಿಯು ಹೊಣೆಯಾಗಲಾರದು.

೨)ಬರೀ ಹಾಲಲ್ಲ , ಹಾಲು ಮೊಸರು ತುಪ್ಪ ಜೇನುತುಪ್ಪ ಸಕ್ಕರೆ ಪಂಚಾಮೃತ. ಮೂರೂ ಸೇರಿದರೆ ಕೊಬ್ಬಿನ ಗುಡಾಣವೇ ಆಗುತ್ತದೆ ಎನ್ನುವುದು ವಿಜ್ಞಾನದ ಪಾಠವೆ ಆಗಿದೆ. ಮೊಸರು ಹುಳಿಯಾಗಿ ಅಸಿಡಿಗೆ ದಾರಿಯಾಗುತ್ತದೆ. ಹೀಗೆ ಇನ್ನೂ ಬಹಳಷ್ಟು ಇದೆ. ವೇದಗಳೇ ನಮಗೆ ಪರಮ ಪ್ರಮಾಣವಾಗಿರುವುದರಿಂದ ಅಲ್ಲಿ’ ಆಪ’ ಕ್ಕೇ ಪ್ರಾತಿನಿಧ್ಯವಿರುವುದು ಕಂಡು ಬರುತ್ತದೆ. ಗಂಗಾಜಲಮುತ್ತಮಂ !. (ಈಗ ಕೆಟ್ಟಿರೋದಕ್ಕೆ ಭಾಗೀರತಿಯನ್ನು ಹೊಣೆ ಮಾಡಬೇಡಿ ಸ್ವಾಮಿ, ಕೆಡಿಸಿರೋದು ನಾವೆ !).

೩)ಲೋಹಗಳು ಅಯಾನುಗಳನ್ನು ಬಿಡುಗಡೆ ಮಾಡುತ್ತವೆ ಮತ್ತು ಅದನ್ನು ಬ್ಯಾಕ್ಟೀರಿಯಾ ವಿರುಧ್ಧವಾಗಿ ಬಳಸಬಹುದು (ಈಗಿನ ಎಷ್ಟೋ ’ಮಾತ್ರೆ’ ಗಳಲ್ಲಿ ಬಳಕೆಯಾಗುತ್ತಲೇ ಇದೆ) ಎನ್ನುವುದು ವೈಜ್ಞಾನಿಕವಾಗಿಯೇ ಪ್ರಮಾಣವಾಗಿರುವುದು. ಇನ್ನು ಮಂತ್ರೋಚ್ಚಾರಣೆಯು ಪಾವಿತ್ರ್ಯತೆಯನ್ನು ಹೆಚ್ಚಿಸುವುದರ ಜೊತೆಗೆ ಮಾನಸಿಕ ನೆಮ್ಮದಿಗೂ ಕಾರಣವಾಗುತ್ತದೆ ಎಂದು ಒಪ್ಪಬಹುದು. ಇದನ್ನು ಬಿಟ್ಟಿಲ್ಲ. ಮೊದಲೇ ಹೇಳಿದಂತೆ ಮೊದಮೊದಲ ಬರಹ :).Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-1570601480010352989.post-24224637335086350962011-12-01T06:12:45.217-08:002011-12-01T06:12:45.217-08:00ಗೊ೦ದಲಮಯ ಜಗತ್ತು..ಯಾವುದನ್ನೂ ವೈಜ್ನಾನಿಕ ಇಲ್ಲದೆ ನ೦ಬಬಾರದ...ಗೊ೦ದಲಮಯ ಜಗತ್ತು..ಯಾವುದನ್ನೂ ವೈಜ್ನಾನಿಕ ಇಲ್ಲದೆ ನ೦ಬಬಾರದು ಅ೦ದುಕೊ೦ಡರೂ ಅದು ಅಸಾಧ್ಯ...Anonymousnoreply@blogger.comtag:blogger.com,1999:blog-1570601480010352989.post-80489431168405509542011-12-01T01:30:01.706-08:002011-12-01T01:30:01.706-08:00ಈ ರೀತಿಯ ಅಶುಧ್ಧ ತೀರ್ತ ಕುಡಿದು ಎಷ್ಟು ಮಂದಿ ಸತ್ತರು ಎಂಬು...ಈ ರೀತಿಯ ಅಶುಧ್ಧ ತೀರ್ತ ಕುಡಿದು ಎಷ್ಟು ಮಂದಿ ಸತ್ತರು ಎಂಬುದನ್ನೂ ತಾವು ವಿವರಿಸಿದ್ದರೆ ಚೆನ್ನಾಗಿತ್ತು... >Anonymousnoreply@blogger.comtag:blogger.com,1999:blog-1570601480010352989.post-3265756744232356442011-12-01T01:00:11.420-08:002011-12-01T01:00:11.420-08:00ಚಿಂತನಾತ್ಮಕ ಬರಹ...ಯೋಚನೆಗೆ ಹಚ್ಚುತ್ತೆ..ಯೋಚಿಸುವ ಮನಸ್ಸಿ...ಚಿಂತನಾತ್ಮಕ ಬರಹ...ಯೋಚನೆಗೆ ಹಚ್ಚುತ್ತೆ..ಯೋಚಿಸುವ ಮನಸ್ಸಿರುವವರಿಗೆ ಮಾತ್ರ...ವೆಂಕಟಕೃಷ್ಣ ಕೆ ಕೆ ಪುತ್ತೂರುhttps://www.blogger.com/profile/02818276304375884860noreply@blogger.com