ಇತ್ತೀಚೆಗೆ ಬೆಂಗಳೂರಿನಲ್ಲಿರುವ ನನ್ನ ವೀಗನ್ ಮಿತ್ರರೊಬ್ಬರು ತಮ್ಮ ಮದುವೆಯ ಸಮಾರಂಭದಲ್ಲಿ ಬಂದವರಿಗೆ ವೀಗನ್ ಔತಣವನ್ನು ಉಣಬಡಿಸಿದ್ದರು. ದುರದೃಷ್ಟವಶಾತ್ ನನಗೆ ಹೋಗಲಾಗಲಿಲ್ಲ, ಆದರೆ ಅವರ ದಿಟ್ಟತನವನ್ನು ಹಾಗೂ ಸೈದ್ಧಾಂತಿಕ ಬದ್ಧತೆಯನ್ನು ನೋಡಿ ದೂರದಿಂದಲೇ ಮನಸಾರೆ ಶುಭ ಹಾರೈಸಿದೆ. ಈಗ ಇನ್ನೊಂದು ಯುವಜೋಡಿ (ಪ್ರೀತಿ-ರಾಘವ್) ವೀಗನ್ ಮದುವೆ ಆಚರಿಸಲು ಸನ್ನದ್ಧರಾಗಿದ್ದಾರೆ. ಈ ಉತ್ತಮ ಬೆಳವಣಿಗೆಯನ್ನು ನೋಡಿ ತುಂಬಾ ಖುಷಿಯಾಯಿತು, ಹೀಗಾಗಿ ಇದರ ವಿವರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
“ಏನಿದು ವೀಗನ್ ಮದುವೆ ಅಂದರೆ”
ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡಿರಾ? ವೀಗನಿಸಂ ಎಂದರೆ ಸಾಧ್ಯವಾದಷ್ಟೂ ಯಾವುದೇ ಪ್ರಾಣಿ-ಪಕ್ಷಿಗಳಿಗೆ
ಹಾನಿ ಮಾಡದೆ ಬದುಕುವ ಅಹಿಂಸಾತ್ಮಕ ಜೀವನಶೈಲಿ. ಹೆಚ್ಚಿನ ಮಾಹಿತಿಗಾಗಿ ನಾನು ಈ ಮೊದಲು ಬರೆದ
ಕಿರುಪರಿಚಯವನ್ನು ಓದಬಹುದು: ವೀಗನಿಸಂ ಎಂದರೆಏನು? ಒಂದು ಚಿಕ್ಕ ಪರಿಚಯ
ಹಾಗಿದ್ದರೆ ಮದುವೆಯನ್ನು ಹೇಗೆ
ವೀಗನ್ ಮಾಡಬಹುದು? ತುಸು ನೋಡೋಣವಂತೆ.
- ಇವರು ಮದುಮಗಳಿಗೋ ಅಥವಾ
ಬಂಧುಮಿತ್ರರಿಗೆ ಕೊಡಲೆಂದೋ ರೇಷ್ಮೆ ಸೀರೆಗಳನ್ನು ಖರೀದಿಸುವುದಿಲ್ಲ, ಮದುಮಗನೂ ಅಷ್ಟೆ – ರೇಷ್ಮೆ
ಪಂಚೆ ಉಡುವ ಪ್ರಶ್ನೆಯೇ ಇಲ್ಲ
- ಪ್ರಾಣಿಗಳ ಮೇಲೆ ಪರೀಕ್ಷೆ
ಮಾಡಿದಂತಹ ಯಾವುದೇ ಪ್ರಸಾಧನ ಸಾಮಗ್ರಿಗಳನ್ನು (ಮೇಕಪ್!) ಮದುಮಕ್ಕಳು ಉಪಯೋಗಿಸುವುದಿಲ್ಲ
- ವಜ್ರಕ್ಕೆ ಅನೇಕ ರೀತಿಯಲ್ಲಿ
ಅಮಾನವೀಯ ಹಿನ್ನೆಲೆ ಎಂಬ ಕಾರಣಕ್ಕೆ ವಜ್ರಾಭರಣಗಳನ್ನು ಕೂಡ ಇವರು ಬದಿಗಿಡುತ್ತಿದ್ದಾರೆ
- ಹಳೆಯ ಕ್ರಮ ಎಂದ ಮಾತ್ರಕ್ಕೆ
ಎಲ್ಲವೂ ಸರಿ ಇರಲೇಬೇಕಿಲ್ಲ ಎಂಬ ವಿಶ್ವಾಸದೊಂದಿಗೆ ಇವರು ಧಾರ್ಮಿಕ ವಿಧಿಗಳಲ್ಲಿ ಹೋಮಕ್ಕೆ ತುಪ್ಪ
ಸುರಿಯುವುದಿಲ್ಲ
- ಔತಣದಲ್ಲಿ ಪ್ರಾಣಿಮೂಲದ ಹಾಲು-ಮೊಸರಿಗೆ
ಬದಲಾಗಿ ಸಸ್ಯಮೂಲದ ಪದಾರ್ಥಗಳನ್ನು ಬಳಸಿ ಅಡುಗೆ ಮಾಡುವಂತೆ ನಿರ್ದೇಶಿಸಿದ್ದಾರೆ
- ಆಶೀರ್ವಾದವೇ ಉಡುಗೊರೆ ಎನ್ನುವುದರ
ಜೊತೆಗೆ ಪ್ರಾಣಿಹಕ್ಕುಗಳ ಸಂರಕ್ಷಣೆಗಾಗಿ ಹೋರಾಡುವ ಸಂಸ್ಥೆಗಳಿಗೆ ದಾನ ಮಾಡಲು ಪ್ರೇರೇಪಿಸುತ್ತಾರೆ
- ಬರುವ ಅತಿಥಿಗಳಲ್ಲಿಯೂ ಸವಿನಯಪೂರ್ವಕವಾಗಿ
“ನಮ್ಮ ಸಿದ್ಧಾಂತವನ್ನು ಗೌರವಿಸಿ ನೀವು ಕೂಡ ರೇಷ್ಮೆ ಬಟ್ಟೆಗಳನ್ನು ಧರಿಸದೇ, ಚರ್ಮದ
ಚಪ್ಪಲಿಗಳನ್ನು ಹಾಕದೇ ಅಹಿಂಸಾತ್ಮಕ ದಿರಿಸುಗಳಲ್ಲಿ ಬರಬೇಕೆಂದು ವಿನಂತಿ” ಎಂದು
ಬಿನ್ನವಿಸುತ್ತಾರೆ
- ಅತಿಥಿಗಳಿಗೆ ಸ್ವಾದಿಷ್ಟಕರ ಹಾಗೂ
ಆರೋಗ್ಯಕರವಾದ ಸಂಪೂರ್ಣ ಸಸ್ಯಮೂಲದ ಆಹಾರವನ್ನು ಬಡಿಸುತ್ತಾರೆ
ಹೆಚ್ಚಿನ ಮಾಹಿತಿಗಾಗಿ
ನೇರವಾಗಿ ಅವರ ಮದುಗೆಂದೇ ವಿಶೇಷವಾಗಿ ತಯಾರಿಸಿದ ಅಂತರ್ಜಾಲ ತಾಣವನ್ನು ನೋಡಿರಿ. ಅತ್ಯಂತ ಕಾಳಜಿ
ಹಾಗೂ ಒಲವಿನಿಂದ ತಯಾರಿಸಿದ ಈ ತಾಣವು ನಿಜಕ್ಕೂ ನೋಡಬೇಕಾದದ್ದೇ.
http://www.ewedding.com/sites/PreethiRaghav (password: GoVegan)
ಒಲವಿನಿಂದೊಡಗೂಡಿದ ಹೊಸ ಜೀವನವು
ಇತರ ಅನೇಕ ಜೀವಿಗಳ ಸಾವು-ನೋವಿನ ತಳಹದಿಯ ಮೇಲೆ ಶುರುವಾಗಬೇಕೇ ಅಥವಾ ವಿಶ್ವಪ್ರೇಮದ ಸಂದೇಶವನ್ನು ಸಾರುತ್ತಾ
ಎಲ್ಲರ ಮನಸ್ಸಿನಲ್ಲಿ ಅದರ ಬೀಜಗಳನ್ನು ಬಿತ್ತುತ್ತಾ ಶುರುವಾಗಬೇಕೇ? ಎಂಬೀ ಪ್ರಶ್ನೆಗೆ ಉತ್ತರವು ಪ್ರೀತಿ
ಹಾಗೂ ರಾಘವ್ಗೆ ಸಿಕ್ಕಿದೆ, ನೀವೇನಂತೀರಿ?
ಇದನ್ನೋದಿ ನಿಮಗೂ ಖುಷಿಯಾದರೆ ಈ ಯುವಜೋಡಿಯ ಪ್ರೇಮಭರಿತ ಹಾಗೂ ಸುದೀರ್ಘ
ದಾಂಪತ್ಯಕ್ಕಾಗಿ ಹಾರೈಸಿ ಒಂದೆರಡು ಮಾತನ್ನು ಅವರ ತಾಣದಲ್ಲಿ ಬರೆಯಿರಿ, ಅವರ ಪ್ರಯತ್ನಗಳಿಗೆ ಒಂದು
ಚಪ್ಪಾಳೆ ತಟ್ಟಿ :-)
This comment has been removed by the author.
ReplyDeleteAkala halu karedu, balasikolluvudaralli(karuvige bekastu ittu) himse enide? Adannu balasabahudalla??
ReplyDeletepassword enu? its asking for password to read the content
ReplyDeleteThis comment has been removed by the author.
ReplyDelete@ranjan: password - GoVegan
ReplyDelete@Chidanand Shastri
ReplyDeleteದನದಿಂದ ನಾವು ಹಾಲು ಪಡೆಯುವ ವಿಚಾರ ನೀವು ಹೇಳಿದಷ್ಟು ಸರಳವಾಗಿಲ್ಲ. ಮೇಲ್ನೋಟಕ್ಕೆ ಎಲ್ಲವೂ ಮುಗ್ಧ, ಸಾತ್ವಿಕ ಎಂದು ಕಂಡರೂ ಕೂಡ ಇದರ ವಸ್ತುಸ್ಥಿತಿಯ ಬಗ್ಗೆ ಆಲೋಚನೆ ಮಾಡುತ್ತಾ ಹೋದಂತೆ ವಿವಿಧ ರೀತಿಗಳಲ್ಲಿ ಇದು ಅನೈತಿಕ ಎಂಬುದು ನಿಚ್ಚಳವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಾನು ಹಿಂದೊಮ್ಮೆ ಬರೆದ ಈ ಕೆಳಗಿನ ಲೇಖನವನ್ನು ಓದಿ, ಅದರಲ್ಲಿರುವ ಪ್ರಶ್ನೋತ್ತರಗಳನ್ನೂ ಓದಿ ಎಂದು ವಿನಂತಿ.
ದನ, ನಮ್ಮ ಗುಲಾಮ ದೇವರು!
http://krishnashastry.blogspot.in/2011/05/blog-post.html#Kannada
Krishna, thank you verymuch for writing this. It is really inspiring towards veganism.
ReplyDelete@ವಿ.ರಾ.ಹೆ. Glad to know that this is inspiring towards veganism. All the credit goes to Preethi and Raghav :-)
ReplyDelete